ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 18 2025 : ಶಿವಮೊಗ್ಗ-ಬೆಂಗಳೂರು ಇಂಡಿಗೋ ವಿಮಾನಯಾನ ಇನ್ಮುಂದೆ ಪ್ರತಿದಿನ ಪ್ರಯಾಣಿಕರಿಗೆ ಸಿಗಲಿದೆ. ಶಿವಮೊಗ್ಗ ವಿಮಾನ ನಿಲ್ದಾಣ( ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ ) ದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಇಂಡಿಗೋ (IndiGo) ವಿಮಾನವೂ ಇದೇ ಸೆಪ್ಟೆಂಬರ್ 21ರಿಂದ ಪ್ರತಿದಿನ ಹಾರಾಟ ನಡೆಸಲಿದೆ.
ಇಲ್ಲಿವರೆಗೂ ಈ ವಿಮಾನ ದಿನಬಿಟ್ಟು ದಿನ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಇನ್ನು ಮುಂದೆ ವಾರಕ್ಕೆ ಏಳು ದಿನವೂ ಸಂಚರಿಸಲಿವೆ ಎಂದು ಸಂಸದ ಬಿವೈ ರಾಘವೇಂದ್ರರವರು ತಮ್ಮ ಎಕ್ಸ್ ಅಕೌಂಟ್ನಲ್ಲಿ ಮಾಹಿತಿ ನೀಡಿದ್ದಾರೆ.

ಇಂಡಿಗೊ ವಿಮಾನದ ವೇಳಾಪಟ್ಟಿ
ಇಂಡಿಗೋ ವಿಮಾನ (6E7731) ಬೆಂಗಳೂರಿನಿಂದ ಬೆಳಗ್ಗೆ 9:35ಕ್ಕೆ ಹೊರಟು, ಬೆಳಗ್ಗೆ 10:45ಕ್ಕೆ ಶಿವಮೊಗ್ಗ ತಲುಪಲಿದೆ. ಹಾಗೆಯೇ, ಶಿವಮೊಗ್ಗದಿಂದ ಹೊರಡುವ ವಿಮಾನ (6E7732) ಬೆಳಗ್ಗೆ 11:05ಕ್ಕೆ ಹೊರಟು, ಮಧ್ಯಾಹ್ನ 12:05ಕ್ಕೆ ಬೆಂಗಳೂರು ತಲುಪಲಿದೆ.
IndiGo Flights Between Shivamogga and Bengaluru Now Daily
IndiGo flights from Bengaluru (BLR) to Rashtrakavi Kuvempu Airport, Shivamogga (RQY) will now operate daily from Sept 21
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

