ಆಗುಂಬೆ ರಸ್ತೆಯಲ್ಲಿ ಬ್ಯಾರಿಕೇಡ್‌ಗೆ ಬೈಕ್ ಡಿಕ್ಕಿ, ವ್ಯಕ್ತಿ ಗಂಭೀರ

ಹಂಚಿಕೊಳ್ಳಿ
WhatsApp Facebook X Telegram
ಆಗುಂಬೆ ರಸ್ತೆಯಲ್ಲಿ ಬ್ಯಾರಿಕೇಡ್‌ಗೆ ಬೈಕ್ ಡಿಕ್ಕಿ, ವ್ಯಕ್ತಿ ಗಂಭೀರ

Accident : ಆಗುಂಬೆ ರಸ್ತೆಯಲ್ಲಿ ಬ್ಯಾರಿಕೇಡ್‌ಗೆ ಬೈಕ್ ಡಿಕ್ಕಿ, ವ್ಯಕ್ತಿ ಗಂಭೀರ

ತೀರ್ಥಹಳ್ಳಿ: ಬೈಕ್ ಸವಾರನೋರ್ವ ರಸ್ತೆಯ ಬದಿಯಲ್ಲಿ ಇಟ್ಟಿದ್ದ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಆಗುಂಬೆ ರಸ್ತೆಯ ರಾಕ್‌ವ್ಯೂ ಹೋಟೆಲ್ ಸಮೀಪ ನಡೆದಿದೆ.

ಕಮ್ಮರಡಿ ಗ್ರಾಮದ ನಿವಾಸಿ ವಿಶ್ವಮೂರ್ತಿ ಗಾಯಗೊಂಡವರು. ಅಡುಗೆ ಕೆಲಸ ಮುಗಿಸಿಕೊಂಡು ತಮ್ಮ ಸ್ಪ್ಲೆಂಡರ್ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಎದುರಿನಿಂದ ಬಂದ ವಾಹನವನ್ನು ತಪ್ಪಿಸಲು ಹೋಗಿ ಬೈಕ್ ನಿಯಂತ್ರಣ ತಪ್ಪಿ ರಸ್ತೆಯಲ್ಲಿದ್ದ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದೆ.

ಇದರ ಪರಿಣಾಮ ವಿಶ್ವಮೂರ್ತಿಯವರಿಗೆ ಗಂಬೀರಗಾಯಗಳಾಗಿದ್ದು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor