ಓಲಾ ಸ್ಕೂಟರ್ ರಿಪೇರಿ ಮಾಡದೇ ಸೇವಾ ನ್ಯೂನ್ಯತೆ : ಗ್ರಾಹಕನಿಗೆ ಪರಿಹಾರ ನೀಡಲು ಸೂಚನೆ : ಪರಿಹಾರದ ಮೊತ್ತ ಎಷ್ಟು ಗೊತ್ತಾ…

prathapa thirthahalli
Prathapa thirthahalli - content producer

Today news :  ಓಲಾ ಸ್ಕೂಟರ್ ರಿಪೇರಿ ಮಾಡದೇ ಸೇವಾ ನ್ಯೂನ್ಯತೆ : ಗ್ರಾಹಕನಿಗೆ ಪರಿಹಾರ ನೀಡಲು ಸೂಚನೆ : ಪರಿಹಾರದ ಮೊತ್ತ ಎಷ್ಟು ಗೊತ್ತಾ…

ಶಿವಮೊಗ್ಗ: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ ಗ್ರಾಹಕರೊಬ್ಬರಿಗೆ ಸೂಕ್ತ ಸೇವೆ ನೀಡದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಓಲಾ ಕಂಪನಿಗೆ ಭಾರಿ ದಂಡ ವಿಧಿಸಿದೆ. ದೂರುದಾರರಿಗೆ ₹1.07 ಲಕ್ಷ ಪರಿಹಾರ ನೀಡುವಂತೆ ಆಯೋಗವು ಓಲಾ ಸರ್ವೀಸ್ ಸೆಂಟರ್, ಶಿವಮೊಗ್ಗ ಹಾಗೂ ಓಲಾ ಎಲೆಕ್ಟ್ರಿಕಲ್ ಟೆಕ್ನಾಲಜಿ ಕಂಪನಿಗಳಿಗೆ ಆದೇಶ ನೀಡಿದೆ.

ಶಂಕರಯ್ಯ ಎಂಬುವವರು 2022ರ ಮೇ 26ರಂದು ₹1,51,071 ಪಾವತಿಸಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದರು. ಈ ಸ್ಕೂಟರ್‌ಗೆ 8 ವರ್ಷಗಳ ಬ್ಯಾಟರಿ ವಾರಂಟಿ ಹಾಗೂ ಇತರ ಭಾಗಗಳಿಗೆ ಮೂರು ವರ್ಷಗಳ ವಾರಂಟಿ ಇತ್ತು. ಆದರೆ, ಸ್ಕೂಟರ್ ಖರೀದಿಸಿದ ಕೆಲವೇ ದಿನಗಳಲ್ಲಿ ಅದು ಕೆಟ್ಟು ನಿಂತಿತ್ತು. ಮೊದಲ ಬಾರಿ ರಿಪೇರಿ ಮಾಡಿಸಿದ ನಂತರ, 2025ರ ಜನವರಿ 9ರಂದು ಸ್ಕೂಟರ್ ಮತ್ತೆ ಕೆಟ್ಟು ನಿಂತಿತು.

ಗ್ರಾಹಕರು ಈ ಬಗ್ಗೆ ಓಲಾ ಸರ್ವೀಸ್ ಸೆಂಟರ್‌ಗೆ ತಿಳಿಸಿದರೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಆಗ ಸ್ಕೂಟರ್ ಅನ್ನು ರಿಪೇರಿಗಾಗಿ ಸರ್ವೀಸ್ ಸೆಂಟರ್‌ನಲ್ಲಿ ಇಟ್ಟಾಗ, ಕಂಪನಿಯು ರಿಪೇರಿಗಾಗಿ ₹90,000 ಪಾವತಿಸುವಂತೆ ಕೇಳಿದೆ. ಆದರೆ, ಸ್ಕೂಟರ್ ಇನ್ನೂ ವಾರಂಟಿ ಅವಧಿಯಲ್ಲಿದ್ದರೂ ಅದನ್ನು ಸರಿಪಡಿಸದೆ ನಿರ್ಲಕ್ಷಿಸಿದೆ ಎಂದು ಶಂಕರಯ್ಯ ಅವರು ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ಗ್ರಾಹಕರ ದೂರಿನ ನಂತರ ಆಯೋಗವು ಓಲಾ ಕಂಪನಿಯ ಪ್ರತಿನಿಧಿಗಳಿಗೆ ನೋಟಿಸ್ ಜಾರಿಗೊಳಿಸಿತ್ತು. ಆದರೆ, ಓಲಾ ಕಂಪನಿಯಿಂದ ಯಾರೂ ಹಾಜರಾಗದ ಕಾರಣ ಆಯೋಗವು ಏಕಪಕ್ಷೀಯವಾಗಿ ವಿಚಾರಣೆ ನಡೆಸಿತು. ಓಲಾ ಕಂಪನಿಯು ಗ್ರಾಹಕರಿಗೆ ಸೇವಾ ನ್ಯೂನ್ಯತೆ ಎಸಗಿದೆ ಎಂದು ಆಯೋಗ ತೀರ್ಮಾನಿಸಿತು.

Today news  ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಅವರಿದ್ದ ಪೀಠವು ಈ ಪ್ರಕರಣದ ಕುರಿತು ತೀರ್ಪು ನೀಡಿದೆ. ಅದರ ಪ್ರಕಾರ ಆರ್ಥಿಕ ಪರಿಹಾರ

ಓಲಾ ಕಂಪನಿಯು ₹67,348ಕ್ಕೆ 2025ರ ಜನವರಿ 18ರಿಂದ ವಾರ್ಷಿಕ ಶೇ.10ರ ಬಡ್ಡಿಯೊಂದಿಗೆ ಗ್ರಾಹಕರಿಗೆ ಪಾವತಿಸಬೇಕು.

ಮಾನಸಿಕ ವೇದನೆಗಾಗಿ ₹40,000 ಪರಿಹಾರ ನೀಡಬೇಕು.

ದೂರಿನ ಖರ್ಚು ವೆಚ್ಚಗಳಿಗಾಗಿ ಹೆಚ್ಚುವರಿ ಪರಿಹಾರ ನೀಡಬೇಕು.

ಈ ಆದೇಶವನ್ನು 45 ದಿನಗಳ ಒಳಗಾಗಿ ಪಾಲಿಸದಿದ್ದರೆ ವಾರ್ಷಿಕ ಶೇ.12ರ ಬಡ್ಡಿಯೊಂದಿಗೆ ಸಂಪೂರ್ಣ ಹಣ ಪಾವತಿಸಬೇಕು.

 

TAGGED:
Share This Article