ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 18 2025: ಖ್ಯಾತ ಗಾಯಕಿ ಮತ್ತು ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋ ಮೂಲಕ ಪ್ರಸಿದ್ಧಿಗೆ ಬಂದಿದ್ದ ಸುಹಾನಾ ಸಯ್ಯದ್ ಅವರು ತಮ್ಮ ಬಹುಕಾಲದ ಗೆಳೆಯ ನಿತಿನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸರಳ ಮತ್ತು ಸಾಂಪ್ರದಾಯಿಕವಾಗಿ ಮಂತ್ರ ಮಾಂಗಲ್ಯ ವಿಧಾನದ ಮೂಲಕ ಈ ಜೋಡಿ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದೆ.
ಕಳೆದ 16 ವರ್ಷಗಳಿಂದ ಗೆಳೆಯರಾಗಿದ್ದ ಸುಹಾನಾ ಮತ್ತು ನಿತಿನ್ ಅವರು, ನಗರದ ಕನಕಪುರ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟರ್‌ನಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವಿವಾಹವಾದರು. ಸುಹಾನಾ ಸಯ್ಯದ್ ಅವರ ಕೈ ಹಿಡಿದಿರುವ ನಿತಿನ್ ರಂಗಭೂಮಿಯ ಕಲಾವಿದರಾಗಿದ್ದಾರೆ ಎಂಬುದು ವಿಶೇಷ. ತಮ್ಮ ವಿವಾಹದ ಘೋಷಣೆಗೂ ಮುನ್ನ ಸುಹಾನಾ ಅವರು ಸಾಮಾಜಿಕ ಜಾಲತಾಣದಲ್ಲಿ ನಿತಿನ್ ಅವರೊಂದಿಗಿನ ಫೋಟೋ ಹಂಚಿಕೊಂಡು ಭಾವನಾತ್ಮಕ ಸಂದೇಶವನ್ನು ಬರೆದಿದ್ದರು.Sa Re Ga Ma Pa Suhana Sayeed

ಪ್ರತಿ ಜೀವಿಯ ಅನ್ವೇಷಣೆ ಪ್ರೇಮಕ್ಕಾಗಿಯೇ. ಪ್ರೇಮಕ್ಕೆ ಕಾರಣ ಇಲ್ಲ, ಈ ಪ್ರೇಮ ಅನಂತ ದೂರದ ಸುಧೀರ್ಘ ಪ್ರಯಾಣ. ಪ್ರೇಮಕ್ಕೆ ಯಾವ ಮಿತಿ ಇಲ್ಲ ಎಂಬುದಕ್ಕೆ ನಾವೇ ಸಾಕ್ಷಿ. ಹೃದಯಗಳ ಭಾಷೆ ಎಲ್ಲವನ್ನೂ ಮೀರಿದ್ದು. ಪ್ರತಿ ಸವಾಲು, ಸಂಶಯ ಮತ್ತು ಭಯದ ಮೌನದಲ್ಲಿಯೂ ನಮ್ಮನ್ನು ಹಿಡಿದಿಟ್ಟಿದ್ದು ಪ್ರೀತಿ. ಇಂದು, ನಮ್ಮ ಗುಟ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ನಿಮ್ಮ ಆಶೀರ್ವಾದವಿರಲಿ ಎಂದು ಸುಹಾನಾ ಪ್ರೀತಿಯ ಮಾತುಗಳನ್ನು ಬರೆದು ತಮ್ಮ ಅಭಿಮಾನಿಗಳೊಂದಿಗೆ ಸಂತೋಷ ಹಂಚಿಕೊಂಡಿದ್ದರು.
Sa Re Ga Ma Pa Suhana Sayeed Wedding, Singer Marries Long-Time Friend Nitin in Simple ‘Mantra Mangalya’ Ceremony.
ಸುಹಾನಾ ಸಯ್ಯದ್ ಮದುವೆ, ಸರಿಗಮಪ ಸುಹಾನಾ, ಸುಹಾನಾ ಸಯ್ಯದ್ ನಿತಿನ್, ಮಂತ್ರ ಮಾಂಗಲ್ಯ, ಕನ್ನಡ ಗಾಯಕಿ ಮದುವೆ, Suhana Sayeed Wedding, Sa Re Ga Ma Pa Suhana, Suhana Sayeed Nitin, Mantra Mangalya Marriage, Kannada Singer Wedding, Theatre Artist Nitin, #SuhanaWedsNitin.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
