rishab Shetty Kantara-1 / ಪಿಕಪ್​ ಡ್ಯಾಂ ಹಿನ್ನೀರಿನಲ್ಲಿ ಕಾಂತಾರ ದ ದೋಣಿ ಮುಳುಗಿದ ನಿಗೂಢತೆ ಏನು?

ಕೊನೆಯ ನವೀಕರಣ: 17 ಜೂನ್ 2025, 6:43 ಅಪರಾಹ್ನ

ಹಂಚಿಕೊಳ್ಳಿ
WhatsApp Facebook X Telegram
rishab Shetty Kantara-1
rishab Shetty Kantara-1

rishab Shetty Kantara-1 / ರಿಷಬ್ ಶೆಟ್ಟಿ ‘ಕಾಂತಾರ-1‘ ಚಿತ್ರೀಕರಣದ ವೇಳೆ ದೋಣಿ ಮಗುಚಿ ಅಪಾಯ: ಎಲ್ಲರೂ ಸುರಕ್ಷಿತ

ಶಿವಮೊಗ್ಗ: ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರ ಬಹು ನಿರೀಕ್ಷಿತ ‘ಕಾಂತಾರ-1’ ಚಿತ್ರದ ಚಿತ್ರೀಕರಣದ ವೇಳೆ ಮತ್ತೊಂದು ಅನಿರೀಕ್ಷಿತ ಘಟನೆಯೊಂದು ನಡೆದಿದೆ ಎನ್ನಲಾಗಿದೆ. ಆದರೆ ಇದಕ್ಕೆ ಅಧಿಕೃತ ಉತ್ತರ ಮಾತ್ರ ಸಿಗುತ್ತಿಲ್ಲ. ಶಿವಮೊಗ್ಗ ಜಿಲ್ಲೆ ಮಾಣಿ ಡ್ಯಾಂ ಹಿನ್ನೀರಿನಲ್ಲಿನ ನಿರ್ಬಂಧಿತ ವಲಯದಲ್ಲಿ ಕಾಂತಾರ 1 ಶೂಟಿಂಗ್ ನಡೆಯುತ್ತಿದೆ.

ಈ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದ ಕೇರಳದ ಕಲಾವಿದ ಆಗುಂಬೆ ಹೋಂ ಸ್ಟೇನ್​ಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದ ಘಟನೆ ಬೆನ್ನಲ್ಲೆ ನಿನ್ನೆ ಸಂಜೆ ಕಾಂತಾರ ಸಿನಿಮಾ ಸೆಟ್​ನ ಸಮೀಪದಲ್ಲಿ ಕಲಾವಿದರು ತಂತ್ರಜ್ಱರಿದ್ದ ದೋಣಿ ಮಗುಚಿದೆ ಎಂಬ ವರ್ತಮಾನ ಬಂದಿದೆ. ಮೂರು ಅಡಿಯಷ್ಟಿದ್ದ ನೀರಿದ್ದ ಪಿಕಪ್​ ಡ್ಯಾಂನ ಹಿನ್ನೀರಿನಲ್ಲಿ ಶೂಟಿಂಗ್ ನಡೆಸ್ತಿದ್ದಾಗ ಲೋಡ್ ಜಾಸ್ತಿಯಾಗಿ ದೋಣಿ ಮಗುಚಿದೆ ಎನ್ನಲಾಗುತ್ತಿದೆ. ಆದರೆ 12 ಗಂಟೆ ಕಳೆದರೂ ನಡೆದಿದ್ದು ಏನು??ಎತ್ತ ಇತ್ಯಾದಿ ಯಾವುದೇ ಮಾಹಿತಿಗಳನ್ನು ಚಿತ್ರತಂಡ ಒದಗಿಸಿಲ್ಲ. ಇತ್ತ ಶಿವಮೊಗ್ಗ ಪೊಲೀಸ್ ಇಲಾಖೆಗೂ ನಡೆದಿದ್ದರ ಮಾಹಿತಿ ಇಲ್ಲ.

ಸ್ಥಳೀಯ ವರದಿ ಪ್ರಕಾರ, ಚಿತ್ರೀಕರಣ ನಡೆಯುತ್ತಿರುವ ಸ್ಥಳಕ್ಕೆ ಪೊಲೀಸರಿಗೂ ಸಹ ಹೋಗಲು ಅವಕಾಶ ಸಿಗುತ್ತಿಲ್ಲ ಎನ್ನಲಾಗಿದೆ. ಇದುನಿಜವಾಗಿದ್ದರೇ, ಮಲೆನಾಡ ದಟ್ಟಾರಣ್ಯದಲ್ಲಿ ಕಾಂತಾರ ಸಿನಿಮಾ ಚಿತ್ರೀಕರಣ ನಿಗೂಢ ಎನಿಸಿಕೊಳ್ಳುತ್ತದೆ. ಇನ್ನೂ ಕೆಪಿಸಿ ವ್ಯಾಪ್ತಿಯ ನಿರ್ಬಂಧಿತ ಪ್ರದೇಶದಲ್ಲಿ ಜನ ಓಡಾಟಕ್ಕೆ ಪಾಸ್ ಬೇಕಾಗುತ್ತದೆ. ಅಂತ್ರದಲ್ಲಿ ಅಲ್ಲಿ ಸಿನಿಮಾ ಚಿತ್ರೀಕರಣ ನಡೆಸಲು ಅನುಮತಿ ನೀಡಿರುವ ಕೆಪಿಸಿಯು ಸಹ ಹಿನ್ನೀರಿನಲ್ಲಿ ನಡೆದ ಘಟನೆಯ ಸ್ಪಷ್ಟತೆಯನ್ನು ಅರಿಯಬೇಕಾಗುತ್ತದೆ. ಆದರೆ ಕೆಪಿಸಿಯಲ್ಲಿಯು ಈ ಬಗ್ಗೆ ಮಾಹಿತಿಯಿಲ್ಲ. 

rishab Shetty Kantara-1

ಸದ್ಯ ಮಲೆನಾಡು ಟುಡೆಗೆ ಮಾಹಿತಿ ಸಿಕ್ಕ ಮಾಹಿತಿ ಪ್ರಕಾರ, ತೀರ್ಥಹಳ್ಳಿಯಲ್ಲಿ ಶೂಟಿಂಗ್ ನಡೆಸ್ತಿರುವ ಕಾಂತಾರ ಚಿತ್ರತಂಡ ತನ್ನದೆ ಆದ ವಿಶೇಷ ಆಂಬುಲೆನ್ಸ್​ನ್ನು ಸಹ ಹೊಂದಿದೆ. ಕಲಾ ತಂತ್ರಜ್ಙರ ಸಂಘದ ಷರತ್ತುಗಳಂತೆ ತುರ್ತು ಕ್ರಮಕ್ಕಾಗಿ ಈ ಆಂಬುಲೆನ್ಸ್​ನ್ನು ಚಿತ್ರ ತಂಡ ಬಳಸಿಕೊಳ್ಳುತ್ತಿದೆ. ಮತ್ತು ದೊಡ್ಡ ಮಟ್ಟದ ಸಿಬ್ಬಂದಿ ಹಾಗೂ ಕಲಾತಂಡವನ್ನು ಬಳಸಿಕೊಂಡು ಕಾಂತಾರ ಸಿನಿಮಾದ ಚಿತ್ರೀಕರಣ ಮಾಡುವಾಗ ಪ್ರತಿದಿನ ಸಣ್ಣಪುಟ್ಟ ಅವಗಢಗಳು ನಡೆಯುತ್ತಿರುತ್ತವೆ. ಅಂತಹ ಸಂದರ್ಭವೊಂದು ನಿನ್ನೆ ಸೃಷ್ಟಿಯಾಗಿದೆ ಎನ್ನಲಾಗುತ್ತಿದೆ. ಇನ್ನೂ ತೀರ್ಥಹಳ್ಳಿಯಲ್ಲಿ ಕಾಂತಾರದ ಆಂಬುಲೆನ್ಸ್​ ಓಡಾಡುತ್ತಲೇ, ಎಂತದೋ ಆತ್ ಕಣೋ ಎನ್ನುವ ಚರ್ಚೆಗಳು ಕಿವಿ ಟು ಕಿವಿಗೆ ಪಾಸ್ ಆಗುತ್ತಿದೆ. ಆದರೆ ಈ ನಿಟ್ಟಿನಲ್ಲಿ, ಪ್ರತಿಯೊಂದಕ್ಕೂ ಸಕಲ ವ್ಯವಸ್ಥೆ ಮಾಡಿಕೊಂಡಿರುವ ಕಾಂತಾರ ಚಿತ್ರತಂಡ , ನಡೆದಿದೆ ಎನ್ನಲಾಗುವ ಘಟನೆಗಳಿಗೆ ಒಂದು ಪ್ರಕಟಣೆಯನ್ನು ನೀಡುವ ವ್ಯವಸ್ಥೆಯನ್ನು ಮಾಡಬಹುದಿತ್ತು. 

 ಇನ್ನೂ ಘಟನೆ ವಿಚಾರಕ್ಕೆ ಬಂದರೆ, ನೋಡಿದವರು , ಕೇಳಿದವರು ಹೇಳುವ ಪ್ರಕಾರ, ನಿನ್ನೆ ಯಡೂರು ಹತ್ತರ ಮೇಲಿನಕೋಪ್ಪದಲ್ಲಿ ನಡೆದ ಘಟನೆಯಲ್ಲಿ ಸ್ವತಃ ನಟ ರಿಷಬ್ ಶೆಟ್ಟಿ ಸೇರಿದಂತೆ ಸುಮಾರು 30 ಮಂದಿ ಚಿತ್ರತಂಡದ ಸದಸ್ಯರು ದೋಣಿಯಲ್ಲಿದ್ದರು ಎಂದು ತಿಳಿದುಬಂದಿದೆ. ದೋಣಿ ಮಗುಚಿದ ಪರಿಣಾಮ, ಕ್ಯಾಮೆರಾ ಸೇರಿದಂತೆ ಹಲವು ಚಿತ್ರೀಕರಣ ಉಪಕರಣಗಳು ನೀರಿನಲ್ಲಿ ಮುಳುಗಿ ಹಾನಿಗೊಳಗಾಗಿವೆ ಅಂತೆ.

rishab Shetty Kantara-1

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor