Chief Minister’s Medal : ಶಿವಮೊಗ್ಗದ ಎಂ. ಸಲೀಂಗೆ ಮುಖ್ಯಮಂತ್ರಿ ಪದಕ !
ಶಿವಮೊಗ್ಗ : ಅರಣ್ಯ ಸಂರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ಸಲ್ಲಿಸಿದ ಸೇವೆಗಾಗಿ, ಶಿವಮೊಗ್ಗದ ಗಸ್ತು ಅರಣ್ಯ ಪಾಲಕ ಎಂ. ಸಲೀಂ ಅವರು 2024ನೇ ಸಾಲಿನ ಪ್ರತಿಷ್ಠಿತ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ. ಅವರ ಧೈರ್ಯ, ದಿಟ್ಟತನ ಮತ್ತು ಅರಣ್ಯದ ಬೆಳವಣಿಗೆಗಾಗಿಮಾಡಿದ ಮಹತ್ತರ ಕೆಲಸಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಎಂಟು ವರ್ಷಗಳ ಸಾರ್ಥಕ ಸೇವೆಗೆ ಸಂದ ಫಲ
2015ರಲ್ಲಿ ಅರಣ್ಯ ಇಲಾಖೆಗೆ ಕಾಲಿಟ್ಟ ಎಂ. ಸಲೀಂ, ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿವಮೊಗ್ಗ ವನ್ಯಜೀವಿ ವಲಯ ಮತ್ತು ಕೋಗಾರು ವನ್ಯಜೀವಿ ವಲಯಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ಅವರು, ಪ್ರಸ್ತುತ ಉಂಬ್ಳೇಬೈಲು ವಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅರಣ್ಯ ಸಂಪತ್ತಿನ ರಕ್ಷಣೆ ಹಾಗೂ ವನ್ಯಜೀವಿಗಳ ಸುರಕ್ಷತೆಯಲ್ಲಿ ಅವರ ಕೊಡುಗೆ ಗಣನೀಯವಾದುದು ಎಂದು ಇಲಾಖೆ ಶ್ಲಾಘಿಸಿದೆ.

