sonu nigam kannada / ಸೋನು ನಿಗಮ್​ ವಿರುದ್ಧ FIR , ಇಮೇಲ್​ನಲ್ಲಿ ನೋಟಿಸ್​!

Malenadu Today

sonu nigam kannada / ಕನ್ನಡವೆಂದರೆ ಪ್ರಾಣ ಎನ್ನುತ್ತಿದ್ದ ಹಾಡುಗಾರ ಸೋನು ನೀಗಮ್​ ಇದೀಗ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಕನ್ನಡಿಗರ ಬಗ್ಗೆ ಹೇಳಿಕೆ ಒಂದನ್ನು ನೀಡಿದ್ದ ಅವರು, ಅದರ ಬೆನ್ನಲ್ಲೆ ಸ್ಪಷ್ಟನೆ ನೀಡಲು ಹೋಗಿ ಇನ್ನಷ್ಟು ಯಡವಟ್ಟು ಮಾಡಿಕೊಂಡಿದ್ದಾರೆ. ಈ ಸಂಬಂಧ ಅವರ ವಿರದ್ದ ದಾಖಲಾಗಿರುವ ದೂರಿನನ್ವಯ ಪೊಲೀಸರು ನೋಟಿಸ್​ ನೀಡಲು ಮುಂದಾಗಿದ್ದಾರೆ.  

sonu nigam kannada / ಬೆಂಗಳೂರಿನಲ್ಲಿ ಎಫ್​ಐಆರ್

ಕಾರ್ಯಕ್ರವೊಂದರಲ್ಲಿ ಸೋನು ನೀಗಮ್​  ಅಭಿಮಾನಿಯೊಬ್ಬರ ಕನ್ನಡಾಭಿಮಾನವನ್ನು ಪಹಲ್ಗಾಮ್‌ ಘಟನೆಗೆ ಹೋಲಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಂತೆ  ಬಾಲಿವುಡ್ ಗಾಯಕ ಸೋನು ನಿಗಮ್‌ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಆವಲಹಳ್ಳಿ ಠಾಣೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಇ ಮೇಲ್ ಅಥವಾ ನೋಂದಾಯಿತ ಅಂಚೆ ಮೂಲಕ ಎರಡು ದಿನದೊಳಗೆ ನೋಟಿಸ್ ಜಾರಿ ಮಾಡುವ ಸಾದ್ಯತೆ ಇದೆ ಎನ್ನಲಾಗಿದೆ.

Share This Article