ಪುನುಗು ಬೆಕ್ಕು ಬೇಟೆ: ಆರೋಪಿ ವಶಕ್ಕೆ

Chikkamagaluru :  ಪುನುಗು ಬೆಕ್ಕು ಬೇಟೆ: ಆರೋಪಿ ವಶಕ್ಕೆ

ಪುನುಗು ಬೆಕ್ಕನ್ನು ಬೇಟೆಯಾಡಿ ಚರ್ಮ ಸುಲಿಯುವ ವೇಳೆ ಅರಣ್ಯಧಿಕಾರಿಗಳು ದಾಳಿ ನಡೆಸಿ ಓರ್ವನನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಉದ್ದೆಬೋರನಹಳ್ಳಿ ವ್ಯಾಪ್ತಿಯ ಪಾದಮನೆ ಗ್ರಾಮದಲ್ಲಿ ನಡೆಸಿದೆ. ರವಿ ಬಂಧಿತ ಆರೋಪಿ.

ರವಿ ತನ್ನ ಮನೆಯ ಬಳಿ ಪುನುಗು ಬೆಕ್ಕನ್ನು ಬೇಟೆ ಆಡಿ ಅದರ ಚರ್ಮವನ್ನು ಸುಲಿದು ಮಾಂಸ ತೆಗೆಯುತ್ತಿದ್ದ. ಈ ವೇಳೆ ಉಪ ವಲಯ ಅರಣ್ಯಾಧಿಕಾರಿ ನಾರಾಯಣ್ ಎಲ್ ಮತ್ತು ಸಿಬ್ಬಂದಿ ದಾಳಿ ಮಾಡಿ ಆತನನ್ನು  ವಶಕ್ಕೆ ಪಡೆದು ವನ್ಯಜೀವಿ ಸಂರಕ್ಷಣಾ ಕಾಯಿದೆ ಅನ್ವಯ ಪ್ರಕರಣ ದಾಖಲು ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Chikkamagaluru

Leave a Comment