hrithik roshan : ಹೊಂಬಾಳೆ ಫಿಲ್ಮ್ಸ್ ನೊಂದಿಗೆ ಗ್ರೀಕ್​ ಗಾಡ್​ ಹೊಸ ಚಿತ್ರ | x​ ಪೋಸ್ಟ್​ನಲ್ಲಿ ಏನಿದೆ

prathapa thirthahalli
Prathapa thirthahalli - content producer

hrithik roshan : ಬಾಲಿವುಡ್ ಸೂಪರ್​ ಸ್ಟಾರ್​ ಹೃತಿಕ್ ರೋಷನ್ ತಮ್ಮ ಮುಂದಿನ ಪ್ಯಾನ್-ಇಂಡಿಯಾ ಚಿತ್ರಕ್ಕಾಗಿ ಕನ್ನಡದ ಪ್ರಸಿದ್ದ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಹೊಂಬಾಳೆ  ಫಿಲ್ಮ್ಸ್ ಸಂಸ್ಥೆಯೊಂದಿಗೆ ಕೈಜೋಡಿಸಲಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಕನ್ನಡದ  ಕೆಜಿಎಫ್, ಕಾಂತಾರ ಸೇರಿದಂತೆ ವಿವಿಧ ಭಾಷೆಗಳಲ್ಲಿ ಬ್ಲಾಕ್​ಬಸ್ಟ್​ರ್​ ಚಿತ್ರಗಳನ್ನು  ನಿರ್ಮಿಸಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಇದೀಗ ಬಾಲಿವುಡ್​ನ ಗ್ರೀಕ್​ ಗಾಡ್​ ಎಂದು ಕರೆಯುವ  ಹೃತಿಕ್​ ರೋಷನ್​ರವರೊಡನೆ ಚಿತ್ರ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೊಷಿಸಿದೆ.

ಹೊಂಬಾಳೆ ಫಿಲ್ಮ್ಸ್ ಈ ಕುರಿತು  ತನ್ನ x  ಖಾತೆಯಲ್ಲಿ ಈ ಕುರಿತು ಬರೆದು ಕೊಂಡಿದ್ದು “ಅವರನ್ನು ಗ್ರೀಕ್ ಗಾಡ್​ ಎಂದು ಕರೆಯುತ್ತಾರೆ. ಅವನು ಎಲ್ಲರ ಹೃದಯಗಳನ್ನು ಆಳುತ್ತಾನೆ, ಹಾಗೆಯೇ ಎಲ್ಲಾ ಎಲ್ಲೆಗಳನ್ನು ಮುರಿದಿದ್ದಾನೆ. ನಾವು ಅವನ ವಿದ್ಯಮಾನವನ್ನು ನೋಡಲಿದ್ದೇವೆ. ಅವರನ್ನು ನಮ್ಮ ಕುಟುಂಬಕ್ಕೆ ಸೇರಿಸಿಕೊಳ್ಳಲು ಹೆಮ್ಮೆಪಡುತ್ತೇವೆ. ಇದು ಧೈರ್ಯ, ಭವ್ಯತೆ ಮತ್ತು ವೈಭವದ ಕಥೆಯಾಗಲಿದೆ ಎಂದು ಪೋಸ್ಟ್ ಮಾಡಿದೆ.

hrithik roshan : ಹೃತಿಕ್​ ರೋಷನ್​ ಹೇಳಿದ್ದೇನು

ಈ ಕುರಿತಾಗಿ ಪತಿಕ್ರಿಯಿಸಿರುವ ಹೃತಿಕ್​ ರೋಷನ್​  “ಹೊಂಬಾಳೆ ಫಿಲ್ಮ್ಸ್ ಅನನ್ಯ ಕಥೆಗಳನ್ನು ಹೇಳುವಲ್ಲಿ ಪ್ರಸಿದ್ಧವಾಗಿದೆ. ನಾನು ಅವರೊಂದಿಗೆ ಕೆಲಸ ಮಾಡಲು ಮತ್ತು ಪ್ರೇಕ್ಷಕರಿಗೆ ಅದ್ಭುತ ಸಿನಿಮಾದ ಅನುಭವ ನೀಡಲು ಉತ್ಸುಕನಾಗಿದ್ದೇನೆ. ನಾವು ದೊಡ್ಡದಾಗಿ ಕನಸು ಕಾಣುತ್ತಿದ್ದೇವೆ ಎಂದಿದ್ದಾರೆ.

hrithik roshan ಹೃತಿಕ್ ರೋಷನ್ ಅವರು ಪ್ರಸ್ತುತ ವಾರ್ 2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಮತ್ತು ಕಿಯಾರಾ ಅಡ್ವಾಣಿ  ನಟಿಸಿದ್ದು, 2019ರ ಹಿಟ್ ಚಿತ್ರ ವಾರ್‌ನ ಸೀಕ್ವೆಲ್​ ಇದಾಗಿದೆ. ಈ ಚಿತ್ರ ಆಗಷ್ಟ್​ 15, 2025 ರಂದು ಬಿಡುಗಡೆಯಾಗಲಿದೆ.

Share This Article