bhadravati crime news : ಭದ್ರಾವತಿ ಕೊಲೆ ಕೇಸ್​, ಎಸ್​ಪಿ ಏನಂದ್ರು

bhadravati crime news : ಕ್ರಿಕೆಟ್ ವಿಚಾರಕ್ಕೆ ಓರ್ವನ ಕೊಲೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ  ಭದ್ರಾವತಿ ನಗರದಲ್ಲಿ  ನಡೆದಿದೆ. ಇನ್ನೊಬ್ಬ  ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಭದ್ರಾವತಿಯಲ್ಲಿ ನಡೆದ ಈ ಘಟನೆ ಬಗ್ಗೆ ಎಸ್ಪಿ ಮಿಥುನ್​ ಕುಮಾರ್​ ಮಾಹಿತಿ ನೀಡಿದ್ದಾರೆ. ನಿನ್ನೆ ಮದ್ಯಾಹ್ನ​ 1:30 ಸುಮಾರಿಗೆ ಕೆಲ ಹುಡುಗರು ಕ್ರಿಕೆಟ್​ ಆಡುತ್ತಿದ್ದರು. ಈ ವೇಳೆ ಅವರ ನಡುವೆ ಪರಸ್ಪರ ಜಗಳ ಉಂಟಾಗಿದೆ. ಆಗ  ಅರುಣ್​  ಎಂಬುವವನು ಸಚಿನ್​ ಎಂಬಾತನ ಕೆನ್ನಗೆ ಹೊಡೆದಿದ್ದಾನೆ. ಅದೇ ಸಿಟ್ಟಿಗೆ ಸಚಿನ್​ ಸೇರಿದಂತೆ ಇನ್ನಿತರೇ ಹುಡುಗರು ಅರಣ್​ನನ್ನು ರಾತ್ರಿ ಕರೆಸಿಕೊಂಡು ಚಾಕುವಿನಿಂದ ಎದೆಗೆ ಚುಚ್ಚಿದ್ದಾರೆ. ಇದರಿಂದಾಗಿ ಅರುಣ್​ ​ ಸಾವನ್ನಪ್ಪಿದ್ದಾನೆ  ಎಂದು ಎಸ್ ಪಿ  ಮಿಥುನ್ ಕುಮಾರ್ ಮಾಹಿತಿ ನೀಡಿದರು.

 

Leave a Comment