Sexual harassment allegations at SIMS Medical College ಶಿವಮೊಗ್ಗ: ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಲೈಂಗಿಕ ಕಿರುಕುಳ ಆರೋಪ – ಸಹ ಪ್ರಾಧ್ಯಾಪಕ ವಿರುದ್ಧ FIR
ಶಿವಮೊಗ್ಗ, ಜೂನ್ 24, 2025 (ಮಲೆನಾಡು ಟುಡೆ ಸುದ್ದಿ ಸಂಸ್ಥೆ): ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್) ಮೆಡಿಕಲ್ ಕಾಲೇಜಿನಲ್ಲಿ ಮತ್ತೊಂದು ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಹ ದಾಖಲಾಗಿದೆ. ವೈಯಕ್ತಿಕ ವಿವರಗಳನ್ನು ಗೌಪ್ಯವಾಗಿ ಇಡಲಾಗಿದೆ.
ಘಟನೆಯ ಸಾರಾಂಶವನ್ನು ನೋಡುವುದಾದರೆ, ಸೆಕ್ಷನ್ 75 (2) ಅಡಿಯಲ್ಲಿ ಕೇಸ್ ದಾಖಲಾಗಿದೆ. ಅಲ್ಲದೆ ಎಸ್ಇ/ಎಸ್ಟಿ ಪಿಒಎ ಆಕ್ಟ್ನಡಿಯಲ್ಲಿ ಎಪ್ಐಆರ್ ದರ್ಜ್ ಆಗಿದೆ.

sims Medical College
ಸೇಕ್ಷನ್ 75(2 )ಬಿಎನ್ಎಸ್ ಕಾಯ್ದೆಯ ಅಡಿಯಲ್ಲಿ ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆ ಅಥವಾ ವಿನಂತಿಸುವುದು ಅಪರಾಧವಾಗುತ್ತದೆ. ಒಬ್ಬ ಮಹಿಳೆಯಿಂದ ಲೈಂಗಿಕ ಸಹಕಾರವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಕೇಳುವುದು ಅಥವಾ ಬೇಡಿಕೆ ಇಡುವುದು ಅಪರಾಧವಾಗಿದೆ. ಇದು ಯಾವುದೇ ರೂಪದಲ್ಲಿರಬಹುದು.
sims Medical College
ಉದಾಹರಣೆಗೆ ಉದ್ಯೋಗ, ಬಡ್ತಿ, ಅಥವಾ ಇನ್ನಿತರ ಸವಲತ್ತುಗಳಿಗೆ ಬದಲಾಗಿ ಲೈಂಗಿಕ ಅನುಕೂಲಗಳನ್ನು ಕೇಳುವುದು ಅಪರಾಧವಾಗಿದೆ. ಈ ಕಾಯ್ದೆಯಡಿಯಲ್ಲಿ ಸದ್ಯ ಕೇಸ್ ದಾಖಲಾಗಿದೆ. ಕಾಲೇಜಿನ ಸಹ ಪ್ರಾದ್ಯಾಪಕರ ವಿರುದ್ಧ ಈ ಸಂತ್ರಸ್ತೆಯೊಬ್ಬರು ಈ ಆರೋಪ ಮಾಡಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇನ್ನೂ ಈ ಬಗ್ಗೆ ಕಾಲೇಜಿನ ಆಡಳಿತ ಅಧಿಕಾರಿ ಈ ಸಂಬಂಧ ಆಂತರಿಕ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ತಿಳಿಸಿದ್ದಾರೆ ಎಂದು ರಾಷ್ಟ್ರೀಯ ಮಾದ್ಯಮವೊಂದು ವರದಿ ಮಾಡಿದೆ.