ದೆಹಲಿ : ಈಗಾಗಲೇ ಚೀನಾದಲ್ಲಿ ರಿಲೀಸ್ ಮಾಡಿರುವ ರಿಯಲ್‌ಮಿ GT 7 ಸರಣಿಯನ್ನು ಭಾರತದಲ್ಲಿ ವಿಸ್ತರಿಸಲು ರಿಯಲ್‌ಮಿ ಸಜ್ಜಾಗಿದೆ. ಎರಡು ಹೊಸ ಫೋನ್‌ಗಳು – ರಿಯಲ್‌ಮಿ GT 7 ಮತ್ತು GT 7T ಮಾರುಕಟ್ಟೆಯನ್ನು ಸೇರುವ ನಿರೀಕ್ಷೆಯಿದೆ. GT 7 ಮತ್ತು GT 7T ಎರಡೂ ಮೇ 27 ರಂದು ಭಾರತ ಸೇರಿದಂತೆ ಜಾಗತಿಕವಾಗಿ ಬಿಡುಗಡೆಯಾಗಲಿವೆ ಎಂದು ರಿಯಲ್‌ಮಿ ಅಧಿಕೃತವಾಗಿ ದೃಢಪಡಿಸಿದೆ.

realme gt 7t launch date in india
ಈ ಫೋನ್ಗಳ ಲಾಂಚಿಂಗ್ ಕಾರ್ಯಕ್ರಮವು ಪ್ಯಾರಿಸ್‌ನಲ್ಲಿ ನಡೆಯಲಿದೆ. ಆಬಳಿಕ ಅಮೆಜಾನ್ ಇಂಡಿಯಾ ಮತ್ತು ಇತರ ಆನ್‌ಲೈನ್ ಮತ್ತು ಆಫ್‌ಲೈನ್ ರಿಟೇಲ್ ಸ್ಟೋರ್ಗಳಲ್ಲಿ ಹೊಸ ಫೋನ್ ದೊರೆಯಲಿದೆ. ಅಂದಹಾಗೆ ಈ ಫೋನ್ನ ನಿಖರವಾದ ಬೆಲೆ ಪ್ರಕಟವಾಗಿಲ್ಲ. ಇದರ ಹಿಂದಿನ ಮಾಡಲ್ GT 6 ಮತ್ತು GT 6T ಕ್ರಮವಾಗಿ 40,999 ಮತ್ತು 30,999 ರೂ.ಗಳ ಆರಂಭಿಕ ಬೆಲೆಯ ಹೊಂದಿದ್ದು, ಈ ರೇಂಜ್ನಲ್ಲಿ ಹೊಸ ಫೋನ್ಗಳು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. 120W ವೇಗದ ಚಾರ್ಜಿಂಗ್ , 7,000mAh ಬ್ಯಾಟರಿಯೊಂದಿಗೆ ಈ ಫೋನ್ ಎರಡು ಬಣ್ಣಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. 6.78-ಇಂಚಿನ ಪೂರ್ಣ-HD+ OLED ಡಿಸ್ಪ್ಲೇ, 50-ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಹಾಗೂ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 16-ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದು ಹೊಂದಿರಲಿದೆ ಎನ್ನಲಾಗುತ್ತಿದೆ.