Shivamogga to Mantralayam Padayatra : july 10, ಶಿವಮೊಗ್ಗದಿಂದ ಮಂತ್ರಾಲಯಕ್ಕೆ ಅರ್ಚಕ ಪವನ್ ಭಟ್ ಪಾದಯಾತ್ರೆ
ನಾಡಿನ ಸಮಸ್ತ ಜನತೆಯ ಒಳಿತಿಗಾಗಿ ಶಿವಮೊಗ್ಗದ ಅರ್ಚಕರೊಬ್ಬರು ಶಿವಮೊಗ್ಗದಿಂದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಇಂದು ಪಾದಯಾತ್ರೆ ಹೊರಟಿದ್ದಾರೆ.
ಅರ್ಚಕ ಪವನ್ ಭಟ್ ಕಳೆದ ಎರಡು ವರ್ಷದಿಂದ ಅವರು ಮಂತ್ರಾಲಯಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ. ನಾಡಿನ ಸಮಸ್ತ ಜನರ ಹಾಗೂ ತಮ್ಮ ಕುಟುಂಬದ ಆರೋಗ್ಯ ವೃದ್ದಿಗಾಗಿ ಈ ಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆ.
ಈ ಕುರಿತು ಮಾತನಾಡಿದ ಪವನ್ ಕುಮಾರ್ ಭಟ್ ಇದು ನನ್ನ 2 ನೇ ವರ್ಷದ ಪಾದಯಾತ್ರೆಯಾಗಿದೆ. ಇವತ್ತು ಹೊರಟರೆ ಮಂತ್ರಾಲಯಕ್ಕೆ ತಲುಪಲು ಸರಿಸುಮಾರು 13 ದಿನ ಬೇಕಾಗುತ್ತದೆ. ಅಲ್ಲಿಗೆ ತೆರಳಿ ಅಲ್ಲಿಂದ ನಾನು ರೈಲಿನ ಮೂಲಕ ಪ್ರಯಾಗ್ ರಾಜ್ ಹಾಗೂ ರಾಜಸ್ಥಾನ್ಗೆ ತೆರಳುತ್ತೇನೆ. ನನ್ನ ಉಸಿರು ಇರುವವರೆಗೂ ನಾನೂ ಪ್ರತಿ ವರ್ಷ ಮಂತ್ರಾಲಯಕ್ಕೆ ಪಾದಯಾತ್ರೆ ಮಾಡುತ್ತೇನೆ ಎಂದಿದ್ದಾರೆ.

