ಶಿವಾಲಯದಲ್ಲಿ ಹುಂಡಿ ಕದ್ದು ಮಳ್ಳನಾದ ಕಳ್ಳ
ಶಿವಮೊಗ್ಗ ಬಸವೇಶ್ವರ ನಗರ ಪಶ್ಟಿಮದ ಮೆಹೋಜಿರಾವ್ ಲೇ ಔಟ್ ನಲ್ಲಿರುವ ಶಿವಾಲಯದಲ್ಲಿ ಭಾನುವಾರ ಮಧ್ಯರಾತ್ರಿ ಹುಂಡಿ ಕಳ್ಳತನವಾಗಿದ್ದು ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ದೇವಲಾಯದ ಎರಡು ಬಾಗಿಲುಗಳನ್ನು ಮುರಿದು ಒಳ ಪ್ರವೇಶಿಸಿದ ಕಳ್ಳ ಹುಂಡಿಯನ್ನು ಕದ್ದಿದ್ದಾನೆ. ಆದರೆ ಹಿಂದಿನ ದಿನವೇ ಹುಂಡಿಯಲ್ಲಿದ್ದ ಹಣವನ್ನು ದೇವಸ್ಥಾನದ ಮುಖ್ಯಸ್ಥರು ತೆಗೆದಿದ್ದರು. ಬಂದದಾರಿಗೆ ಸುಂಕವಿಲ್ಲ ಎಂಬಂತೆ ಕಳ್ಳ ವಾಪಸ್ಸಾಗಿದ್ದಾನೆ. ಮಧ್ಯರಾತ್ರಿ 3 :30 ರ ಸುಮಾರಿಗೆ ಈ ಘಟನೆ ನಡೆದಿದ್ದು, ದೇವಲಾಯದ ಮುಖ್ಯಸ್ಥರು ವಿನೋಬ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಿಮಿಸದ ಪೊಲೀಸರು ಪರಿಶೀಲನೆ ನಡೆಸಿ, ದೂರು ದಾಖಲಿಸಿಕೊಂಡಿದ್ದಾರೆ.

