ವ್ಯಕ್ತಿ ಮತ್ತು ವ್ಯಕ್ತಿತ್ವದ ನಡುವಿನ ಪ್ರೇಮಕಥೆ ‘ಭರವಸೆ’, ಆಗಸ್ಟ್​ 08 ಕ್ಕೆ ತೆರೆಗೆ

This Article Written by / Prathapa thirthahalli / ಆಗಷ್ಟ್ 5, 2025

Bharavase movie

Bharavase movie :   ವ್ಯಕ್ತಿ ಮತ್ತು ವ್ಯಕ್ತಿತ್ವದ ನಡುವಿನ ಪ್ರೇಮಕಥೆ ‘ಭರವಸೆ’, ಆಗಸ್ಟ್​ 08 ಕ್ಕೆ ತೆರೆಗೆ

ಶಿವಮೊಗ್ಗ: ನಟ ವಿನಯ್ ರಾಜ್ ಅಭಿನಯದ ಮತ್ತು ಮುತ್ತು ಎ. ಎನ್ ನಿರ್ದೇಶನದ ‘ಭರವಸೆ’ ಚಲನಚಿತ್ರವು ಆಗಸ್ಟ್ 8ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಬಿ.ಸಿ. ನಾಗರಾಜ್ ತಿಳಿಸಿದ್ದಾರೆ.

ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚಿತ್ರದಲ್ಲಿ ಬಹುತೇಕ ಶಿವಮೊಗ್ಗದ ಕಲಾವಿದರೇ ನಟಿಸಿದ್ದಾರೆ. ಚಿತ್ರದಲ್ಲಿ 5 ಹಾಡುಗಳು ಮತ್ತು 4 ಸಾಹಸ ದೃಶ್ಯಗಳಿದ್ದು, ಇದರ ಶೇ. 50-60ರಷ್ಟು ಚಿತ್ರೀಕರಣವನ್ನು ಶಿವಮೊಗ್ಗದ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆಸಲಾಗಿದೆ. ರಾಜ್ಯದ 60 ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ ಎಂದು ಅವರು ಹೇಳಿದರು.

Bharavase movie  ಚಿತ್ರದ ನಿರ್ದೇಶಕ ಮುತ್ತು ಎ. ಎನ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ಭರವಸೆಯ ಮೇಲೆ ಬದುಕುತ್ತಾನೆ. ವ್ಯಕ್ತಿ ಮತ್ತು ವ್ಯಕ್ತಿತ್ವದ ನಡುವಿನ ಉತ್ತಮ ಪ್ರೇಮ ಕಥೆಯನ್ನು ಈ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಲಾಗಿದೆ. ಈ ಚಿತ್ರದಲ್ಲಿ ವಿನಯ್ ರಾಜ್ ನಾಯಕನಾಗಿ ಮತ್ತು ಅಹಲ್ಯಾ ನಾಯಕಿಯಾಗಿ ನಟಿಸಿದ್ದಾರೆ. ನಿರ್ಮಾಪಕ ಬಿ.ಸಿ. ನಾಗರಾಜ್ ಅವರು ಕೂಡ ಎರಡನೇ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿಸಿದರು.

 

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮುಂದಿನ ಸುದ್ದಿ ಒದಿ

Leave a Comment