dk shivamogga birthday wishes ಶಿವಮೊಗ್ಗ : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹುಟ್ಟಿದ ಹಬ್ಬದ ಹಿನ್ನೆಲೆಯಲ್ಲಿ ಇವತ್ತು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಜಿಲ್ಲಾ NSUI ವತಿಯಿಂದ ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ 65 ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ರವೀಂದ್ರ ನಗರದ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರಿಗೆ ಅರೋಗ್ಯ, ಆಯಸ್ಸು ಮತ್ತು ಹೆಚ್ಚಿನ ಅಧಿಕಾರ ಸಿಗಲಿ ಎಂದು ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ NSUI ಜಿಲ್ಲಾಧ್ಯಕ್ಷ ವಿಜಯ್, ಕಾರ್ಯಧ್ಯಕ್ಷ ರವಿ ಕಟಿಕೆರೆ, ಪ್ರಧಾನ ಕಾರ್ಯದರ್ಶಿಗಳಾದ ವರುಣ್, ಚಂದ್ರೋಜಿ ರಾವ್, ಆದಿತ್ಯ, ಕುಮಾರ್, ಸೃಜನ್, ಜೀವನ್,ಶ್ರೀಕಾಂತ್,ನಂದೀಶ್,ಚಂದು ಹಾಗೂ ಸಾಕಷ್ಟು ಪದಾಧಿಕಾರಿಗಳು ಪಾಲ್ಗೊಂಡಿದ್ದರು.


dk shivamogga birthday/ ರಕ್ತದಾನ
ಶಿವಮೊಗ್ಗ ನಗರ ಯುವ ಕಾಂಗ್ರೆಸ್ ವತಿಯಿಂದ ಇಂದು ಡಿಕೆ ಶಿವಕುಮಾರ್ ರವರ 65 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ನಗರದ ಆಶಾ ಜ್ಯೋತಿ ಸ್ವಯಂ ಪ್ರೇರಿತ ರಕ್ತ ಕೇಂದ್ರದಲ್ಲಿ ಯುವ ಕಾಂಗ್ರೆಸ್ ನ ಪದಾಧಿಕಾರಿಗಳು ರಕ್ತದಾನ ಮಾಡಿದರು ಡಾಕ್ಟರ್ ಕರಿಯಣ್ಣ ಶ್ರೀನಿವಾಸ್ ರಕ್ತದಾನಕ್ಕೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ, ನಗರ ಅಧ್ಯಕ್ಷ ಚರಣ್ ಜಿ ಶೆಟ್ಟಿ, ಗ್ರಾಮಾಂತರ ಅಧ್ಯಕ್ಷ ಪ್ರವೀಣ್, ಬ್ಲ್ಯಾಕ್ ಅಧ್ಯಕ್ಷರುಗಳಾದ ಸಕ್ ಲೈನ್, ಪ್ರವೀಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ್, ಆಕಾಶ್, ಮಲಗೋಪಾ ಶಿವು, ಯುವ ಮುಖಂಡರುಗಳಾದ ಮಧುಸೂದನ್, ಚೇತನ್, ಇರ್ಫಾನ್, ಬಾಲಾಜಿ, ಗೌತಮ್, ತೌಫಿಕ್ ಹಾಗೂ ಸಾಕಷ್ಟು ಯುವಕ ಮಿತ್ರರು ರಕ್ತದಾನದಲ್ಲಿ ಪಾಲ್ಗೊಂಡಿದ್ದರು
