batteries stolen : ಕೋರ್ಟ್‌ನಲ್ಲೇ ಕಳ್ಳತನ : 24 ಬ್ಯಾಟರಿಗಳು ನಾಪತ್ತೆ
ಶಿವಮೊಗ್ಗ: ಬಾಲರಾಜ ಅರಸ್ ರಸ್ತೆಯಲ್ಲಿರುವ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಯು.ಪಿ.ಎಸ್‌ಗೆ ಅಳವಡಿಸಿದ್ದ ಬ್ಯಾಟಿರಿಗಳು ಕಳ್ಳತನವಾಗಿವೆ.
ಒಟ್ಟು 24 ಬ್ಯಾಟರಿಗಳು (batteries) ಕಳ್ಳತನವಾಗಿವೆ ಎಂದು ನ್ಯಾಯಾಲಯದ ಪ್ರಭಾರ ಮುಖ್ಯ ಆಡಳಿತಾಧಿಕಾರಿ ದೂರು ನೀಡಿದ್ದಾರೆ. ಜುಲೈ 28ರಂದು ಸಂಜೆ 4 ಗಂಟೆಗೆ ನ್ಯಾಯಾಲಯದ ಯು.ಪಿ.ಎಸ್ ಕನೆಕ್ಷನ್ ಸ್ಥಗಿತಗೊಂಡಿತ್ತು. ಯು.ಪಿ.ಎಸ್ ಕೊಠಡಿಯಲ್ಲಿ ಪರಿಶೀಲನೆಗೆ ತೆರಳಿದ್ದಾಗ 24 ಬ್ಯಾಟರಿಗಳು ಇರಲಿಲ್ಲ. 2019ರಲ್ಲಿ ಈ ಬ್ಯಾಟರಿಗಳನ್ನು ಅಳವಡಿಸಲಾಗಿತ್ತು. ಎರಡು ತಿಂಗಳ ಹಿಂದೆ ಸರ್ವಿಸ್‌ಗಾಗಿ ಪರಿಶೀಲಿಸಿದಾಗ ಬ್ಯಾಟರಿಗಳು ಇದ್ದವು. ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.