ವಾಹನ ದಂಡ ಪಾವತಿಗೆ ಶೇ.50 ರಿಯಾಯಿತಿ, ನಿಮ್ಮ ವಾಹನದ ಮೇಲೂ ದಂಡ ಬಿದ್ದಿರಬಹುದು.. ಪರೀಕ್ಷಿಸುವುದು ಹೇಗೆ..?

prathapa thirthahalli
Prathapa thirthahalli - content producer

ಶಿವಮೊಗ್ಗದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ದಂಡ ಪಾವತಿಸಬೇಕಿದ್ದ ವಾಹನ ಸವಾರರಿಗೆ ಸಂಚಾರಿ ಪೊಲೀಸರು ಉತ್ತಮ ಅವಕಾಶವೊಂದನ್ನು ಕಲ್ಪಿಸಿದ್ದಾರೆ. ಸಂಚಾರಿ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಲಾಗಿದ್ದು, ಆಗಸ್ಟ್ 23 ರಿಂದ ಆರಂಭವಾದ ಈ ರಿಯಾಯಿತಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ರಿಯಾಯಿತಿ ಸೌಲಭ್ಯವನ್ನು ಬಳಸಿಕೊಂಡು ಕಳೆದ 7 ದಿನಗಳಲ್ಲಿ ಬರೋಬ್ಬರಿ 43.65 ಲಕ್ಷ ರೂಪಾಯಿಗಳ ದಂಡವನ್ನು ಸಂಗ್ರಹಿಸಲಾಗಿದೆ. ಈ ವಿಶೇಷ ಅವಕಾಶವು ಸೆಪ್ಟೆಂಬರ್ 12 ರವರೆಗೆ ಲಭ್ಯವಿರಲಿದೆ.

Traffic rules : ನಿಮ್ಮ ವಾಹನದ ಮೇಲಿನ ದಂಡವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ?

ನಿಮ್ಮ ವಾಹನದ ಮೇಲೆ ಸಂಚಾರಿ ದಂಡ ಬಿದ್ದಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಪೊಲೀಸ್ ಠಾಣೆಗೆ ಹೋಗಬೇಕಾಗಿಲ್ಲ. ನಿಮ್ಮ ಮೊಬೈಲ್ ಫೋನ್ ಮೂಲಕವೇ ಸುಲಭವಾಗಿ ಇದನ್ನು ಪರಿಶೀಲಿಸಬಹುದು.

ಮೊದಲನೆಯದಾಗಿ ನಿಮ್ಮ ಮೊಬೈಲ್​ನಲಲ್ಲಿರುವ ಗೂಗಲ್ ಪ್ಲೇ ಸ್ಟೋರ್‌ನಲ್ಲಿ mParivahan  ಎಂಬ ಆ್ಯಪ್  ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಚೆಕ್ ಚಲನ್ ಎಂಬ ಆಪ್ಷನ್​ ಇರುತ್ತದೆ. ಅದರ ಮೇಲೆ ಕ್ಲಿಕ್​ ಮಾಡಿ  ನಿಮ್ಮ ವಾಹನದ ಸಂಖ್ಯೆಯನ್ನು ಹಾಕಬೇಕು ಆಗ ನಿಮ್ಮ ವಾಹನದ ಮೇಲೆ ದಂಡ ಬಿದ್ದಿದೆಯೇ ಇಲ್ಲವೇ ಎಂಬುದರ ಬಗ್ಗೆ ಮಾಹಿತಿ ಸಿಗುತ್ತದೆ.

ಅಥವಾ, ನಿಮ್ಮ ಮೊಬೈಲ್‌ನ ಗೂಗಲ್ ಕ್ರೋಮ್ ಅಥವಾ ಯಾವುದೇ ವೆಬ್ ಬ್ರೌಸರ್ ತೆರೆದು e Challan Status ಎಂದು ಹುಡುಕಿ. ನಂತರ e Challan ವೆಬ್‌ಸೈಟ್ ತೆರೆಯುತ್ತದೆ. ಅಲ್ಲಿ ‘ಚಲನ್ ಡೀಟೇಲ್ಸ್’ (Challan Details) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ವಾಹನದ ಸಂಖ್ಯೆಯನ್ನು ನಮೂದಿಸಿ ದಂಡದ ಮಾಹಿತಿ ಪಡೆಯಬಹುದು.

Traffic rules : ತಪ್ಪಾದ ದಂಡದ ಬಗ್ಗೆ ಏನು ಮಾಡಬೇಕು?

ಕೆಲವೊಮ್ಮೆ ಬೇರೊಬ್ಬರ ವಾಹನದ ನಿಯಮ ಉಲ್ಲಂಘನೆಗೆ ನಿಮ್ಮ ವಾಹನದ ಮೇಲೆ ದಂಡ ದಾಖಲಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ತಕ್ಷಣ ಅದನ್ನು ಸರಿಪಡಿಸಲು, trafficeashi@gmail.com ವಿಳಾಸಕ್ಕೆ ಇ-ಮೇಲ್ ಕಳುಹಿಸಿ ಮಾಹಿತಿ ನೀಡಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಮೊಗ್ಗ ಸಂಚಾರಿ ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ.

Share This Article