ಪರದೆ ಸರಿಸಿ ಗರ್ಭಗುಡಿ ಪ್ರವೇಶಿಸಿದ ತಾಯಿ | 800 ವರ್ಷಗಳಿಂದ ನಡೆಯುತ್ತಿದೆ ಈ ಪವಾಡ

Malenadu Today

KARNATAKA NEWS/ ONLINE / Malenadu today/ Nov 14, 2023 SHIVAMOGGA NEWS

Chikkamagaluru | ದೀಪಾವಳಿಯ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಂಡಿಗೆ ದೇವಿರಮ್ಮನ (bindiga deviraamma) ಉತ್ಸವ ನಡೆಯುತ್ತದೆ. ಇನ್ನೂ ದೀಪಾವಳಿ ಸಂದರ್ಭದಲ್ಲಿ ಇಲ್ಲಿ ನಡೆಯುವ ವೈಚಿತ್ರ್ಯವನ್ನು ಕಣ್ತುಂಬಿಕೊಳ್ಳಲು ಇಲ್ಲಿ ಸಹಸ್ರಾರು ಮಂದಿ ಸೇರಿದ್ದರು.. 

READ :ವಿವಾಹ-ವಿಚಾರ | ಈಡಿಗ ವಧು-ವರರ ಅನ್ವೇಷಣೆ ಕೇಂದ್ರ ಆರಂಭ!

ದೇವಿರಮ್ಮ ದೀಪಾವಳಿ ಸಂದರ್ಭದಲ್ಲಿ ಒಂದು ದಿನ ಬೆಟ್ಟದಲ್ಲಿ ದರ್ಶನ ಕೊಡುತ್ತಾಳೆ. ಆ ತಾಯಿಯನ್ನು ನೋಡಲೆಂದೇ ನೆರೆಹೊರೆ ಜಿಲ್ಲೆಗಳಿಂದಲೂ ಜನರು ಬರುತ್ತಾರೆ. ಹೀಗೆ ಬೆಟ್ಟದಲ್ಲಿ ಭಕ್ತರಿಗೆ ದರ್ಶನ ನೀಡಿದ ತಾಯಿ ಬಳಿಕ ತನ್ನ ದೇವಾಲಯದ ಗರ್ಭಗುಡಿಯನ್ನು ಪ್ರವೇಶ ಮಾಡುತ್ತಾಳೆ ಎಂಬ ನಂಬಿಕೆ ಇಲ್ಲಿದೆ. ಗರ್ಭಗುಡಿಯ ಬಾಗಿಲಲ್ಲಿ ಹಾಕಿದ ಪರದೆಯನ್ನ ಸರಿಸುವ ಮೂಲಕ ದೇವಿ ಗರ್ಭಗುಡಿಯನ್ನ ಪ್ರವೇಶ ಮಾಡುತ್ತಾಳೆ ಎಂಬುದು ಪ್ರತೀತಿ.. 

READ : ಮೆಕ್ಕೆಜೋಳ ಪ್ರತಿ ಕ್ವಿಂಟಲ್‍ಗೆ ರೂ.2250 ! ಸರ್ಕಾರದ ಸಂಸ್ಥೆಯಿಂದಲೇ ನೇರ ಖರೀದಿ! ಇಲ್ಲಿದೆ ವಿವರ!?

ದೀಪಾವಳಿ ಅಮಾವಸ್ಯೆಯ ಹಿಂದಿನ ರಾತ್ರಿ ಬೆಟ್ಟದಲ್ಲಿ ನೆಲೆಸುವ ತಾಯಿ ಆನಂತರ  ಬೆಟ್ಟವನ್ನಿಳಿದು ಗರ್ಭಗುಡಿ ಪ್ರವೇಶಿಸುತ್ತಾಳೆ ಎಂಬ ನಂಬಿಕೆಗೆ 800 ವರ್ಷ ಇತಿಹಾಸವಿದೆ. ಪುರಾಣದ ಈ ಪ್ರತೀತಿಯಂತೆ, ನಿನ್ನೆ ತಾಯಿ ಗುಡಿಯಲ್ಲಿ ಪರದೇ ಸರಿದು ದೇವಿಯ ಪ್ರವೇಶವಾಗಿದೆ  


Share This Article