malnad news today / ಹೊತ್ತಿ ಉರಿದ ಕಾರು, ನಕಲಿ ಬಂಗಾರದ ಕಥೆ ! ಇವತ್ತಿ ಚಟ್​ಪಟ್ ಸುದ್ದಿಗಳು

This Article Written by / Malenadu Today / ಮೇ 8, 2025

Shivamogga Power Cable Theft bhadravati

malnad news today ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಘಟನೆಗಳ ಸಂಕ್ಷಿಪ್ತ ವಿವರವನ್ನು ನೀಡುವ ಮಲೆನಾಡು ಟುಡೆಯ ಇವತ್ತಿನ ಚಟ್​ಪಟ್​ ಸುದ್ದಿಗಳು ಹೀಗಿವೆ. 

malnad news today /ಹೊತ್ತಿಉರಿದ ಕಾರು

ಸೊರಬ ಪಟ್ಟಣದ ರಂಗನಾಥ ದೇವಸ್ಥಾನದ ಎದುರು ನಿನ್ನೆ ಬುಧವಾರ ಬೆಳಿಗ್ಗೆ ಕಾರೊಂದು ಹೊತ್ತಿ ಉರಿದಿದೆ. ಇಲ್ಲಿನ ನಿವಾಸಿಯೊಬ್ಬರು ನಿಲ್ಲಿಸಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿದೆ. ಅದು ನೋಡನೋಡುತ್ತಲೇ ಇಡೀ ಕಾರನ್ನು ಆವರಿಸಿ ಹೊತ್ತಿ ಉರಿದಿದೆ. ಆನಂತರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಆದದರೆ, ಅಷ್ಟರಲ್ಲಿ ಮಾರುತಿ ಸುಜುಕಿ ಸಿಯಾಜ್ ಕಾರು ಸುಟ್ಟು ಹೋಗಿತ್ತು.  

ಅರ್ಜಿ ಆಹ್ವಾನ

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯಿ ದತ್ತಿಗಳ ಕಾಯ್ದೆಯನ್ವಯ ಶಿವಮೊಗ್ಗ ಜಿಲ್ಲೆಯ ‘ಬಿ’ ಮತ್ತು ‘ಸಿ’ ಪ್ರವರ್ಗ ಮುಜರಾಯಿ ದೇವಾಲಯಗಳ ಸಮಿತಿಗೆ ಅರ್ಹ ಸದಸ್ಯರನ್ನು ನಿಗದಿಪಡಿಸುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 25 ವರ್ಷ ವಯಸ್ಸಾಗಿರುವವರು, ಆಯಾ ತಹಶೀಲ್ದಾರ್ ಕಚೇರಿಯಿಂದ ಅರ್ಜಿ ಪಡೆದು, ಯಾವುದೇ ಒಂದು ಅಧಿಸೂಚಿತ ಸಂಸ್ಥೆಯ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಮಾತ್ರ ಸದಸ್ಯತ್ವವನ್ನು ಕೋರಿ ಅರ್ಜಿ ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಜೂನ್‌ 5 ಕಡೆಯ ದಿನ. 

ನಕಲಿ ಬಂಗಾರ ಕೊಟ್ಟು ವಂಚನೆ 

ಇತ್ತ ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ನಲ್ಲಿ ನಕಲಿ ಬಂಗಾರ ನೀಡಿ ಲಕ್ಷಾಂತರ ವಂಚಿಸಿದ್ದ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಿನ ನಿವಾಸಿ ಬಂಧಿತರು. ಇವರಿಂಧ  3.08 ಲಕ್ಷ ರೂಪಾಯಿ ಸೀಜ್ ಮಾಡಲಾಗಿದೆ.  ವಿಜಯನಗರ ಜಿಲ್ಲೆಯ ಹೊಸಪೇಟೆಯ ನಿವಾಸಿ ರಾಜೇಶ್  ಎಂಬವರಿಗೆ  ಕೆಲಸದ ಜಾಗದಲ್ಲಿ ಬಂಗಾರ ಸಿಕ್ಕಿದ್ದು ಕೊಡುತ್ತೇನೆ ಎಂದು ಹೇಳಿ ನಕಲಿ ಬಂಗಾರ ಕೊಟ್ಟು ವಂಚನೆ ಮಾಡಲಾಗಿತ್ತು. ಪ್ರಕರಣ ಸಂಬಂಧ ದೂರು ಆಧರಿಸಿ ಕೇಸ್ ದಾಖಲಿಸಿದ್ದ ಪೊಲೀಸರು ಇದೀಗ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.  

 

ಮುಂದಿನ ಸುದ್ದಿ ಒದಿ

Leave a Comment