dc notice to kantara 1 / ಹಿನ್ನೀರಿನಲ್ಲಿ ಕಾಂತಾರದ ನಿಗೂಢತೆ! / ನೋಟಿಸ್​ ಕೊಟ್ಟು ವಿಚಾರ ತಿಳಿಯಲು ಮುಂದಾದ ಡಿಸಿ

Malenadu Today

dc notice to kantara 1 ‘ಕಾಂತಾರ’ ಚಿತ್ರತಂಡಕ್ಕೆ ಜಿಲ್ಲಾಧಿಕಾರಿಯಿಂದ ನೋಟಿಸ್ ಸಿದ್ಧತೆ

ಶಿವಮೊಗ್ಗ: ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ ಅಧ್ಯಾಯ-1’ ಚಿತ್ರತಂಡ ನಿನ್ನೆ ದಿನ ನಡೆದಿರುವ ಘಟನೆ ಬಗ್ಗೆ ಇದುವರೆಗೂ ಮಾಹಿತಿ ನೀಡಿಲ್ಲ. ಈ ನಿಟ್ಟಿನಲ್ಲಿ ಸ್ವತಃ ಜಿಲ್ಲಾಧಿಕಾರಿ ಕಾಂತಾರ ಸಿನಿಮಾ ತಂಡಕ್ಕೆ ನೋಟಿಸ್ ನೀಡಲು ಮುಂದಾಗಿದ್ದಾರೆ. ಕಾಂತಾರ ಚಿತ್ರತಂಡ ಚಿತ್ರೀಕರಣಕ್ಕೆ ಅನುಮತಿ ಪಡೆದಿದ್ದಾರೆಯೇ ಅಥವಾ ಇಲ್ಲವೇ ಎಂಬ ಕುರಿತು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ನಾಳೆ (ಜೂನ್ 16, 2025) ನೋಟಿಸ್ ಜಾರಿಗೊಳಿಸಲು ಸಿದ್ಧತೆ ನಡೆಸಿದ್ದಾರೆ. ಈ ಬಗ್ಗೆ ನ್ಯೂಸ್​ ವಾಹಿನಿ 

ರಿಪಬ್ಲಿಕ್ ಕನ್ನಡಕ್ಕೆ  ಸಂದರ್ಶನ ನೀಡುತ್ತಿದ್ದ ವೇಳೇ ಮಾತನಾಡಿದ   ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು, “ಕಾಂತಾರ ಚಿತ್ರತಂಡ ಅನುಮತಿ ಪಡೆದುಕೊಂಡಿದೆಯೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟೀಕರಣ ಕೇಳಿ ನೋಟಿಸ್ ನೀಡಲಾಗುವುದು” ಎಂದು ತಿಳಿಸಿದ್ದಾರೆ.

ಇದನ್ನು ಸಹ ಓದಿ : rishab Shetty Kantara-1 / ಪಿಕಪ್​ ಡ್ಯಾಂ ಹಿನ್ನೀರಿನಲ್ಲಿ ಕಾಂತಾರ ದ ದೋಣಿ ಮುಳುಗಿದ ನಿಗೂಢತೆ ಏನು? 

Share This Article