breaking news : ಲಾರಿ ಹಾಗೂ ಕಾರು ನಡುವೆ ಭೀಕರ ಅಪಘಾತ | ಸಾಗರ ಮೂಲದ ಐವರು ಸಾವು

breaking news : ಹುಬ್ಬಳ್ಳಿ ಸಮೀಪ ಕಿರೇಸೂರು ಕ್ರಾಸ್ ಬಳಿ ಲಾರಿ ಹಾಗೂ ಕಾರು ನಡುವೆ ಬೀಕರ ಅಪಘಾತ ಸಂಭವಿಸಿದ್ದು, ಸಾಗರ ಮೂಲದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಶ್ವೇತಾ (29), ಅಂಜಲಿ (26), ಸಂದೀಪ್ (26), ವಿಠಲ (55) ಮತ್ತು ಶಶಿಕಲಾ (40) ಮೃತ ದುರ್ದೈವಿಗಳು. 

ಹೋಟೆಲ್​ ವ್ಯಾಪಾರಕ್ಕೆಂದು ಕುಟುಂಬದ ಐವರು ಶಿವಮೊಗ್ಗದಿಂದ ಕಾರಿನಲ್ಲಿ ಬಾಗಲಕೋಟೆಗೆ ತೆರಳುತ್ತಿದ್ದರು, ಈ ವೇಳೆ ಅವರ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ಐವರು ಸ್ಥಳದಳಲ್ಲೇ ಸಾವನ್ನಪ್ಪಿದ್ದಾರೆ.

ಹುಬ್ಬಳ್ಳಿ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

Leave a Comment