shivamogga 112 news today / ಶಿವಮೊಗ್ಗ ಜಿಲ್ಲೆಯಲ್ಲಿ 112 ಪೊಲೀಸರು ಸದಾ ಕಾಲ ಜನರ ಸೇವೆಗೆ ಎಂದು ಓಡಾಡುತ್ತಿರುತ್ತಾರೆ. ಅವರಿಗೆ ಎದುರಾಗುವ ಸವಾಲುಗಳು ಅಚ್ಚರಿ ಮೂಡಿಸುತ್ತದೆ. ಮನೆ ಮನೆ ಕಥೆಯ ಸಮಸ್ಯೆಗಳನ್ನು ಅವರು ಹೇಗೆ ಇತ್ಯರ್ಥ ಪಡಿಸುತ್ತಾರೆ ಎಂಬುದನ್ನು ಸಂಕ್ಷಿಪ್ತವಾಗಿ ಒದಗಿಸುವ ಮಲೆನಾಡು ಟುಡೆ ಸುದ್ದಿ ವಿಭಾಗದ ಇವತ್ತಿನ ವರದಿ ಹೀಗಿದೆ.
ಸುದ್ದಿ : 1 ಮದುವೆಯಾಗುವುದಾಗಿ ನಂಬಿಸಿ ಮೋಸ 112 ಎಂಟ್ರಿ shivamogga 112 news today /
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ದಿ:01.06.2025ರಂದು 112 ಪೊಲೀಸರಿಗೆ ಕರೆಯೊಂದು ಬಂದಿದೆ. ಅದರಲ್ಲಿ ಸಂಬಂಧಿಸಿದವರು, ತಮ್ಮ ಊರಿನ ವ್ಯಕ್ತಿ ಒಬ್ಬ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವುದಾಗಿ ತಿಳಿಸಿದ್ದಾರೆ. ವಿಷಯ ತಿಳಿದು ತಡಮಾಡದ 112 ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು ವಿಚಾರಣೆ ನಡೆಸಿದರು. ಬಳಿಕ ಈ ಸಂಬಂಧ ಠಾಣೆಗೆ ಬಂದು ಆರೋಪಿತ ವ್ಯಕ್ತಿಯ ಮೇಲೆ ದೂರು ನೀಡುವಂತೆ ತಿಳಿಸಿ ಸಂತ್ರಸ್ತೆಗೆ ರಕ್ಷಣೆ ಒದಗಿಸಿದರು.

ಸುದ್ದಿ 2: ಗಂಡ & ಅತ್ತೆಯಿಂದ ತೊಂದರೆshivamogga 112 news today
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೊಸಮನೆ ಪೊಲೀಸ್ ಠಾಣೆಯ ಲಿಮಿಟ್ಸ್ ನಲ್ಲಿ ಕಳೆದ ದಿ:01.06.2025ರಂದು 112 ಪೊಲೀಸರಿಗೆ ಕರೆ ಮಾಡಿದ ಸಂತ್ರಸ್ತರು ತಮ್ಮ ಗಂಡ ಹಾಗೂ ಅತ್ತೆ ತಮ್ಮ ಮನೆಯ ಹತ್ತಿರ ಬಂದು ತಮ್ಮ ತಾಯಿಗೆ ತೊಂದರೆ ನೀಡುತ್ತಿರುವುದಾಗಿ ತಿಳಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ERV ಸಿಬ್ಬಂದಿಗಳು ಇಬ್ಬರಿಗೂ ಸೂಕ್ತ ತಿಳುವಳಿಕೆ ನೀಡಿದ್ದು ಸಮಸ್ಯೆ ಇದ್ದರೆ ಠಾಣೆಗೆ ಬಂದು ದೂರು ನೀಡಲು ತಿಳಿಸಿದರು.

ಸುದ್ದಿ 3 : ತಂದೆಗೆ ಮಗನ ನಡುವೆ ಫೈಟ್shivamogga 112 news today
ದಿ:01.06.2025ರಂದು ಕೋಟೆ ಠಾಣಾ ವ್ಯಾಪ್ತಿಯಿಂದ ದೂರುದಾರರು 112ಗೆ ಕರೆ ಮಾಡಿ ತಂದೆ ಹಾಗೂ ಮಗನ ನಡುವೆ ಕೌಟುಂಬಿಕ ವಿಚಾರವಾಗಿ ಗಲಾಟೆ ಆಗಿರುವುದಾಗಿ ವ್ಯಕ್ತಿಯೊಬ್ಬರು ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ತೆರಳಿದ ERV ಸಿಬ್ಬಂದಿ ಗಲಾಟೆ ನಿಲ್ಲಿಸಿದರಷ್ಟೆ ಅಲ್ಲದೆ ಅಪ್ಪ ಮಗನಿಗೆ ತಿಳುವಳಿಕೆ ಹೇಳಿದ್ದಾರೆ. ಅಲ್ಲದೆ ಸಮಸ್ಯೆಯಾದರೆ ಠಾಣೆಗೆ ಬಂದು ದೂರು ನೀಡಲು ತಿಳಿಸಿ, ಪ್ರಕರಣ ಇತ್ಯರ್ಥ ಪಡಿಸಿದರು.
ಸುದ್ದಿ 4: ರಸ್ತೆಗೆ ಅಡ್ಡಬಿದ್ದ ಮರ
ಕಳೆದ ದಿ:01.06.2025ರಂದು ಆನಂದಪುರ ಠಾಣಾ ವ್ಯಾಪ್ತಿಯಲ್ಲಿ ಬರುವ ಕೋಣೆ ಹೊಸೂರಿನ ಬಳಿ ರಸ್ತೆಗೆ ದೊಡ್ಡ ಮರವೊಂದು ಬಿದ್ದು ಸಂಚಾರಕ್ಕೆ ತೊಂದರೆಯಾಗಿತ್ತು. ಈ ಹಿನ್ನೆಯಲ್ಲಿ ಸ್ಥಳೀಯರು 112 ಸಿಬ್ಬಂದಿಗೆ ಕರೆ ಮಾಡಿದ್ದರು. ತಕ್ಷಣವೇ ಸ್ಥಳಕ್ಕೆ ಸಿಬ್ಬಂದ ದೌಡಾಯಿಸಿದ್ದರು. ಅದೇ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯು ಸ್ಥಳಕ್ಕೆ ಬಂದಿದ್ದರು. ಸ್ಥಳೀಯರ ಸಹಾಯದಿಂದ ರಸ್ತೆಯಿಂದ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಲಾಯ್ತು.
