Election of pope / 2 ಸಾವಿರ ವರ್ಷಗಳ ಬಳಿಕ ಅಮೆರಿಕಾ ಬಿಷಪ್ ಪೋಪ್ ಆಗಿ ಆಯ್ಕೆ

Malenadu Today
Election of pope ವ್ಯಾಟಿಕನ್​ ಸಿಟಿ : ರೋಮನ್‌ ಕ್ಯಾಥೋಲಿಕ್‌ ಚರ್ಚ್‌ನ ನೂತನ ಪೋಪ್‌ ಆಯ್ಕೆಯಾಗಿದ್ದಾರೆ. ನಿನ್ನೆದಿನ ಅಂದರೆ ಗುರುವಾರ ಆಯ್ಕೆ ಅಂತಿಮಗೊಂಡಿದೆ. 69 ವರ್ಷದ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌ ಅವರು ಪೋಪ್ ಆಗಿ ಆಯ್ಕೆಯಾದರು, ಅವರು ‘ಲಿಯೊ 14’ ಎಂಬ ಹೆಸರಿನಿಂದ ಕರೆಸಿಕೊಳ್ಳಲಿದ್ದಾರೆ. ವಿಶೇಷ ಅಂದರೆ, ಕ್ಯಾಥೋಲಿಕ್ ಚರ್ಚ್‌ನ ಎರಡು ಸಾವಿರ ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಭಾರಿಗೆ ಅಮೆರಿಕದ ಬಿಷಪ್‌ವೊಬ್ಬರು ಈ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. 

Election of pope / ಯಾರಿವರು!?

ಇನ್ನು 1955ರ ಸೆಪ್ಟೆಂಬರ್‌ 14ರಂದು ಷಿಕಾಗೊದಲ್ಲಿ ಜನಿಸಿದ ರಾಬರ್ಟ್ ಫ್ರಾನ್ಸಿಸ್‌  ಪೆರು ದೇಶದಲ್ಲಿದ್ದರು. ಅಲ್ಲಿ ಎರಡು ದಶಕ ಸೇವೆ ಸಲ್ಲಿಸಿದ್ದರು.  2023ರಲ್ಲಿ ಅವರನ್ನು ವ್ಯಾಟಿಕನ್‌ನ ಕಾರ್ಡಿನಲ್‌ ಆಗಿ ನೇಮಕವಾದರು.  ಇನ್ನೂ ಪೋಪ್​ ಆಗಿ ಆಯ್ಕೆಯಾದ ಬಳಿಕ  ಜನರನ್ನುದ್ದೇಶಿಸಿ ಮಾತನಾಡಿದ ಅವರು,  ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಎಲ್ಲರೂ ಪರಸ್ಪರ ಕೈಜೋಡಿಸಬೇಕು ಎಂದು ಕರೆಕೊಟ್ಟರು.  ಮಾತುಕತೆಗಳ ಮೂಲಕ ಸೇತುವೆ ನಿರ್ಮಿಸಿ ಪರಸ್ಪರ ಹತ್ತಿರವಾಗಬೇಕು. ಜಗತ್ತಿನಲ್ಲಿ ಸದಾ ಶಾಂತಿ ನೆಲೆಸಲಿ ಎಂದು ಕೋರಿದರು.  
Share This Article