shivamogga news : ಬೈಕ್ ಮತ್ತು ಲಾರಿ ನಡುವೆ ಅಪಘಾತ , ಬೈಕ್ ಸವಾರ ಸ್ಥಳದಲ್ಲೇ ಸಾವು

prathapa thirthahalli
Prathapa thirthahalli - content producer

shivamogga news : ಬೈಕ್ ಮತ್ತು ಲಾರಿ ನಡುವೆ ಅಪಘಾತ , ಬೈಕ್ ಸವಾರ ಸ್ಥಳದಲ್ಲೇ ಸಾವು

shivamogga news :  ಹೊಸನಗರ : ಲಾರಿ ಮತ್ತು ಬೈಕ್​ ನಡುವೆ ಅಪಘಾತ ಸಂಭವಿಸಿದ್ದು ಬೈಕ್​ ಸಾವರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದಿಂದ ಹೊಸನಗರ ಮಾರ್ಗದಲ್ಲಿರುವ ದರ್ಗಾದ ಅಪ್​ ನಲ್ಲಿ  ಮಂಗಳವಾರ ರಾತ್ರಿ ನಡೆದಿದೆ.

ಬೈಕ್​ ಸವಾರ  ಸಾಗರ ತಾಲೂಕಿನ ಹೊನ್ನೆಸರ ಗ್ರಾಮದ ಮೃತ ಅಶೋಕ (24)  ಎಂದು ತಿಳಿದು ಬಂದಿದೆ. 

- Advertisement -

ಮೃತ ಅಶೋಕ್​ ಅಡಗೋಡಿಯಲ್ಲಿ ತೋಟದ ಕೆಲಸ ಮುಗಿಸಿಕೊಂಡು ಹೊನ್ನೆಸರದ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಕೂಡಲೇ ಹೊಸನಗರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.  ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ನಗರ ಎಎಸ್ಐ ಕುಮಾರ್ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಅಪಘಾತ ನಡೆದ ಅರ್ಧ ಗಂಟೆ ಕಾಲ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು ಪೊಲೀಸರು ಮುಕ್ತಗೊಳಿಸಿದರು.

Share This Article