shiralakoppa news : ಬೈಕ್​ ಕಳೆದುಕೊಂಡ ಕಳ್ಳನಿಗೆ 3 ತಿಂಗಳ ಬಳಿಕ ಕಾದಿತ್ತು ಅಚ್ಚರಿ 

prathapa thirthahalli
Prathapa thirthahalli - content producer

ರಸ್ತೆಬದಿಯಲ್ಲಿ ನಿಲ್ಲಿಸಿ ಹೋಗಿದ್ದ ಬೈಕ್​ನ್ನು ಕಳ್ಳತನ ಮಾಡಿದ್ದ ಕಳ್ಳನನ್ನು ಶಿರಾಳಕೊಪ್ಪ ಪೊಲೀಸರು ಬಂಧಿಸಿದ್ದಾರೆ.

ಅಬ್ದುಲ್ ಖಾಧರ್  (20) ಬಂಧಿತ ಆರೋಪಿಯಾಗಿದ್ದಾನೆ.

shiralakoppa news : ಏನಿದು ಪ್ರಕರಣ

ಫೆಬ್ರವರಿ 21, 2025 ರಂದು ಶಿರಾಳಕೊಪ್ಪ ಟೌನ್​ನ ಮಠದಗದ್ದೆಯ ನಿವಾಸಿಯೊಬ್ಬರು ತಮ್ಮ ಹಿರೋ ಸ್ಪ್ಲೆಂಡರ್​ ಪ್ರೋ ಬೈಕ್​ನ್ನು ರಸ್ತೆಬದಿಯಲ್ಲಿ ನಿಲ್ಲಿಸಿ ಹೋಗಿದ್ದರು. ಆಗ ಯಾರೋ ಕಳ್ಳರು ಅವರ ಬೈಕ್​ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಹಿನ್ನಲೆ  ಮಠದಗದ್ದೆಯ ನಿವಾಸಿ  ಶಿರಾಳಕೊಪ್ಪ ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಈ ಹಿನ್ನಲಿ ಪೊಲೀಸರು ಕಳ್ಳರ ಪತ್ತೆಗಾಗಿ ತಂಡ ರಚಿಸಿ ಕಳ್ಳನನ್ನು ಪತ್ತೆಹಚ್ಚಿದ್ದಾರೆ  ಆರೋಪಿತನಿಂದ ಅಂದಾಜು ಮೌಲ್ಯ 30,000/-  ರೂಗಳ ಹಿರೋ ಸ್ಪ್ಲೆಂಡರ್ ಪ್ರೋ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Share This Article