operation Sindoor – justice served / ಪಾಕ್​ ಮೇಲೆ ಬೆಂಕಿ ದಾಳಿ , 80 ಕ್ಕೂ ಹೆಚ್ಚು ಉಗ್ರರ ನಾಶ / ಆಪರೇಷನ್​ ಸಿಂಧೂರ್​ ಹೆಸರೇಕೆ ಗೊತ್ತಾ

Malenadu Today

operation Sindoor – justice served ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತದ ವಾಯುಸೇನೆ ಪಾಕಿಸ್ತಾನದ ಹಲವು ನೆಲೆಗಳ ಮೇಲೆ ಏರ್ ಸ್ಟ್ರೈಕ್ ನಡೆಸಿದೆ. ಈ ದಾಳಿಯಲ್ಲಿ ಹಲವು ಉಗ್ರರ ನೆಲೆಗಳು ಧ್ವಂಸಗೊಂಡಿವೆ. ಆಪರೇಷನ್ ಸಿಂಧೂರ್ ಹೆಸರಿನಡಿಯಲ್ಲಿ ಇಂಡಿಯನ್ ಆರ್ಮಿ ಈ ದಾಳಿ ನಡೆಸಿದೆ. ಪಾಕ್ ಮತ್ತು ಪಿಒಕೆ ಭಯೋತ್ಪಾದಕ ಶಿಬಿರಗಳ ಮೇಲೆ ವಾಯುಸೇನೆ ನಡೆಸಿದ ದಾಳಿಯಲ್ಲಿ 80 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.  ಬಹವಾಲ್ಪುರ್ ಮತ್ತು ಮುರಿಡ್ಕೆಗಳಲ್ಲಿ ಸುಮಾರು 25 ರಿಂದ 30 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ದೆಹಲಿ ಮೂಲಗಳು ಹೇಳುತ್ತಿದ್ದು, ಈ ಸಂಬಂಧ ಇನ್ನಷ್ಟೆ ಭಾರತದ ರಕ್ಷಣಾ ಏಜೆನ್ಸಿಗಳು ಖಾತರಿ ಪಡಿಸಬೇಕಿದೆ.  ಜೈಶ್, ಲಷ್ಕರ್, ಹಿಜ್ಬುಲ್ ಮುಜಾಹಿದ್ದೀನ್ ತಾಣಗಳನ್ನು ಗುರಿಯಾಗಿಸಿಕೊಂಡು ನಿಖರವಾದ ದಾಳಿಯನ್ನ ನಡೆಸಲಾಗಿದ್ದು, ಉಗ್ರರ  ಲಾಂಚ್ ಪ್ಯಾಡ್, , ತರಬೇತಿ ಕೇಂದ್ರ ಹಾಗೂ ಗೋಡೌನ್​ಗಳ ಮೇಲೆ ದಾಳಿ ನಡೆಸಲಾಗಿದೆ.  

- Advertisement -
operation Sindoor
operation Sindoor

operation Sindoor – justice served

ಜೈಶ್-ಎ-ಮೊಹಮ್ಮದ್ (ಜೆಇಎಂ), ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ಗೆ ಸಂಬಂಧಿಸಿದ ಒಂಬತ್ತು ಸ್ಪಾಟ್​ಗಳನ್ನು ಟಾರ್ಗೆಟ್ ಮಾಡಿ ದಾಳಿ ಡನೆಸಲಾಗಿದೆ.  ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಈ ದಾಳಿ ನಡೆಸಲಾಗಿದ್ದು, ಪಾಕಿಸ್ತಾನದ ಸರ್ಕಾರವೂ ಈ ದಾಳಿಯನ್ನು ದೃಢಿಕರಿಸಿದೆ. ಇನ್ನೂ ದಾಳಿಗೊಳಗಾದ ಪ್ರದೇಶಗಳ ಪೈಕಿ ಒಂಬತ್ತು ತಾಣಗಳಲ್ಲಿ ನಾಲ್ಕು ಪಾಕಿಸ್ತಾನದೊಳಗೆ ನೆಲೆಗೊಂಡಿದ್ದರೆ, ಉಳಿದ ಐದು ಪಿಒಕೆಯಲ್ಲಿವೆ . ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ನಡೆಸಿದೆ ದಾಳಿಯ ಪ್ರದೇಶಗಳ ಪಟ್ಟಿ ಹೀಗಿದೆ. 

 

  1. ಮರ್ಕಝ್ ಸುಭಾನ್ ಅಲ್ಲಾ, ಬಹವಾಲ್ಪುರ್ – ಜೆಎಂ
  2. ಮರ್ಕಝ್ ತೈಬಾ, ಮುರಿಡ್ಕೆ – LeT
  3. ಸರ್ಜಾಲ್, ತೆಹ್ರಾ ಕಲಾನ್ – ಜೆಎಂ
  4. ಮೆಹಮೂನಾ ಜೋಯಾ, ಸಿಯಾಲ್‌ಕೋಟ್ – ಎಚ್‌ಎಂ
  5. ಮರ್ಕಝ್ ಅಹ್ಲೆ ಹದೀಸ್, ಬರ್ನಾಲಾ – LeT
  6. ಮರ್ಕಝ್ ಅಬ್ಬಾಸ್, ಕೋಟ್ಲಿ – ಜೆಎಂ
  7. ಮಸ್ಕರ್ ರಹೀಲ್ ಶಾಹಿದ್, ಕೋಟ್ಲಿ – ಎಚ್.ಎಂ
  8. ಶವಾಯಿ ನಲ್ಲಾ ಕ್ಯಾಂಪ್, ಮುಜಫರಾಬಾದ್ – LeT
  9. ಸೈಯದ್ನಾ ಬಿಲಾಲ್ ಕ್ಯಾಂಪ್, ಮುಜಫರಾಬಾದ್ – ಜೆಎಂ

 

ಜೆಇಎಂ ಭದ್ರಕೋಟೆಯಾದ ಬಹವಾಲ್ಪುರ್ ಮತ್ತು ಮುರಿಡ್ಕೆಯಲ್ಲಿ ಎರಡು ದೊಡ್ಡ ದಾಳಿ ನಡೆಸಲಾಗಿದೆ.  ಪ್ರತಿ ಸ್ಥಳದಲ್ಲಿ  ಸರಿಸುಮಾರು  25–30 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.    ಇನ್ನೂ  ದಾಳಿಯ ನಂತರದ  ಭಾರತೀಯ ಸೇನೆಯು ಜಸ್ಟೀಸ್​ ಸರ್ವಡ್ ಎಂಬ ಘೋಷವ್ಯಾಕ್ಯವನ್ನು ನೀಡಿದೆ. ಇದರ ಅರ್ಥ “ನ್ಯಾಯ ಒದಗಿಸಲಾಗಿದೆ” ಈ ಸಂದೇಶದೊಂದಿಗೆ ಎಕ್ಸ್‌ ಅಕೌಂಟ್​ನಲ್ಲಿ ವೀಡಿಯೊವನ್ನು ರಿಲೀಸ್ ಮಾಡಲಾಗಿದೆ. ಇದೀಗ ಬಂದ ಮಾಹಿತಿ ಪ್ರಕಾರ, ದಾಳಿಯ ನಂತರ ಗಡಿಯಲ್ಲಿ ಭಾರೀ ಗುಂಡಿನ ಚಕಮಕಿ ನಡೆಯುತ್ತಿದೆ.  

 

ಆಪರೇಷನ್ ಸಿಂದೂರ್ ಏಕೆ 

 

ಏಪ್ರಿಲ್ 22 ರ ಪಹಲ್ಗಾಮ್ ದಾಳಿಯಲ್ಲಿ ಪುರಷರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಲಾಗಿತ್ತು. ಆ ಮೂಲಕ ಮೃತರ ಪತ್ನಿಯರ ಸಿಂಧೂರವನ್ನು ಕಳೆಯಲಾಗಿತ್ತು. ಇದೇ ಕಾರಣಕ್ಕೆ ಮೃತರ ಕುಟುಂಬದ ಗೃಹಿಣಿಯರನ್ನು ಗೌರವಿಸುವ ಸಲುವಾಗಿ ಈ ಕಾರ್ಯಾಚರಣೆಗೆ  ಆಪರೇಷನ್ ಸಿಂಧೂರ್ ಹೆಸರಿಡಲಾಗಿದೆ ಎನ್ನಲಾಗಿದೆ.      ಭಾರತೀಯ ಭೂ ಸೇನೆ, ನೌಕಾಪಡೆ ಮತ್ತು ವಾಯುಸೇನೆಯು ಜಂಟಿಯಾಗಿ ನಡೆಸಿದ ಕಾರ್ಯಾಚರಣೆ ಇದಾಗಿದೆ.   

Share This Article
Leave a Comment

Leave a Reply

Your email address will not be published. Required fields are marked *