police shootout shivamogga today  / ಆನಂದಪುರ ಪೊಲೀಸರ ಕಾರ್ಯಾಚರಣೆ! ಹೆದ್ದಾರಿ ದರೋಡೆ ಕೇಸ್​, ಶ್ಯಾಡೋ ಸಚಿನ್​ಗೆ ಗುಂಡೇಟು

Malenadu Today

police shootout shivamogga today  

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರ ಪೊಲೀಸ್ ಠಾಣೆ ಪೊಲೀಸರು ಆರೋಪಿಯೊಬ್ಬನ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ.  ಆನಂದಪುರ ಪೊಲೀಸ್  ಠಾಣೆಯ PSI ಯುವರಾಜ್ ಆರೋಪಿ ಕಾಲಿಗೆ ಗುಂಡೇಟು ನೀಡಿದ್ದಾರೆ.  ರಾಷ್ಟ್ರಿಯ ಹೆದ್ದಾರಿಯಲ್ಲಿ ನಡೆದಿದ್ದ ದರೋಡೆ ಪ್ರಕರಣ ಸಂಬಂಧ ಆರೋಪಿ ಶ್ಯಾಡೋ ಸಚಿನ್​ನನ್ನು ಬಂಧನಕ್ಕೆ ತೆರಳಿದ್ದಾಗ ಆತ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ. ಈ ವೇಳೆ ರಕ್ಷಣಾತ್ಮಕ ಕ್ರಮವಾಗಿ ಪಿಎಸ್​ಐ ಆತನ ಕಾಲಿಗೆ ಗುಂಡು ಹಾರಿಸಿ ಗಾಯಗೊಳಿಸಿದ್ದು, ಬಳಿಕ ಆತನನ್ನು ವಶಕ್ಕೆ ಪಡೆದಿದ್ದಾರೆ. ಸಾಗರ ಮೆಣಸಿನ ಸರದ ಬಳಿ ಆರೋಪಿಯನ್ನು ಹಿಡಿಯಲು ಯತ್ನಿಸಿದಾಗ ಆತ ಹೆಡ್ ಕಾನ್ಸ್ಟೇಬಲ್ ಆಶೋಕ್ ರವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಅಲ್ಲದೆ  ಪಿಎಸ್ಐ ಯುವರಾಜ್ ರ ಮೇಲೆ ಹಲ್ಲೆಗೆ ಮುಂದಾದಾಗ ಪೊಲೀಸ್ ಅಧಿಕಾರಿ ಗುಂಡೇಟು ನೀಡಿದ್ದಾರೆ. 

 police shootout shivamogga today  
police shootout shivamogga today

 

Share This Article