KARNATAKA NEWS/ ONLINE / Malenadu today/ Oct 21, 2023 SHIVAMOGGA NEWS
ರಾಜ್ಯಸರ್ಕಾರ 35 ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮುಖ್ಯವಾಗಿ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ನಲ್ಲಿ ಪಿಐ ಆಗಿದ್ದ ಅಂಜನ್ ಕುಮಾರ್ ವರ್ಗಾವಣೆಯಾಗಿದ್ದಾರೆ.
ಈ ಹಿಂದೆ ಶಿವಮೊಗ್ಗ ಸಿಟಿಯ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರಿನಿಂದ ವರ್ಗಾವಣೆಗೊಂಡು ಶಿವಮೊಗ್ಗಕ್ಕೆ ಬಂದ ತಂಡದಲ್ಲಿ ಅಂಜನ್ ಕುಮಾರ್ ಕೂಡ ಒಬ್ಬರಾಗಿದ್ದರು.
ಇದೀಗ ರಾಜ್ಯ ಸರ್ಕಾರ ಶಿವಮೊಗ್ಗ ಪ್ರಮುಖ ಸ್ಟೇಷನ್ ಗಳಲ್ಲಿ ಒಂದಾದ ದೊಡ್ಡಪೇಟೆ ಸ್ಟೇಷನ್ನಿಂದ ಅಂಜನ್ ಕುಮಾರ್ರವರನ್ನ ವರ್ಗಾವಣೆ ಮಾಡಿದ ಆದೇಶ ಮಾಡಿದೆ. ಅಲ್ಲದೆ, ಒಟ್ಟು ಶಿವಮೊಗ್ಗಕ್ಕೆ ಸಂಬಂಧಿಸಿದಂತೆ ಐದು ಬದಲಾವಣೇಗಳನ್ನು ಮಾಡಿದೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್ ಪಾಟೀಲ್ ರವರ ಅಮಾನತು ಬಳಿಕ, ಅವರ ಸ್ಥಳಕ್ಕೆ ಸತ್ಯನಾರಾಯಣ್ ವೈ ಎಂಬವರು ಬಂದಿದ್ದಾರೆ.
ಸತ್ಯನಾರಾಯಣ ವೈ. ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಗ್ರಾಮಾಂತರ ಪೊ.ಠಾ., ಶಿವಮೊಗ್ಗ ಜಿಲ್ಲೆ
ಶ್ರೀಧರ ಕೆ. ರಾಜ್ಯ ಗುಪ್ತವಾರ್ತೆ ಮಾಳೂರು ವೃತ್ತ, ಶಿವಮೊಗ್ಗ ಜಿಲ್ಲೆ
ಅಣ್ಣಯ್ಯ ಕೆ.ಟಿ. ರೈಲ್ವೇಸ್ ಪ್ರೊ.ಠಾ., ದಾವಣಗೆರೆ ಡಿ.ಎಸ್.ಬಿ., ಶಿವಮೊಗ್ಗ ಜಿಲ್ಲೆ
ಸಂತೋಷ್ ಎಂ.ಪಾಟೀಲ್ ಡಿ.ಎಸ್.ಬಿ., ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆ ಆದೇಶದಲ್ಲಿರುವವರು ರೈಲ್ವೇಸ್ ಪ್ರೊ.ಠಾ., ದಾವಣಗೆರೆ
ಅಂಜನಕುಮಾರ್ ಕೆ. ದೊಡ್ಡಪೇಟೆ ಪೊ.ಠಾ., ಶಿವಮೊಗ್ಗ ಜಿಲ್ಲೆ ಸಿಟಿ ಎಸ್.ಬಿ., ಬೆಂಗಳೂರು ನಗರ
ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ಪೊಲೀಸ್ ಇನ್ಸ್ಪೆಕ್ಟರ್ (ಸಿವಿಲ್) ರವರುಗಳನ್ನು ಆಡಳಿತಾತ್ಮಕ ಕಾರಣಗಳಿಗಾಗಿ ತಕ್ಷಣದಿಂದ ಜಾರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ
ಇನ್ನಷ್ಟು ಸುದ್ದಿಗಳು
ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL
ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ
