karnataka police news 06-06-2025 / ಬೆಂಗಳೂರು ಕಲ್ಕೆರೆ ಮಂಜನ ಕಾಲಿಗೆ ಶಿವಮೊಗ್ಗ ಜಯನಗರ ಪೊಲೀಸರ ಗುಂಡೇಟು!

Malenadu Today

karnataka police news ಶಿವಮೊಗ್ಗದಲ್ಲಿ ಅಂತರರಾಜ್ಯ ಕಳ್ಳನ ಸೆರೆಗೆ ಗುಂಡೇಟು

ಶಿವಮೊಗ್ಗದಲ್ಲಿ ಕುಖ್ಯಾತ ಅಂತರರಾಜ್ಯ ಕಳ್ಳ ಮಂಜುನಾಥ್ ಅಲಿಯಾಸ್ ಕಲ್ಕೆರೆ ಮಂಜನನ್ನು ಬಂಧಿಸುವ ಕಾರ್ಯಾಚರಣೆ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಜಯನಗರ ಠಾಣೆ ಪೊಲೀಸರು ಇಂದು (ಗುರುವಾರ, ಜೂನ್ 5, 2025) ಬೆಳಗ್ಗೆ ಈ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು ಕಲ್ಕೆರೆ ಮೂಲದ 47 ವರ್ಷ ಮಂಜ, ಕುಖ್ಯಾತ ಕಳ್ಳನಾಗಿದ್ದು, ಆತನ ವಿರುದ್ಧ ಹಲವು ಪ್ರಕರಣಗಳಿವೆ. ಈತ 

ಕಳೆದ ಕೆಲವು ದಿನಗಳಿಂದ ಕಲ್ಕೆರೆ ಮಂಜ ಶಿವಮೊಗ್ಗದಲ್ಲಿ ಓಡಾಡುತ್ತಿದ್ದ. ಈ ಸಂಬಂಧ  ಬಗ್ಗೆ ಪೊಲೀಸರಿಗೆ ಸುಳಿವು ಲಭ್ಯವಾಗಿ, ಆತನನ್ನು ಹುಡುಕಾಡುತ್ತಿದ್ದರು.  ಇಂದು ಬೆಳಗ್ಗೆ ಆತನನ್ನು ಬಂಧಿಸಲು ತೆರಳಿದ್ದ ವೇಳೇ, ಮಂಜ ಪೊಲೀಸ್ ಸಿಬ್ಬಂದಿ ದ್ಯಾಮಪ್ಪ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ,  ಈ ಸಂದರ್ಭದಲ್ಲಿ, ಜಯನಗರ ಪಿಎಸ್‌ಐ ನವೀನ್ ಬ್ಯಾಕೋಡ್ ಮೊದಲು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಬಳಿಕ ಆತನ ಕಾಲಿಗೆ  ಬುಲೆಟ್ ಫೈರ್ ಮಾಡಿದ್ದಾರೆ. ಕಲ್ಕೆರೆ ಮಂಜನ ಎಡಗಾಲಿಗೆ ಗುಂಡು ತಗುಲಿದ್ದು ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಘಟನೆಯಲ್ಲಿ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ದ್ಯಾಮಪ್ಪರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ. 

karnataka police news Shivamogga Police Shoot Inter-State Thief

Share This Article