pedestrian road Safety rules 1 : ಪಾದಚಾರಿಗಳಿಗಾಗಿ ಪುಟ್​ಪಾತ್ ತೆರವುಗೊಳಿಸಿ! : ಸುಪ್ರೀಂಕೋರ್ಟ್​

Malenadu Today

pedestrian road Safety rules ಪಾದಚಾರಿಗಳಿಗಾಗಿ ಯಾವುದೇ ಅಡೆತಡೆ ಇಲ್ಲದ ಪುಟ್​ಪಾತ್​ ನಿರ್ಮಿಸುವ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್‌ ಬುಧವಾರ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಅಭಯ್‌ ಎಸ್‌.ಓಕಾ ಮತ್ತು ಉಜ್ಜಲ್ ಭುಯಾನ್ ಅವರನ್ನು ಒಳಗೊಂಡ ನ್ಯಾಯಪೀಠವು, ಕಾಲುದಾರಿ ಇಲ್ಲದ ಕಾರಣ ಪಾದಚಾರಿಗಳು ರಸ್ತೆಯಲ್ಲಿ ನಡೆಯುತ್ತಾರೆ. ಇದರಿಂದ ಅಪಘಾತ ಸಂಭವಿಸುವ ಅಪಾಯವಿರುತ್ತದೆ ಎಂದು ಅಭಿಪ್ರಾಯಪಟ್ಟಿತು. ನಾಗರಿಕರ ಓಡಾಟಕ್ಕೆ ಸೂಕ್ತ ಕಾಲುದಾರಿಗಳ ಅಗತ್ಯವಿದೆ.

pedestrian road Safety rules

ಕಾಲುದಾರಿಗಳ ಅತಿಕ್ರಮಣವನ್ನು ಕಡ್ಡಾಯವಾಗಿ ತೆರವುಗೊಳಿಸಬೇಕು. ಕಾಲುದಾರಿಯು ಪಾದಚಾರಿಗಳ ಸಂವಿಧಾನಾತ್ಮಕ ಹಕ್ಕು ಎಂದು ನ್ಯಾಯಪೀಠ ಪ್ರತಿಪಾದಿಸಿತು.  ಪಾದಚಾರಿಗಳ ಸುರಕ್ಷತೆಯು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದ ಸುಪ್ರೀಂ ಕೋರ್ಟ್, ಅಂಗವೈಕಲ್ಯ ಇರುವ ವ್ಯಕ್ತಿಗಳಿಗೆ ಅನುಕೂಲವಾಗುವಂತೆ ಫುಟ್‌ಪಾತ್‌ಗಳನ್ನು ನಿರ್ಮಿಸಬೇಕು ಮತ್ತು ಅವುಗಳನ್ನು ಅಷ್ಟೇ ಮುತುವರ್ಜಿಯಿಂದ ನಿರ್ವಹಣೆ ಮಾಡಬೇಕು ಎಂದು ತಿಳಿಸಿತು.

Share This Article