satish jarkiholi :  ಕೇಂದ್ರ ಸರ್ಕಾರ ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಿದೆ | ಸತೀಶ್ ಜಾರಕಿಹೊಳಿ

prathapa thirthahalli
Prathapa thirthahalli - content producer

satish jarkiholi : ಶಿವಮೊಗ್ಗ | ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ನಡೆಯುತ್ತಿದ್ದು, ರಾಜಕೀಯವನ್ನು ಬದಿಗಿಟ್ಟು ಕೇಂದ್ರ ಸರ್ಕಾರಕ್ಕೆ  ನಾವು ಬೆಂಬಲ ಸೂಚಿಸಿದ್ದೇವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಇಂದು ಶಿವಮೊಗ್ಗದ ಐಬಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ  ನಡೆಯುತ್ತಿದ್ದು, ಸದ್ಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.  ಕೇಂದ್ರ ಸರ್ಕಾರ ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳುತ್ತದೆ.  ನಾವು ಕೇಂದ್ರದ ನಿರ್ಧಾರಕ್ಕೆ  ರಾಜಕೀಯವನ್ನು ಬದಿಗಿಟ್ಟು ಬೆಂಬಲ ಸೂಚಿಸಿದ್ದೇವೆ ಎಂದರು.

ಹಾಗೆಯೇ ಎರಡು ದೇಶಗಳ ನಡುವೆ ನಡೆಯುತ್ತಿರುವ ಸಂಘರ್ಷ ರಾಜ್ಯದ ಮೇಲೆ ಸದ್ಯಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ. ಸದ್ಯ ಸಂಘರ್ಷದ ಪರಿಣಾಮ ಪಂಜಾಬ್, ರಾಜಸ್ಥಾನ್, ಜಮ್ಮು- ಕಾಶ್ಮೀರದ ಮೇಲೆ ಕೇಂದ್ರೀತವಾಗಿದೆ. ಈ ಕುರಿತು ಇಂದು ಸಂಪುಟದ ಸಭೆ ನಡೆಯಲಿದೆ. ಸಭೆಯಲ್ಲಿ ಸಂಘರ್ಷದ ಪರಿಣಾಮ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಪೂರ್ಣ ಪ್ರಮಾಣದ ಯುದ್ಧ ನಡೆಯುವ ಕುರಿತು ಈಗಲೇ ಏನು ಹೇಳಲು ಆಗದು. ಈ ಬಗ್ಗೆ ಏನಿದ್ದರೂ ಕೇಂದ್ರ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು

satish jarkiholi : ಜಾತಿ ಹಾಗೂ ಜನಗಣತಿಯ ಬಗ್ಗೆ ಕೇಂದ್ರದ ನಿರ್ಧಾರ ಸರಿಯಾಗಿದೆ

ಒಳ ಮೀಸಲಾತಿ ಸಮೀಕ್ಷೆ ಈಗಾಗಲೇ ರಾಜ್ಯಾದ್ಯಂತ ನಡೆಯುತ್ತಿದ್ದು, ಇದರಿಂದ ನಿಖರವಾದ ಅಂಕಿ ಅಂಶ ತಿಳಿಯಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಮೀಸಲಾತಿಯ ಕುರಿತು  ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗಲಿದೆ. ಕೊನೆಯಲ್ಲಿ ಅದರ ಫಲಿತಾಂಶ ಏನು ಬರಲಿದೆ ಎಂದು ಗೊತ್ತಿಲ್ಲ. ಕಾಂತರಾಜ ವರದಿ ಕುರಿತು ಸಾರ್ವಜನಿಕ ಚರ್ಚೆಗೆ ಬಿಡುತ್ತೇವೆ. ಸಾರ್ವಜನಿಕ ಅಭಿಪ್ರಾಯ ಆಧರಿಸಿ ಬದಲಾವಣೆ ಮಾಡಲು ನಾವು ಸಿದ್ಧವಿದ್ದೇವೆ ಎಂದರು.

 

Share This Article