operation sindoor shivamoggaಉಗ್ರರ 9 ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತದ ವಾಯುಸೇನೆ (operation sindoor)ಪಾಕಿಸ್ತಾನದ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ 80 ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿರುವ ಸಾಧ್ಯತೆ ಇದೆ. ಈ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ಪೆಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಮಂಜುನಾಥ್ ರಾವ್ರವರ ತಾಯಿ ಸುಮತಿ, ಸರ್ಕಾರದ ಕ್ರಮಕ್ಕೆ ತೃಪ್ತಿವ್ಯಕ್ತಪಡಿಸಿದ್ದಾರೆ.
Operation Sindoor – justice served
operation sindoor shivamogga / ಮಂಜುನಾಥ್ರವರ ತಾಯಿ ಹೇಳಿದ್ದೇನು?
ಕುಟುಂಬದಲ್ಲಿ ಮನೆ ಯಜಮಾನ ಕೈಗೊಳ್ಳುವ ನಿರ್ದಾರಕ್ಕೆ ಕುಟುಂಬಸ್ಥರು ಬದ್ಧರಾಗಿರುತ್ತಾರೆ. ಅದೇ ರೀತಿ ಕೇಂದ್ರ ಸರ್ಕಾರ ಕೈಗೊಂಡ ತೀರ್ಮಾನಕ್ಕೆ ನಾವೆಲ್ಲರು ಬದ್ದವಾಗಿರುತ್ತೇವೆ ಎಂದಿದ್ದಾರೆ. operation sindoor ಇಡಿ ದೇಶವೇ ಒಂದು ಕುಟುಂಬ ಎಂದು ಪರಿಗಣಿಸಿ ಕೇಂದ್ರ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಮತ್ತು ಸರಿಯಾದ ತೀರ್ಮಾನ ಕೈಗೊಂಡಿದೆ.
operation sindoor shivamogga / ಮೋದಿ ಸರ್ಕಾರ ಸರಿಯಾದ ನಿರ್ಣಯ ಕೈಗೊಂಡಿದೆ
ನನಗೆ ಯಾವಾಗಲೂ ಒಂದು ವಿಚಾರ ಯೋಚನೆಗೆ ಬರುತ್ತಿತ್ತು. ಹೊರ ದೇಶಕ್ಕೆಲ್ಲ ಜನರು ಆರಾಮವಾಗಿ ಹೋಗಿ ಬರುತ್ತಾರೆ. ಆದರೆ ನಮ್ಮದೇ ದೇಶದಲ್ಲಿ ನಾವು ಓಡಾಡಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ಅನಿಸುತ್ತಿತ್ತು. ಅಲ್ಲಿಗೆ ನನ್ನ ಮಗ ಪ್ರಕೃತಿ ಸೌಂದರ್ಯ ನೋಡಲು ಹೋಗಿದ್ದ. ಅಲ್ಲಿ ಅನಾಥವಾಗಿ ಸಾವನ್ನಪ್ಪಿದೆ. ಇದರ ಬಗ್ಗೆ ಬಹಳ ನೋವಿದ್ದು, ಈ ನಿಟ್ಟಿನಲ್ಲಿ ಮೋದಿ ಸರ್ಕಾರ ಕೈಗೊಂಡ ನಿರ್ಣಯ ಸರಿಯಾಗಿದೆ ಎಂದರು.