rippon pete : ರಿಪ್ಪನ್ ಪೇಟೆ : ವಿವಾಹಿತ ಮಹಿಳೆಯೊಬ್ಬರು ತನ್ನ ಪ್ರಿಯಕರನೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಿಪ್ಪನ್ ಪೇಟೆ ಸಮೀಪದ ತಮ್ಮಡಿಕೊಪ್ಪದಲ್ಲಿ ನಡೆದಿದೆ.ಸುಜಾತ (33) ಹಾಗೂ ಸಚಿನ್ (27) ಮೃತರು.
rippon pete : ಏನಿದು ಘಟನೆ
ಸುಜಾತ ಎಂಬುವವರಿಗೆ 14 ವರ್ಷದ ಹಿಂದೆ ಮದುವೆ ಆಗಿತ್ತು. ದಂಪತಿಗಳಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಆಕೆಯ ಪತಿ ನಾಪತ್ತೆಯಾಗಿದ್ದ. ಆ ಹಿನ್ನಲೆ ಬೆಳಗಾವಿ ಗಂಡನ ಮನೆಯಲ್ಲಿದ್ದ ಸುಜಾತ ತನ್ನ ತವರು ಮನೆಯಾದ ರಿಪ್ಪನ್ ಪೇಟೆಗೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದರು. ಆವೇಳೆ ಆಕಸ್ಮಿಕವಾಗಿ ಫೋನ್ ಕರೆ ಮೂಲಕ ಆಯನೂರು ಕೋಟೆ ಗ್ರಾಮದಲ್ಲಿ ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಸಚಿನ್ ಎಂಬಾತನ ಪರಿಚಯವಾಗಿದೆ. ನಂತರ ಆ ಪರಿಚಯ ಪ್ರೀತಿಗೆ ತಿರುಗಿ ಇಬ್ಬರು ಸಹ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ನಂತರ ಸಚಿನ್ ಆಕೆಗೆ ಬಾಳು ಕೊಡುವುದಾಗಿ ಹೇಳಿ ಕೆಲ ದಿನಗಳಿಂದ ಆಕೆಯೊಂದಿಗೆ ವಾಸವಾಗಿದ್ದ. ಆ ವಿಷಯ ಸುಜಾತರ ಸಹೋದರಿಗೆ ತಿಳಿದು ಇಬ್ಬರಿಗೂ ಬುದ್ದಿಮಾತನ್ನು ಹೇಳಿದ್ದರು. ಇದರಿಂದ ಮನನೊಂದ ಸಚಿನ್ ಹಾಗೂ ಸುಜಾತ ಗುರುವಾರ ಬೆಳಿಗ್ಗೆ ಕಳೆನಾಶಕವನ್ನು ಕುಡಿದಿದ್ದಾರೆ. ಕೂಡಲೇ ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಸಾವನ್ನಪ್ಪಿದ್ದಾರೆ.ಇತ್ತ ಮಹಿಳೆಯ ಇಬ್ಬರು ಮಕ್ಕಳು ತಂದೆ ಹಾಗೂ ತಾಯಿ ಇಬ್ಬರನ್ನು ಕಳೆದುಕೊಂದು ಅನಾಥರಾಗಿದ್ದಾರೆ.
