ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯಲ್ಲಿ ಹಿಂದೂ-ಮುಸ್ಲಿಮ್ ಸಂಭ್ರಮ, ಸಡಗರ! ವಿಡಿಯೋ ನೋಡಿ ಖುಷಿಯಾಗುತ್ತೆ!

Malenadu Today

 

KARNATAKA NEWS/ ONLINE / Malenadu today/ Oct 1, 2023 SHIVAMOGGA NEWS’ 

ಶಿವಮೊಗ್ಗ ಸೂಕ್ಷ್ಮ ಜಿಲ್ಲೆ, ಹಾಗಂತಾರೆ! ಅದೇ ರೀತಿಯಲ್ಲಿ ಶಿವಮೊಗ್ಗ ಅಂದಬಿಟ್ರೇ ಎಲ್ಲಿದ್ದರೂ ಊರಿನವರು ಒಂದಾಗಿ ಬಿಡ್ತಾರೆ. ನಾವು ನಮ್ಮವರು ಎನ್ನುವ ವಿಶಿಷ್ಟತೆಗೆ ನಿನ್ನೆ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದಲ್ಲಿ ನಡೆದ ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆ ಕೂಡ ಸಾಕ್ಷಿಯಾಯ್ತು. 

ಸೌಹಾರ್ಧತೆ ಎನ್ನುವುದಕ್ಕಿಂತಲೂ ನಾವು ನಮ್ಮೂರು ನಮ್ಮದು, ನಮ್ಮವರು ಎನ್ನುವ ಭಾವನೆಯಲ್ಲಿ ನಿನ್ನೆ ಮುಸ್ಲಿಮ್​ ಯುವಕರು ಹಿಂದೂ ಮಹಾಸಭಾ ಗಣಪತಿಯ ಎದುರು ಕುಣಿದು ಕುಪ್ಪಳಿಸಿದ್ದಾರೆ. ಮೆರವಣಿಗೆ ಸಾಗಿ ಬಂದ ಹಾದಿಯಲ್ಲಿ ಸೇರಿಕೊಂಡ ಯುವಕರ ಗುಂಪು , ಗಣಪತಿಯ ಮೆರವಣಿಗೆಗೆ ಜೈ ಎನ್ನುತ್ತಾ ಕುಣಿದು ಸಂಭ್ರಮಿಸಿದರು. ಎರಡು ಕಡೆಯುವರು ಅಣ್ತಮ್ಮ ಅಂತಾ ಒಟ್ಟೊಟ್ಟಿಗೆ ಸ್ಟೆಪ್ ಹಾಕುತ್ತಾ ಬೆವರಿಳಿಯುವಷ್ಟರವರೆಗೂ ಸಡಗರಪಟ್ಟರು. ಸಿಹಿ ಹಂಚಿ ಸಂತೋಷಪಟ್ಟರು. 

ಸದ್ಯ ಮೆರವಣಿಗೆಯ ಈ  ದೃಶ್ಯಗಳು ಹೊರಬಿದಿದ್ದು, ನಮ್ಮೂರಲ್ಲಷ್ಟೆ ಇವೆಲ್ಲಾ ಕಾಣಲು ಸಿಗದು ಎಂಬಂತಹ ಚರ್ಚೆಗಳು ನಡೆಯುತ್ತಿವೆ. 


ಇನ್ನಷ್ಟು ಸುದ್ದಿಗಳು 

  1. ರಾಷ್ಟ್ರೀಯ ಹೆದ್ದಾರಿ 169 A ನಲ್ಲಿ ಬೆಳಗಿನ ಜಾವ ಧಗಧಗ ಹೊತ್ತಿ ಉರಿದ ಮರ! ಏನಿದು ಘಟನೆ

  2. ವಿಐಎಸ್​ಎಲ್​​ ಆವರಣದಲ್ಲಿ ಕಾಣಿಸಿಕೊಳ್ತು ಮತ್ತೊಂದು ಚಿರತೆ!

  3. ಸಿಗಂದೂರು ಚೌಡೇಶ್ವರಿ ದರ್ಶನ ಪಡೆದು ಬೆಂಗಳೂರಿಗೆ ಹೋಗುತ್ತಿದ್ದಾಗ ಶಾಕ್! ಸೂಡೂರು ಸಮೀಪ ಆಕ್ಸಿಡೆಂಟ್!


 

Share This Article