ಆಟೋ ಚಾಲಕರೇ ಎಚ್ಚರ! ಮೀಟರ್ ಹಾಕಲೇಬೇಕು! ಶಿವಮೊಗ್ಗ ಪೊಲೀಸರಿಂದ ದಂಡ

ajjimane ganesh

ಆಗಸ್ಟ್ 26, 2025 : ಶಿವಮೊಗ್ಗ, ಮಲೆನಾಡುಟುಡೆ ನ್ಯೂಸ್ : ಶಿವಮೊಗ್ಗ ಪೊಲೀಸ್​ ಮತ್ತೊಮ್ಮೆ ಬಿಗ್​ ಆಕ್ಷನ್​ ತೆಗೆದುಕೊಂಡಿದ್ದಾರೆ. ಈ ಸಲ ಪ್ರಯಾಣಿಕರೊಬ್ಬರಿಗೆ ಆಟೋ ಚಾಲಕರೊಬ್ಬರು ನಿಂದಿಸಿದ ಹಾಗೂ ಮೀಟರ್ ಹಾಕದ ಪ್ರಕರಣದಲ್ಲಿ ಶಿವಮೊಗ್ಗ ಪೊಲೀಸರು ದಂಡ ವಿಧಿಸಿದ್ದಾರೆ. ಇದನ್ನು ಸಹ ಓದಿ: ಶಿವಮೊಗ್ಗ ನಗರದಲ್ಲಿ ಆ.27 ರಂದು ಮಾಂಸ ಮಾರಾಟ ನಿಷೇಧ 

ಹೌದು, ಆಗಸ್ಟ್ 25 ರಂದು ಆಟೋ ಚಾಲಕರೊಬ್ಬರು ಆಟೋ ಮೀಟರ್ ಹಾಕದೆ ಹೆಚ್ಚುವರಿ ಬಾಡಿಗೆಗೆ ಡಿಮ್ಯಾಂಡ್ ಮಾಡಿರುವ ಹಿನ್ನೆಲೆಯಲ್ಲಿ ಐನೂರು ರೂಪಾಯಿ ದಂಡ ವಿಧಿಸಲಾಗಿದೆ. ಈ ಸಂಬಂಧ ಪ್ರಯಾಣಿಕರೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 

- Advertisement -
 Auto Driver Fined for Refusing Meter
Auto Driver Fined for Refusing Meter

ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್​ ಚಾನಲ್​ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..

ಆಟೋ ಮೀಟರ್ ಹಾಕುವಂತೆ ಕೇಳಿದ ಪ್ರಯಾಣಿಕರೊಬ್ಬರಿಗೆ ಕೆಟ್ಟ ಶಬ್ದಗಳಿಂದ ಬೈದ ಸಂಬಂಧ ಶಿವಮೊಗ್ಗ ಸಂಚಾರಿ ಪೊಲೀಸರಿಗೆ ದೂರು ಬಂಧಿತ್ತು. ಈ ಹಿನ್ನೆಲೆಯಲ್ಲಿ ಆಟೋ ಹಾಗೂ ಅದರ ಚಾಲಕನನ್ನು ಪತ್ತೆಮಾಡಿದ ಪೊಲೀಸರು ಐನೂರು ರೂಪಾಯಿ ದಂಡ ವಿಧಿಸಿದ್ದಾರೆ. ಅಲ್ಲದೆ ಬರುವ ದಿನಗಳಲ್ಲಿ ಕಡ್ಡಾಯವಾಗಿ ಮೀಟರ್ ಹಾಕುವಂತೆ ಸೂಚಿಸಿದ್ದಾರೆ. ಜೊತೆಯಲ್ಲಿ ದಂಡದ ರಸೀದಿಯ ಸಮೇತ ಪೊಲೀಸರು ತಮ್ಮ ಅಧಿಕೃತ ಸೋಶಿಯಲ್​ ಮೀಡಿಯಾದಲ್ಲಿ ಫೋಸ್ಟ್​ವೊಂದನ್ನು ಬರೆದುಕೊಂಡಿದ್ದಾರೆ.

ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್​ಗೆ ಜಾಯಿನ್ ಆಗಿ

Auto Driver Fined for Refusing Meter

car decor new

Share This Article
1 Comment

Leave a Reply

Your email address will not be published. Required fields are marked *