punjab kings vs delhi capitals match / ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಮ್ಯಾಚ್​ ದಿಢೀರ್ ರದ್ದು! ಎನಾಯ್ತು

Malenadu Today

punjab kings vs delhi capitals match /punjab kings  ಆಪರೇಷನ್ ಸಿಂಧೂರ್ ಬೆನ್ನಲ್ಲೆ ಪಾಕಿಸ್ತಾನ ಮಿಸೈಲ್ ಹಾಗೂ ಡ್ರೋನ್ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ವಾಯುಸೇನೆ ಕ್ಷಿಪ್ರ ರಿಪ್ಲೆ ನೀಡಿದೆ. ಈ ನಡುವೆ ಪಾಕಿಸ್ತಾನ ಇನ್ನಷ್ಟು ದಾಳಿ ನಡೆಸುವ ಸಂದರ್ಭ ಇರುವ ಹಿನ್ನೆಲೆಯಲ್ಲಿ ನಿನ್ನೆ ದಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ನ ಧರ್ಮಶಾಲಾದ ಮೈದಾನದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯ ರದ್ದಾಗಿದೆ. ದೇಶದಲ್ಲಿ ಶೋಕಾಚರಣೆ ಇದ್ದರು ಐಪಿಎಲ್ ವ್ಯಾಪಾರ ನಡೆಸ್ತಿದ್ದಾರೆ ಎಂಬ ಆರೋಪ ಈ ಮೊದಲೇ ಕೇಳಿಬಂದಿತ್ತು.

punjab kings vs delhi capitals match /ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಮ್ಯಾಚ್​ 

ಯುದ್ಧದ ಸನ್ನಿವೇಶಗಳ ನಡುವೆ ಮ್ಯಾಚ್ಗಳು ಮುಂದುವರಿದಿದ್ದವು. ಆದರೆ ನಿನ್ನೆ ಪಾಕಿಸ್ತಾನ ಗಡಿ ಸಮೀಪದ ಹಲವು ಏರಿಯಾಗಳನ್ನು ಟಾರ್ಗೆಟ್ ಮಾಡಿದ ದಾಳಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಮುನ್ನೆಚ್ಚರಿಕೆ ಕ್ರಮವಾಗಿ ಪಂದ್ಯವನ್ನು ರದ್ದು ಮಾಡಲಾಯ್ತಷ್ಟೆ ಅಲ್ಲದೆ ಕ್ರೀಡಾಂಗಣವನ್ನು ತಕ್ಷಣವೇ ಖಾಲಿ ಮಾಡುವಂತೆ ಆಟಗಾರರಿಗೆ ಮತ್ತು ಪ್ರೇಕ್ಷಕರಿಗೆ ಸೂಚಿಸಲಾಗಿತ್ತು. ಫೆಡ್​ ಲೈಟ್ ಕಾರಣಕ್ಕೆ ಮ್ಯಾಚ್ ರದ್ದು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ರಾಷ್ಟ್ರೀಯ ಮಾಧ್ಯಮಗಳು ಸೆಕ್ಯುರಿಟಿ ಕಾರಣಕ್ಕೆ ಮ್ಯಾಚ್ ರದ್ದುಗೊಳಿಸಲಾಗಿದೆ ಎನ್ನುತ್ತಿವೆ. ಇನ್ನೂ ಮ್ಯಾಚ್ ರದ್ದಾಗುವುದಕ್ಕೂ ಮೊದಲು ಮಳೆಯಿಂದಾಗಿ ಪಂದ್ಯ ಶುರುವಾಗುವುದು ವಿಳಂಬವಾಗಿತ್ತು. 

- Advertisement -

punjab kings vs delhi capitals match /

Share This Article
Leave a Comment

Leave a Reply

Your email address will not be published. Required fields are marked *