yellow areca flower 31 ಕೆಲವೊಮ್ಮೆ ನಡೆಯುವ ಪ್ರಕೃತಿ ವಿಸ್ಮಯಗಳು ನಿರೀಕ್ಷೆ ಹಾಗೂ ಊಹೆಗೂ ಸಿಗುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಹೊಳೆಹೊನ್ನೂರುನಲ್ಲಿ ಘಟನೆಯೊಂದು ನಡೆದಿದೆ. ಅಡಿಕೆ ಮರದ ಹೊಂಬಾಳೆಯನ್ನು ಸಾಮಾನ್ಯವಾಗಿಯೇ ಗಮನಿಸಿರುತ್ತೀರಿ. ಆದರೆ ಇಲ್ಲಿಯ ತೋಟವೊಂದರಲ್ಲಿ ಕಾಣ ಸಿಕ್ಕಿರುವ ಹೊಂಬಾಳೆಯಲ್ಲಿ ಹಳದಿ ಬಣ್ಣದ ಹೂವುಗಳು ಅರಳಿದಂತೆ ಕಾಣುತ್ತಿದೆ. ಸದ್ಯ ಇದರ ಫೋಟೋ ಸಕತ್ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಹಸಿರು ಅಥವಾ ಕಂದು ಬಣ್ಣದಲ್ಲಿ ಕಾಣುವ ಹೊಂಬಾಳೆಯಲ್ಲಿ ಸೇವಂತಿಗೆ ಹೂವಿನಂತೆ ಕಾಣುವ ಹಳದಿ ಹೂ (yellow flower) ಅರಳಿ ನಿಂತಿದ್ದು, ಸ್ಥಳೀಯರ ಮತ್ತು ವಿಜ್ಞಾನಿಗಳ ವಿಸ್ಮಯಕ್ಕೆ ಕಾರಣವಾಗಿದೆ.

ಹೊಳೆಹೊನ್ನೂರು ಸಮೀಪದ ಹನುಮಂತಾಪುರ ಗ್ರಾಮದ ತಳವಾರ ರಂಗಪ್ಪ ಅವರ ತೋಟದಲ್ಲಿ ವಿಶಿಷ್ಟ ಘಟನೆಯೊಂದು ನಡೆದಿದೆ. ಕೊನೆ ಕೊಯಲಿನ ಸಂದರ್ಭದಲ್ಲಿ ಕೊನೆಗಾರರೊಬ್ಬರು ಮರವೊಂದರ ಹೊಂಬಾಳೆ (inflorescence)ಯಲ್ಲಿ ಹಳದಿ ಬಣ್ಣದ ಮಿಳ್ಳೆ ಕಾಯಿಗಳು ಇರಬಹುದು ಎಂದು ಭಾವಿಸಿ ಅದನ್ನು ಕೊಯ್ದಿದ್ದಾರೆ.
ಆದರೆ ಆ ಬಳಿಕ ಹೊಂಬಾಳೆಯಲ್ಲಿ ಸೇವಂತಿಗೆ ಹೂವನ್ನು ಹೋಲುವಂತಹ ಹಳದಿ ಬಣ್ಣದ ಹೂ ಅರಳಿರುವುದು ಕಂಡು ಬಂದಿದೆ. ಇದನ್ನು ಹಲವರು ನೋಡಿ ಅಚ್ಚರಿ ಪಟ್ಟಿದ್ದಾರೆ. ಸದ್ಯದ ಮಟ್ಟಿಗೆ ಇದರ ವಿಶೇಷ ಏನು ಎಂಬುದು ಸ್ಪಷ್ಟವಾಗಿಲ್ಲ
yellow areca flower 31
ಅಡಿಕೆ ಮರ, ಹಳದಿ ಹೂವು, ಹೊಂಬಾಳೆ, ಹೊಳೆಹೊನ್ನೂರು, ಹನುಮಂತಾಪುರ, ತಳವಾರ ರಂಗಪ್ಪ, ವಿಜ್ಞಾನಿಗಳಲ್ಲಿ ಕುತೂಹಲ, ಅಪರೂಪದ ವಿದ್ಯಮಾನ, ಸಸ್ಯಶಾಸ್ತ್ರ, ಕೃಷಿ ತಜ್ಞರು, ವಿಚಿತ್ರ ಹೂವು, ಮಲೆನಾಡು ಸುದ್ದಿ, Karnataka news, arecanut flower, yellow areca flower, unique plant, botanical anomaly, agricultural mystery, Holehonnur news, rare flower Karnataka.

