haratalu halappa :ಶಿವಮೊಗ್ಗ : ಮಾಜಿ ಸಚಿವ ಹರತಾಳು ಹಾಲಪ್ಪ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮುಖ್ಯವಾಗಿ ಸಿಗಂದೂರು ಸೇತುವೆ ಕುರಿತು ಸಚಿವರ ಹೇಳಿಕೆಗಳನ್ನು ಪ್ರಸ್ತಾಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾಲಪ್ಪ, “ಒಂದು ತಿಂಗಳಲ್ಲಿ ಸಿಗಂದೂರು ದೇವಾಲಯವನ್ನು ಹಾಳು ಮಾಡುತ್ತೇನೆ ಎಂಬ ಹೇಳಿಕೆಯನ್ನು ಮಧು ಬಂಗಾರಪ್ಪ ನೀಡಿದ್ದಾರೆ. ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುವುದನ್ನು ಅವರು ನಿಲ್ಲಿಸಬೇಕು. ಪುಣ್ಯಾತ್ಮ ಬಂಗಾರಪ್ಪನವರ ಹೊಟ್ಟೆಯಲ್ಲಿ ಹುಟ್ಟಿದ ಮೇಲೆ ಸರಿಯಾಗಿ ಇರಬೇಕು. ಈ ವೇಳೆ ‘ನಾವು ವಿಡಿಯೋವನ್ನು ತಿರುಚಿದ್ದೇವೆ’ ಎಂಬ ಹೇಳಿಕೆಗಳು ಬರುತ್ತವೆ. ಆದರೆ, ನಾವು ವಿಡಿಯೋ ತಿರುಚಿದ್ದರೆ, ಅದನ್ನು ಎಫ್‌ಎಸ್‌ಎಲ್‌ಗೆ ನೀಡಿ ತನಿಖೆ ಮಾಡಿಸಲಿ,” ಎಂದು ಸವಾಲು ಹಾಕಿದರು. “ಸಿಗಂದೂರು ದೇವಾಲಯವನ್ನು ಯಾರ ಕೈಯಿಂದಲೂ ಹಾಳು ಮಾಡಲು ಸಾಧ್ಯವಿಲ್ಲ,” ಎಂದೂ ಹಾಲಪ್ಪ ಸ್ಪಷ್ಟಪಡಿಸಿದರು.
haratalu halappa ಕಂಬಳಿ ಪಾದಯಾತ್ರೆ ಪ್ರಯೋಜನವೇನು
ರೈತರ ಸಮಸ್ಯೆಗಳ ಕುರಿತು ಮಾತನಾಡಿದ ಹಾಲಪ್ಪ,”ಚಿತ್ರಶೆಟ್ಟಿಹಳ್ಳಿಯ ರೈತನ 350 ಅಡಿಕೆ ಗಿಡಗಳನ್ನು ಅರಣ್ಯ ಇಲಾಖೆ ಕಿತ್ತಿದೆ. ಹೊಸನಗರದ ಹೊಸವೆಯಲ್ಲಿಯೂ ಅಡಿಕೆ ಮರಗಳನ್ನು ಹಾಳು ಮಾಡಿದ್ದಾರೆ. ಮುಳುಗಡೆ ರೈತರಿಗೆ ನ್ಯಾಯ ಕೊಡಿಸಲು ಇವರ ಕೈಯಲ್ಲಿ ಆಗುತ್ತಿಲ್ಲ. ನಾನು ಹೋರಾಟಗಾರ ಎಂದು ಸೋತಾಗ ಕಂಬಳಿ ಹಾಕಿಕೊಂಡು ಪಾದಯಾತ್ರೆ ಮಾಡಿದ್ದೇನು ಪ್ರಯೋಜನ? ಇಂತಹ ಸಮಸ್ಯೆಗಳ ಬಗ್ಗೆ ಹೇಳಿದರೆ ಮಧು ಬಂಗಾರಪ್ಪ ಉಡಾಫೆಯಾಗಿ ಮಾತನಾಡುತ್ತಾರೆ. ರೈತರಿಗೆ ರಕ್ಷಣೆ ಕೊಡಬೇಕು, ಇಲ್ಲದಿದ್ದರೆ ನಾಲಾಯಕ್ ಅಷ್ಟೆ,” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


ಮಧು ಬಂಗಾರಪ್ಪ ಅವರ ಕ್ಷೇತ್ರದಲ್ಲಿ ನಡೆಯುತ್ತಿದೆ ಎನ್ನಲಾದ ಇಸ್ಪೀಟ್ ಕ್ಲಬ್‌ಗಳ ಬಗ್ಗೆಯೂ ಹಾಲಪ್ಪ ಗಂಭೀರ ಆರೋಪ ಮಾಡಿದರು. “ನಗರ ಅಥವಾ ಪಟ್ಟಣಗಳಲ್ಲ, ಸಿಟಿ ಕ್ಲಬ್‌ಗಳೆಂಬ ಜಾಗಗಳಲ್ಲಿ ಐದು ಇಸ್ಪೀಟ್ ಕ್ಲಬ್‌ಗಳು ನಡೆಯುತ್ತಿವೆ. ಪುಣ್ಯಾತ್ಮ ಬಂಗಾರಪ್ಪ ಅವರ ಕ್ಷೇತ್ರದಲ್ಲಿ ಕ್ಲಬ್ ನಡೆಯುತ್ತಿದೆ. ವಿದ್ಯಾಮಂತ್ರಿಯಾದವರು, ನಲವತ್ತು ಸಾವಿರ ಲೀಡ್‌ನಲ್ಲಿ ಗೆದ್ದರೆ ಕ್ಲಬ್ ನಡೆಸಬಹುದಾ ಹಾಗಾದರೆ? ಇಸ್ಪೀಟ್ ಕ್ಲಬ್‌ಗಳು ನಡೆದರೂ ಎಸ್‌ಪಿ ಏನು ಮಾಡುತ್ತಿದ್ದಾರೆಂದು ಗೊತ್ತಿಲ್ಲ, ಎಂದರು
haratalu halappa ಮಲೆನಾಡಿನವರು ಅರಣ್ಯ ಸಚಿವರಾಗದಿರುವುದು ದುರಾದೃಷ್ಟ
ಅರಣ್ಯ ಇಲಾಖೆ ಜಾರಿಗೊಳಿಸಿರುವ ‘ಸಾಕು ಪ್ರಾಣಿಗಳನ್ನು ಕಾಡಿನಲ್ಲಿ ಮೇಯಿಸುವಂತಿಲ್ಲ’ ಎಂಬ ಆದೇಶವನ್ನು ಹಾಲಪ್ಪ ತೀವ್ರವಾಗಿ ಟೀಕಿಸಿದರು. “ಮಲೆನಾಡಿನಲ್ಲಿ ದನಕರುಗಳನ್ನು ಸಾಕುತ್ತೇವೆ, ಕಾಡಿಗೆ ಹೋಗದೆ ಇದ್ದರೆ ಮಲೆನಾಡಿನಲ್ಲಿ ಆಗುವುದಿಲ್ಲ. ಕೂಡಲೇ ಈ ಆದೇಶ ಹಿಂಪಡೆಯಬೇಕು. ಸಾಕು ಪ್ರಾಣಿಗಳಿಂದಲೇ ಬೀಜ ಪ್ರಸರಣ ಆಗುತ್ತಿದೆ. ಕಾಡನ್ನು ಬೆಳೆಸಿ ಉಳಿಸಿರುವುದೇ ರೈತರು ಮತ್ತು ಜಾನುವಾರುಗಳು. ದನದ ಸಗಣಿಯಿಂದ ಬೀಜ ಪ್ರಸರಣ ಆಗುತ್ತದೆ. ರಾಜ್ಯದ ದುರಾದೃಷ್ಟ ಅಂದರೆ ಮಲೆನಾಡಿನವರು ಯಾರೂ ಅರಣ್ಯ ಸಚಿವರಾಗುತ್ತಿಲ್ಲ. ಸರ್ಕಾರದ ಈ ಆದೇಶ ಅಸಂಬದ್ಧವಾಗಿದೆ,” ಎಂದು ಆಕ್ರೋಶ ಹೊರಹಾಕಿದರು.
haratalu halappa ಜಿಎಸ್‌ಟಿ ಹೋರಾಟಕ್ಕೆ ಬೆಂಬಲ
ರಾಜ್ಯ ಸರ್ಕಾರದ ಜಿಎಸ್‌ಟಿ ನೋಟಿಸ್‌ಗಳ ಬಗ್ಗೆಯೂ ಹಾಲಪ್ಪ ಆತಂಕ ವ್ಯಕ್ತಪಡಿಸಿದರು. “ಜಿಎಸ್‌ಟಿ ನೋಟಿಸ್ ನೀಡಲು ರಾಜ್ಯ ಸರ್ಕಾರ ಹೊರಟಿದೆ. ನಾಳೆ ನಡೆಯುವ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಸಿದ್ದರಾಮಯ್ಯನವರು ವಾಣಿಜ್ಯ ಇಲಾಖೆಗೆ 1 ಲಕ್ಷದ 20 ಕೋಟಿ ತೆರಿಗೆ ಸಂಗ್ರಹದ ಗುರಿ ನೀಡಿದ್ದಾರೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ ನೀಡಿದ ನೋಟಿಸ್‌ಗಳನ್ನು ವಾಪಸ್ ತೆಗೆದುಕೊಳ್ಳಬೇಕು. ಇದು ಡಿಜಿಟಲ್ ಇಂಡಿಯಾವನ್ನು ತಡೆಯುವ ಪ್ರಯತ್ನವಾಗಿದೆ. ಸರ್ಕಾರ ಜನರ ರಕ್ತ ಹಿಂಡುತ್ತಿದೆ,” ಎಂದು ಆರೋಪಿಸಿದರು.
ಅಂತಿಮವಾಗಿ, ಸಂಸದ ಬಿ.ವೈ. ರಾಘವೇಂದ್ರ ಅವರ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದ ಹಾಲಪ್ಪ, “ಮಧು ಬಂಗಾರಪ್ಪ ಮಾತೇತ್ತಿದರೆ ಸಂಸದ ರಾಘವೇಂದ್ರ ಬಗ್ಗೆ ಮಾತನಾಡುತ್ತಾರೆ. ಎಂಪಿ ಅವರು ಬಸ್ ಸ್ಟ್ಯಾಂಡ್ ಸಹ ಕಟ್ಟಿಸಿದ್ದಾರೆ, ಏರ್‌ಪೋರ್ಟ್ ಸಹ ಕಟ್ಟಿಸಿದ್ದಾರೆ. ಮಧು ಬಂಗಾರಪ್ಪ ಮೆಗ್ಗಾನ್ ಆಸ್ಪತ್ರೆ ಬಗ್ಗೆ ಮಾತನಾಡುತ್ತಾರೆ. ಬಂಗಾರಪ್ಪನವರು ಗುದ್ದಲಿ ಪೂಜೆ ಮಾಡಿದ್ದರು, ಯಡಿಯೂರಪ್ಪನವರು ಪೂರ್ಣಗೊಳಿಸಿದರು. ಮಧು ಬಂಗಾರಪ್ಪನವರಿಗೆ ಈಗ ಹಣ ಮಾಡುವ ಆಸೆ ಬಂದಿದೆ. ಮಧು ಬಂಗಾರಪ್ಪ ಅಭಿವೃದ್ಧಿ ಕಡೆಗೆ ಗಮನ ನೀಡಬೇಕು ಎಂದರು.
