ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ತೆರೆದ ಬಾವಿಗೆ ಹಸವೊಂದು ಬಿದ್ದಿದ್ದು ಅದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಹೊಸಪೇಟೆ ಬಡಾವಣೆಯ ಹುಚ್ಚಪ್ಪ ಎಂಬುವವರಿಗೆ ಸೇರಿದ 6 ವರ್ಷದ ಜರ್ಸಿ ತಳಿಯ ಹಸು ಸುಮಾರು 30 ಅಡಿ ಆಳದ ಬಾವಿಗೆ ಬಿದ್ದಿತ್ತು. ಇದನ್ನು ಗಮನಿಸಿದ ಸ್ಥಳಿಯರು ತಕ್ಷಣವೇ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿಗಳು ರೆಸ್ಕ್ಯೂ ರೋಪ್ ಹಾಗು ಹಗ್ಗವನ್ನು ಹಿಡಿದು ಬಾವಿಗಿಳಿದರು. ಹಲವು ಸಮಯಗಳ ಕಾರ್ಯಾಚರಣೆಯ ಫಲವಾಗಿ ಹಸವುವನ್ನು ಸುರಕ್ಷಿತವಾಗಿ ಮೇಲೆತ್ತುವಲ್ಲಿ ಸಿಬ್ಬಂದಿಗಳು ಯಶಸ್ವಿಯಾದರು.
Cow rescue
