mescom power cut | ಶಿವಮೊಗ್ಗ | ಇಲ್ಲೆಲ್ಲಾ ಇವತ್ತು ಕರೆಂಟ್ ಇರಲ್ಲ | ಸಾರ್ವಜನಿಕರೆ ಗಮನಿಸಿ

Malenadu Today

mescom power cut / ಶಿವಮೊಗ್ಗ ಜಿಲ್ಲೆಯಲ್ಲಿ ಒಂದಲ್ಲ ಒಂದು ಕಡೆಯಲ್ಲಿ ಮೆಸ್ಕಾಂ ಕಾಮಗಾರಿಗಳು ನಡೆಯುತ್ತಲೇ ಇರುತ್ತಲೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿದಿನ ಅಲ್ಲಲ್ಲಿ ಕರೆಂಟ್ ಕಟ್ ಆಗಿರುತ್ತದೆ. ಇವತ್ತು ಸಹ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಪೇಟೆಯಲ್ಲಿ ಹಲವೆಡೆ ಪವರ್​ ಕಟ್ ಇರಲಿದೆ ಎಂದು ಮೆಸ್ಕಾಂ ವಿಭಾಗ ತಿಳಿಸಿದೆ.  ನಗರದ ಬಿ.ಎಚ್. ರಸ್ತೆ ವಿಸ್ತರಣೆ ಕಾಮಗಾರಿ ಪ್ರಯುಕ್ತ ಇವತ್ತು ಅಂದರೆ, ಮೇ 8ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ಮಾಹಿತಿ ಒದಗಿಸಿದೆ.  

mescom power cut /ಎಲ್ಲೆಲ್ಲಿ ಕರೆಂಟ್ ಇರಲ್ಲ

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ವಿನೋಬ ನಗರ, ಮಂಕಳಲೆ, ನೆಹರೂ ನಗರ, ಅರಳಿಕೊಪ್ಪ, ಜನ್ನತ್ ನಗರ, ಮಾರ್ಕೆಟ್ ರಸ್ತೆ , ಅಶೋಕ ರಸ್ತೆ, ಬಿ.ಎಚ್. ರಸ್ತೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಇವತ್ತು ಕರೆಂಟ್ ಇರಲ್ಲ. 

- Advertisement -

ತುಮರಿಯಲ್ಲಿಯು ಕರೆಂಟ್ ಇರಲ್ಲ 

ಇನ್ನೊಂದೆಡೆ  ಸಾಗರ ತುಮರಿ ಭಾಗದಲ್ಲಿಯು ಮೆಸ್ಕಾಂ ಕಾಮಗಾರಿ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ತುಮರಿ ಸುತ್ತಮುತ್ತ ಅಂದರೆ ಎಸ್.ಎಸ್. ಭೋಗ್, ತುಮರಿ ಹಾಗೂ ಕುದರೂರು, ಚನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕರೆಂಟ್ ಇರಲ್ಲ ಎಂದು ಮೆಸ್ಕಾಂ ತಿಳಿಸಿದೆ. 

 

Share This Article