ಉಷಾ ನರ್ಸಿಂಗ್​ ಹೋಮ್​ ಸಿಗ್ನಲ್​ನಲ್ಲಿ ಇನ್ಮುಂದೆ ನಿಂತೆ ಮುಂದಕ್ಕೆ ಹೋಗಬೇಕು!

ajjimane ganesh

Usha nursing home Circle ಶಿವಮೊಗ್ಗದ ಉಷಾ ವೃತ್ತದಲ್ಲಿ ತಾತ್ಕಾಲಿಕ ಸಂಚಾರ ಸಿಗ್ನಲ್ ಲೈಟ್‌ಗೆ ಚಾಲನೆ: ಎಸ್‌ಪಿ ಮಿಥುನ್ ಕುಮಾರ್ ಕರೆ!

ಶಿವಮೊಗ್ಗ: ಜುಲೈ 16, 2025 / ಶಿವಮೊಗ್ಗ ನಗರದ ಪ್ರಮುಖ ಸರ್ಕಲ್​ಗಳ ಪೈಕಿ ಒಂದಾಗಿರುವ ಉಷಾ ನರ್ಸಿಂಗ್ ಹೊಮ್​ ಸರ್ಕಲ್​ನಲ್ಲಿ ಪೊಲೀಸ್​ ಇಲಾಖೆ ತಾತ್ಕಾಲಿಕ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸಲಾಗಿದೆ.

ಇವತ್ತು ಎಸ್​ಪಿ (SP) ಮಿಥುನ್ ಕುಮಾರ್ ಜಿ.ಕೆ. ಸಿಗ್ನಲ್ ಲೈಟ್‌ಗೆ ಚಾಲನೆ ನೀಡಿದರು. ಈ ಭಾಗದಲ್ಲಿ ಸಿಗ್ನಲ್​ ಲೈಟ್​ ಇಲ್ಲದೇ ವಾಹನ ದಟ್ಟಣೆ ಉಂಟಾಗುತ್ತಿತ್ತು, ವಿಶೇಷವಾಗಿ ಸರ್ಕಲ್​ನಲ್ಲಿ ವಾಹನಗಳು ಜಾಮ್ ಆಗಿ, ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿಗೆ ತಾತ್ಕಾಲಿಕವದ ಟ್ರಾಫಿಕ್ ಸಿಗ್ನಲ್​  ಲೈಟ್ ಅಳವಡಿಸಲಾಗಿದೆ.

Usha nursing home Circle
Usha nursing home Circle

Usha nursing home Circle

ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಪಿ ಮಿಥುನ್ ಕುಮಾರ್, ಸಂಚಾರ ದಟ್ಟಣೆ ನಿಯಂತ್ರಣದ ಸಂಬಂಧ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳ ನಿರಂತರ ಬೇಡಿಕೆಯ ಮೇರೆಗೆ ಉಷಾ ನರ್ಸಿಂಗ್ ಹೊಮ್​ ಸರ್ಕಲ್​ನಲ್ಲಿ ಈ ಟ್ರಾಫಿಕ್ ಸಿಗ್ನಲ್ (Traffic Signal) ಅಳವಡಿಸಲಾಗಿದೆ ಎಂದು ತಿಳಿಸಿದರು.  

ಅಲ್ಲದೆ ಇದೇ ವೇಳೆ ,  ವಾಹನ ಸವಾರರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು (Traffic Rules) ಪಾಲಿಸಬೇಕು ಎಂದು ಎಸ್‌ಪಿ ಮಿಥುನ್ ಕುಮಾರ್ ಮನವಿ ಮಾಡಿದರು.

ಪೊಲೀಸ್ ಅಧಿಕಾರಿಗಳು ಇದ್ದಾರೆ, ಟ್ರಾಫಿಕ್ ಸಿಗ್ನಲ್ ಇದೆ ಎಂಬ ಕಾರಣಕ್ಕೆ ಮಾತ್ರವಲ್ಲದೆ, ನಿಮ್ಮ ಸುರಕ್ಷತೆಯ (Safety) ದೃಷ್ಟಿಯಿಂದಲೂ ನಿಯಮಗಳನ್ನು ಪಾಲಿಸಿ. 

ನಿಮ್ಮ ಕುಟುಂಬ, ಸ್ನೇಹಿತರು, ಅವಲಂಬಿತರು ಮತ್ತು ನಿಮ್ಮ ಜೀವದ ಸುರಕ್ಷತೆಯ ಹಿನ್ನೆಲೆಯಲ್ಲಿ ಸಂಚಾರ ನಿಯಮ ಪಾಲನೆ ಅತ್ಯವಶ್ಯಕ ಎಂದು ತಿಳಿಸಿದರು. 

ಸೀಟ್‌ಬೆಲ್ಟ್ (Seatbelt), ಹೆಲ್ಮೆಟ್ (Helmet) ಧರಿಸುವುದರಿಂದಲೇ ಮಾರಣಾಂತಿಕ ಅಪಘಾತಗಳಿಂದ ಜೀವ ಉಳಿಸಿಕೊಳ್ಳಬಹುದಾಗಿದೆ. ಸಾಮಾನ್ಯ ಸಂಚಾರ ನಿಯಮಗಳನ್ನು ಪಾಲಿಸದೇ ಇದ್ದ ಸಂದರ್ಭದಲ್ಲಿ ಸಣ್ಣಪುಟ್ಟ ಅಪಘಾತಗಳೂ ಸಹ ಪ್ರಾಣಕ್ಕೆ ಮುಳುವಾಗುವ ಸಾಧ್ಯತೆ ಇರುತ್ತದೆ ಎಂದರು. 

Usha nursing home Circle
Usha nursing home Circle

Usha nursing home Circle

ಈ ಸಂದರ್ಭದಲ್ಲಿ ಶಿವಮೊಗ್ಗ ಸಂಚಾರ ವೃತ್ತದ ಸಿಪಿಐ ದೇವರಾಜ್, ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ತಿರುಮಲೇಶ್, ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ನವೀನ್ ಎಂ. ಹಾಗೂ ಸ್ಥಳೀಯ ಮುಖಂಡರಾದ ಯೋಗೇಶ್, ಸಂತೋಷ್ ಬೆಳ್ಳಿಕೆರೆ, ಉದಯ್ ದಾಸ್ ಮತ್ತು ಸ್ಥಳೀಯ ಸಾರ್ವಜನಿಕರು ಉಪಸ್ಥಿತರಿದ್ದರು.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ https://chat.whatsapp.com/CTxKdbjEu0zLLQD5RTVkRt

TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h

ಶಿವಮೊಗ್ಗದ ವಿಶೇಷ ಸುದ್ದಿಗಳಿಗಾಗಿ ಈ ಲಿಂಕ್​ ಕ್ಲಿಕ್ ಮಾಡಿ : https://malenadutoday.com/category/shivamogga/

Shivamogga Usha nursing home Circle Gets Temporary Traffic Signal 

Shivamogga Police inaugurates a temporary traffic signal at Usha nursing home Circle 

ಉಷಾ ನರ್ಸಿಂಗ್ ಹೊಮ್​ ಸರ್ಕಲ್​, ಶಿವಮೊಗ್ಗ, ಉಷಾ ವೃತ್ತ, ಟ್ರಾಫಿಕ್ ಸಿಗ್ನಲ್, ಸಂಚಾರ ದಟ್ಟಣೆ, ಪೊಲೀಸ್ ಅಧೀಕ್ಷಕ, ಮಿಥುನ್ ಕುಮಾರ್, ಸಂಚಾರ ನಿಯಮಗಳು, ರಸ್ತೆ ಸುರಕ್ಷತೆ, ಅಪಘಾತ ತಡೆಗಟ್ಟುವಿಕೆ, ಸೀಟ್‌ಬೆಲ್ಟ್, ಹೆಲ್ಮೆಟ್ Shivamogga, Usha Circle, Usha nursing home Circle , Traffic Signal, Traffic Congestion, Police Superintendent,

Mithun Kumar, Traffic Rules, Road Safety, Accident Prevention, Seatbelt, Helmet , #ShivamoggaTraffic #RoadSafety #TrafficSignal #PoliceInitiative #UshaCircle #TrafficRules #AccidentPrevention #ShivamoggaPolice #CommunitySafety

Share This Article