ಜೋಗ ಜಲಪಾತ ವೀಕ್ಷಣೆಗೆ ಈಗ ಹೋಗಬಹುದಾ? ಹೇಗಿದೆ ವ್ಯವಸ್ಥೆ? ಸನ್ನಿವೇಶ? JP ವರದಿ

KARNATAKA NEWS/ ONLINE / Malenadu today/ Oct 21, 2023 SHIVAMOGGA NEWS

SHIVAMOGGA : ಮಲೆನಾಡಿನಲ್ಲಿ ಈ ಬಾರಿ ಮಳೆ ಕೈಕೊಟ್ಟ ಹಿನ್ನಲೆ ವಿಶ್ವವಿಖ್ಯಾತ ಜೋಗ ಜಲಪಾತ (jog falls) ಕಳೆಗುಂದಿದೆ ಆದರೂ ಪ್ರತಿವರ್ಷದಂತೆ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಒಂದೆಡೆ ಜೋಗದ ಪರಿಸರದಲ್ಲಿ ನೂರಾರು ಕೋಟಿ ವೆಚ್ಚದ ಕಾಮಗಾರಿಗಳು ನಡೆಯುತ್ತಿದ್ದರೆ ಮತ್ತೊಂದೆದೆ ಪ್ರವಾಸಿಗರು ಮೂಲಭೂತ ಸಮಸ್ಯೆಗಳ ಕೊರತೆಯನ್ನು ಎದುರಿಸುತ್ತಿದೆ.

Malenadu Today

ಶಿವಮೊಗ್ಗದ ಟಿಪ್ಪುನಗರದ ರಾಜೀಕ್​​, ಭದ್ರಾವತಿ ಗ್ರೌಡಳ್ಳಿ ತೋಟದಲ್ಲಿ ಕೊಲೆಯಾಗೋದಕ್ಕೆ ಕಾರಣವೇನು? EXCLUSIVE

ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಪ್ರತಿ ಮಳೆಗಾಲದಲ್ಲೂ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಗೇನು ಕಡಿಮೆಯಿಲ್ಲ. ಜೂನ್ ನಿಂದ ಡಿಸೆಂಬರ್ ವರೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ ಈ ಬಾರಿ ಮಳೆ ಭಾರಿ ಪ್ರಮಾಣದಲ್ಲಿ ಕೈಕೊಟ್ಟ ಹಿನ್ನಲೆಯಲ್ಲಿ ಜೋಗ ಜಲಪಾತ ಸೊರಗಿದಂತೆ ಕಾಣುತ್ತದೆ.

Malenadu Today

ರಾಜ ರಾಣಿ ರೋರರ್ ರಾಕೇಟ್ ಜಲಧಾರೆಗಳು ಮೂಲ ಸ್ವರೂಪವನ್ನುಕಳೆದುಕೊಂಡಿದೆ. ಆದರೂ ಜೋಗ ಜಲಪಾತಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಜೋಗದ ಸೊಬಗನ್ನು ಮತ್ತಷ್ಟು ಹೆಚ್ಚಿಸಲು ಜೋಗ ಅಭಿವೃದ್ಧ ಪ್ರಾಧಿಕಾರ ನೂರಾರು ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಜೋಗದ ಸೌಂದರ್ಯ ಹೆಚ್ಚಿಸಲು ಇಷ್ಟೆಲ್ಲಾ ಕಾಮಗಾರಿಗಳು ನಡೆಯುತ್ತಿದೆ ನಿಜ, ಆದರೆ ಹಾಲಿ ಜೋಗ ಜಲಪಾತಕ್ಕೆ ಭೇಟಿ ನೀಡುವ ಪ್ರವಾಸಿಗರು ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುವಂತಾಗಿದೆ. ಸರಿಯಾದ ಶೌಚಾಲಯದ ವ್ಯವಸ್ಥೆಯಿಲ್ಲ. ಕುಡಿಯಲು ನೀರಿನ ವ್ಯವಸ್ಥೆ ಇಲ್ಲ. ಬಿರುಬೇಸಿಗೆಯಂತಾಗಿರುವ ಜೋಗದಲ್ಲಿ ಕುಡಿಯಲು ನೀರು ಸಿಗುವುದಿಲ್ಲ ಎಂದರೆ, ಪ್ರವಾಸಿಗರ ಪರಿಸ್ಥಿತಿ ಹೇಗಾಗಬೇಡ. 

Malenadu Today

ದೊಡ್ಡಪೇಟೆ PI ಅಂಜನ್​ ಕುಮಾರ್​ ಬೆಂಗಳೂರಿಗೆ ಟ್ರಾನ್ಸಫರ್​| ಶಿವಮೊಗ್ಗ ಗ್ರಾ. ಸ್ಟೇಷನ್​ಗೆ ಹೊಸ ಇನ್​ಸ್ಪೆಕ್ಟರ್​ |

ಜೋಗ ಅಭಿವೃದ್ಧಿ ಪ್ರಾಧಿಕಾರ ಪ್ರವಾಸಿಗರಿಂದ ದುಬಾರಿ ಮೊತ್ತದ ಶುಲ್ಕವನ್ನು ಪಡೆಯುತ್ತದೆ. ಹಣ ಪಡೆದಾಗ ಪ್ರವಾಸಿಗರಿಗೆ ತಕ್ಕ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂಬ ಸಾಮಾನ್ಯ ಜ್ಞಾನ ಪ್ರಾಧಿಕಾರಕ್ಕೆ ಇಲ್ಲದಂತಾಗಿದೆ. ಇಲ್ಲಿ ಶೌಚಾಲಯಕ್ಕೂ ಹಣಕೊಟ್ಟು ಹೋಗಬೇಕಾದ ಪರಿಸ್ಥಿತಿ ಇದೆ. ಅದು ಕೂಡ ಯಾವುದೊ ಒಂದು ಮೂಲೆಯಲ್ಲಿ ಇದೆ ತಕ್ಷಣ ಜೋಗದಲ್ಲಿ ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರವಾಸಿಗರು ಆಗ್ರಹಿಸಿದ್ದಾರೆ. ಜೋಗದ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಿದೆ ನಿಜ ಆದರೆ ಅಭಿವೃದ್ಧಿಯ ಜೊತೆಗೆ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಮೂಲಭೂತ ವ್ಯವಸ್ಥೆ ಕಲ್ಪಿಸಬೇಕಾಗಿರುವುದು ಪ್ರಾಧಿಕಾರದ ಆದ್ಯ ಕರ್ತವ್ಯವಾಗಿದೆ.

Malenadu Today


ಇನ್ನಷ್ಟು ಸುದ್ದಿಗಳು 

ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ


 

TAGS : ಜೋಗ ಜಲಪಾತ, ಜೋಗ ಜಲಪಾತ ಯಾವ ಜಿಲ್ಲೆಯಲ್ಲಿದೆ, ಜೋಗ ಜಲಪಾತ ಎಲ್ಲಿದೆ, ಜೋಗ ಜಲಪಾತದ ಬಗ್ಗೆ ಮಾಹಿತಿ in kannada, ಜೋಗ ಜಲಪಾತಕ್ಕೆ ಕಾರಣವಾದ ನದಿ, ಜೋಗ ಜಲಪಾತ ಎತ್ತರ, ಜೋಗ ಜಲಪಾತ photos, ಜೋಗ ಜಲಪಾತ ಚಿತ್ರ, ಜೋಗ ಜಲಪಾತ ಇತಿಹಾಸ, ಜೋಗ ಜಲಪಾತ ವಿಡಿಯೋ, alberi exam essay in kannada, ಶರಾವತಿ ಜೋಗ ಜಲಪಾತ,, jog falls, jog falls to bangalore, jog falls photos, jog falls today, jog falls weather, jog falls timings, jog falls height, jog falls in kannada, jog falls resorts, jog falls best time to visit, jog falls another name, jog falls accommodation, jog falls at present, jog falls about, jog falls also known as,, jog falls accident, jog falls activities, jog falls august 2023,

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು