shivamogga news : ರಾಜಾತಿಥ್ಯಕ್ಕಾಗಿ ಬಳ್ಳಾರಿ ಜೈಲಿನಲ್ಲಿ ಹರ್ಷ ಕೊಲೆ ಆರೋಪಿಗಳ ಕಿರಿಕ್​ | ಇಷ್ಟೊಂದು ಧೈರ್ಯ ಬರೋದಕ್ಕೆ ಕಾರಣವೇನು?

prathapa thirthahalli
Prathapa thirthahalli - content producer

shivamogga news : 2022 ಫೆಬ್ರವರಿ 20 ರಲ್ಲಿ ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಪ್ರಕರಣ ಇಡೀ ರಾಜ್ಯದಲ್ಲಿ ಸದ್ದು ಮಾಡಿತ್ತು. ಹಿಂದು ಕಾರ್ಯಕರ್ತನಾಗಿದ್ದ ಹರ್ಷ ನನ್ನ ಖಾಸಿಫ್ ಮತ್ತು ತಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಗೈದಿದ್ದು. ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆ ಅಡಿ ಕೇಸು ದಾಖಲಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಜೈಲಿನಲ್ಲಿ ಆರೋಪಿಗಳಿಗೆ ರಾಜಾತಿಥ್ಯ ಸಿಗುತ್ತಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಸರ್ಕಾರ,ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸಲಾಯಿತು.ಅಲ್ಲಿಯವರೆಗೆ ತಣ್ಣಗಿದ್ದ ರೌಡಿಗಳಿಗೆ ಜೈಲು ಸೇರುತ್ತಿದ್ದಂತೆ ಅದ್ಯಾವ ರಾಜಗುರು ಸಿಕ್ಕರೋ ಗೊತ್ತಿಲ್ಲ. ಜೈಲಿನಲ್ಲಿ ಬಾಲ ಬಿಚ್ಚಲು ಪ್ರಾರಂಭಿಸಿದರು.

shivamogga news : ಸಿಬ್ಬಂದಿಗೆ ಹಣದ ಆಮೀಷ ತೋರಿಸುತ್ತಾರೆ.

ಅದನ್ನೇ ವಿಡಿಯೊ ಮಾಡಿ ಬ್ಲಾಕ್ ಮೇಲ್ ಮಾಡುತ್ತಾರೆ. ಜೈಲಿನಲ್ಲಿ ಕೈದಿಗಳು ಹಣದ ಆಮೀಷಕ್ಕೆ ಬಲಿಯಾಗುವ  ಅಧಿಕಾರಿ ಸಿಬ್ಬಂದಿಯನ್ನೇ ಟಾರ್ಗೆಟ್ ಮಾಡುತ್ತಾರೆ. ಇಂತಹ ವ್ಯವಸ್ಥೆಗೆ ಎಲ್ಲಾ ಸಿಬ್ಬಂದಿಗಳು ಬೀಳುವುದಿಲ್ಲ.ಹಣದಾಸೆಗೆ ಬೀಳುವ  ಸಿಬ್ಬಂದಿಗೆ ಹಣಕೊಟ್ಟು ತಮಗೆ ಬೈಕಾದ ಆಹಾರ ಹಾಗು ವಸ್ತುಗಳನ್ನು ಪಡೆಯುತ್ತಾರೆ ಅದನ್ನೇ ವಿಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳುತ್ತಾರೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ನಂತರ ಅದೇ ವಿಡಿಯೋ ಮುಂದಿಟ್ಟುಕೊಂಡು ಬ್ಲಾಕ್ ಮೇಲ್ ಮಾಡಲು ಮುಂದಾಗುತ್ತಾರೆ. ಹಳೆ ವಿಡಿಯೋ ಗಳನ್ನು ಹೊರಬಿಡುತ್ತೇವೆ ಎಂಬ ಗುಮ್ಮಾದಲ್ಲಿಯೇ ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಾರೆ. ಕೆಲವರು ಈಗಲೂ ಪಡೆಯುತ್ತಿದ್ದಾರೆ. ಬಳ್ಳಾರಿ ಜೈಲಿನಲ್ಲಿ ನಡೆದಿರುವುದು ಕೂಡ ಇದೇ ಎಂದು ಬಲ್ಲಮೂಲಗಳು ಹೇಳುತ್ತಿವೆ. 

ಹರ್ಷ ಕೊಲೆ ಪ್ರಕರಣದ ಹತ್ತು ಜನ ಆರೋಪಿಗಳಲ್ಲಿ ಜಿಲಾನ್ ಹಾಗೂ ಸೈಯ್ಯದ್ ನಿಹಾಲ್ ಇಬ್ಬರು ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದಾರೆ.ಇವರ ಬಳಿ ಜೈಲಿನ ಹಳೆ ವಿಡಿಯೊಗಳು ಹೇಗೆ ಕೈ ಸೇರಿದವು. ಈ ಹಿಂದೆ ಬಳ್ಳಾರಿ ಜೈಲಿನಲ್ಲಿದ್ದ ಇವರುಗಳ ಗುರುವೇ ವಿಡಿಯೊ ನೀಡಿದ್ದಾನೆ ಎಂಬ ಗುಮಾನಿ ಕೂಡ ಇದೆ ಇದು ಕೆಲ ನಟೋರಿಯಸ್ ಕೈದಿಗಳಿಗೆ ಖಯಾಲಿಯಾಗಿದೆ. 

shivamogga news  ಸಿಬ್ಬಂದಿಗಳು ಸ್ಪಂದಿಸದಿದ್ದಾಗ ಟಿವಿ ವಾಹಿನಿ ಇಲ್ಲವೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿಬಿಡುವುದಾಗಿ ಬೆದರಿಕೆ ಹಾಕುತ್ತಾರೆ.ಈ ಹಿಂದೆ ರೌಡಿ ಬಚ್ಚನ್ ಬೆಂಗಳೂರು ಪರಪ್ಪನ ಅಗ್ರಹಾರದ ಜೈಲಿನ ಹಳೆ ವಿಡಿಯೊಗಳನ್ನು ಟಿವಿ ವಾಹಿನಿಯೊಂದಕ್ಕೆ ನೀಡಿ, ನೂರಕ್ಕೂ ಹೆಚ್ಚು ಜೈಲು ಅಧಿಕಾರಿ ಸಿಬ್ಬಂದಿಗಳನ್ನು ಅಮಾನತ್ತು ಮತ್ತು ವರ್ಗಾವಣೆ ಮಾಡಿಸುವಲ್ಲಿ  ಸೈ ಎನಿಸಿಕೊಂಡಿದ್ದ.  ಹೀಗೆ ಕೈದಿಗಳ ಖೆಡ್ಡಾಗೆ ಬಿದ್ದ ಸಿಬ್ಬಂದಿಗಳು ತಮ್ಮ ತಿಂಗಳ ಸಂಬಳವನ್ನು ಮನೆಗೆ ಒಯ್ಯಲಾರದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಜೈಲಿನಿಂದ ಹೊರಬಂದ ಕೆಲ ಕೈದಿಗಳು ಹೇಳುತ್ತಾರೆ. 

ಬಳ್ಳಾರಿ ಜೈಲಿನಲ್ಲಿ ಜಿಲಾನ್ ಹಾಗು ಸೈಯದ್ ಮಾಡುತ್ತಿರುವುದು ಇದೇ. ಹಳೆ ವಿಡಿಯೊಗಳ ಮೂಲಕ ಬ್ಲಾಕ್ ಮೇಲ್ ಮಾಡಿ ರಾಜಾತಿಥ್ಯ ಪಡೆಯಲು ಮುಂದಾಗಿರುವ ಇವರುಗಳಿಗೆ ಜೈಲು ಅಧಿಕಾರಿಗಳು ಎಚ್ಚರಿಕೆ ಸಂದೇಶ ನೀಡಿದ್ದಾರೆ. 

ಇಂತಹ ಸಂದರ್ಭದಲ್ಲಿ ಜೈಲು ಹಿರಿಯ ಅಧಿಕಾರಿಗಳು ತಮ್ಮ ಸಿಬ್ಬಂದಿಗಳ ಪರ ನಿಂತು ಕೈದಿಗಳಿಗೆ ಹೆಡೆಮುರಿ ಕಟ್ಟಬೇಕಿದೆ. ಕೈದಿಗಳು ಬಿಡುಗಡೆ ಮಾಡುವ ಜೈಲು ವಿಡಿಯೊ ಸರ್ಕಾರಕ್ಕೆ ಮುಜುಗರ ತರುತ್ತದೆ ಎಂದು ಅಧಿಕಾರಿ ಸಿಬ್ಬಂದಿಗಳನ್ನು ಅಮಾನತ್ತು ಮಾಡುತ್ತಾ ಹೋದರೆ, ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಸಿಬ್ಬಂದಿಗಳ ನೈತಿಕ ಸ್ಥೈರ್ಯ ಕುಂದಿಸಿದಂತಾಗುತ್ತದೆ.

Share This Article