ಶ್ರಾವಣ ಶುಕ್ರವಾರಗಳಂದು ಕೋಟೆ ಮಾರಿಕಾಂಬಾ ದೇಗುಲದಲ್ಲಿ ಏನೆಲ್ಲಾ ವಿಶೇಷ ಇದೆ ಗೊತ್ತಾ! ಇಲ್ಲಿದೆ ಮಾಹಿತಿ

ajjimane ganesh

Shravana at Kote Marikamba Temple ಕೋಟೆ ಮಾರಿಕಾಂಬ ದೇಗುಲದಲ್ಲಿ ಶ್ರಾವಣ ವೈಭವ: ವಿಶೇಷ ಅಲಂಕಾರಗಳು ಹಾಗೂ ಪೂಜಾ ಕೈಂಕರ್ಯ

ಶಿವಮೊಗ್ಗ, ಮಲೆನಾಡು ಟುಡೆ ಸುದ್ದಿ: ಆಷಾಢ ಮುಗಿಯುತ್ತಿದೆ. ಬೆನ್ನಲ್ಲೆ ಶ್ರಾವಣದ ವೃತಾಚರಣೆಗಳಿಗೆ ಸಿದ್ದತೆಯು ನಡೆಯುತ್ತಿದೆ. ಈ ನಡುವೆ ಶಿವಮೊಗ್ಗದ ಅಧಿದೇವತೆ  ನಗರದ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಶ್ರಾವಣ ಮಾಸದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯು ಶ್ರಾವಣ ಮಾಸದ ಪ್ರತಿ ಶುಕ್ರವಾರವೂ ಅಮ್ಮನವರಿಗೆ ವೈಶಿಷ್ಟ್ಯಪೂರ್ಣ ಅಲಂಕಾರಗಳನ್ನು ಮಾಡುವುದಾಗಿ ಪ್ರಕಟಿಸಿದೆ.

Shravana at Kote Marikamba Temple in Shivamogga
Shravana at Kote Marikamba Temple in Shivamogga
ಶ್ರಾವಣದ ಮೊದಲ ಶುಕ್ರವಾರ, ಜುಲೈ 25ರಂದು ಮೀನಾಕ್ಷಿ ಅಲಂಕಾರ ನಡೆಯಲಿದೆ.  ನಂತರ, ಆಗಸ್ಟ್ 1ರಂದು ಶ್ರೀ ಲಲಿತ ಪರಮೇಶ್ವರಿ ಅಲಂಕಾರ,  ಆಗಸ್ಟ್ 8ರಂದು ವರಮಹಾಲಕ್ಷ್ಮಿ ಅಲಂಕಾರ ಮತ್ತು ಆಗಸ್ಟ್ 15ರಂದು ಚಂಡಿಕಾ ದುರ್ಗಾಪರಮೇಶ್ವರಿ ಅಲಂಕಾರವನ್ನು ನೆರವೇರಿಸಲಾಗುತ್ತದೆ.  ಇದರ ಜೊತೆಗೆ, ಆಗಸ್ಟ್ 22ರಂದು ಮೀನಾಕ್ಷಿ ಅಲಂಕಾರದೊಂದಿಗೆ ಸರ್ವಾಭರಣ ರಣಭೂಷಿತೆ ಅಲಂಕಾರ ಮತ್ತು ಸಾಮೂಹಿಕ ಶ್ರೀ ದುರ್ಗಾ ಹೋಮವನ್ನು ಬೆಳಗ್ಗೆ 8:30ಕ್ಕೆ ಆಯೋಜಿಸಲಾಗಿದೆ. ಶ್ರಾವಣದ ಈ ಎಲ್ಲಾ ಶುಕ್ರವಾರಗಳಲ್ಲಿ ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಾಮೂಹಿಕ ಕ್ಷೀರಾಭಿಷೇಕ (Ksheerabhisheka) ಜರುಗಲಿದೆ.  ಭಕ್ತರು ₹40 ರಶೀದಿ ಪಡೆದು ಸಂಜೆ 6 ಗಂಟೆಗೆ ನಡೆಯುವ ಪ್ರಕರೋತ್ಸವದಲ್ಲಿ ಭಾಗವಹಿಸಬಹುದಾಗಿದೆ ಎಂದು ದೇವಸ್ಥಾನದ ಸಮಿತಿ ಕೋರಿದೆ.

ಶ್ರಾವಣ ವೈಭವ, ಕೋಟೆ ಮಾರಿಕಾಂಬ ದೇವಸ್ಥಾನ, ಶಿವಮೊಗ್ಗ, ವಿಶೇಷ ಪೂಜೆ, ಅಲಂಕಾರ, ಮೀನಾಕ್ಷಿ ಅಲಂಕಾರ, ಕ್ಷೀರಾಭಿಷೇಕ, ದುರ್ಗಾ ಹೋಮ, ಮಾರಿಕಾಂಬ ಸೇವಾ ಸಮಿತಿ,  Shravana Vaibhava, Kote Marikamba Temple, Shivamogga, Special Puja, Alankaram, Meenakshi Alankaram, Ksheerabhisheka, Durga Homa, Marikamba Seva Samiti, #Shivamogga #ShravanaVaibhava #MarikambaTemple #SpecialPooja #Ksheerabhisheka #HinduFestivals #KarnatakaTemples

Share This Article