K S Eshwarappa | ಪಾಕಿಸ್ತಾನ ಕಾಶ್ಮೀರದಲ್ಲಿ ಈ ರೀತಿಯ ಕುಕ್ಕೃತ್ಯವನ್ನು ಮಾಡುವ ಮೂಲಕ ತನ್ನ ಶವ ಪೆಟ್ಟಿಗೆಗೆ ತಾನೇ ಕೊನೆಯ ಮೊಳೆ ಹೊಡೆದುಕೊಂಡಿದೆ ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಹೇಳಿದರು.
ಕೆ ಎಸ್ ಈಶ್ವರಪ್ಪ ಕಾಶ್ಮೀರದಲ್ಲಿ ಭಯೋದ್ಪಾದಕರ ದಾಳಿಗೆ ಒಳಗಾಗಿ ಸಾವನ್ನಪ್ಪಿದ ಶಿವಮೊಗ್ಗದ ಮಂಜುನಾಥ್ ರಾವ್ ರವರ ಮನೆಗೆ ಗುರುವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು. ಪಾಕಿಸ್ತಾನದ ಭಯೋತ್ಪಾದಕರು 27 ಜನರನ್ನು ಕಗ್ಗೊಲೆ ಮಾಡಿದ್ದು ಬಹಳ ನೋವಾಗಿದೆ. ಈ ಕುರಿತಾಗಿ ಎರಡೇ ಗಂಟೆಯಲ್ಲಿ ಕೇಂದ್ರ ಸರ್ಕಾರ ಒಳ್ಳೆಯ ತೀರ್ಮಾನ ತೆಗೆದುಕೊಂಡಿದೆ. ದೇಶದ್ರೋಹಿ ಪಾಕಿಸ್ತಾನಕ್ಕೆ ನೀರು ಬಿಡದಿರಲು ತೀರ್ಮಾನ ಮಾಡಿದ್ದನ್ನು ಇಡೀ ಅಖಂಡ ಭಾರತವೇ ಸ್ವಾಗತಿಸಿದೆ. ಕಾಂಗ್ರೆಸ್ ನ ನಾಯಕರು ಈಗ ದೇಶದ ಜೊತೆ ನಿಲ್ಲಬೇಕು. ಈ ಭಯೋತ್ಪಾದಕ ಕೃತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ತಕ್ಕ ಉತ್ತರ ನೀಡಿದ್ದಾರೆ ಎಂದರು.
K S Eshwarappa : ಮೃತರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು
ಭಯೋದ್ಪಾದಕರ ದಾಳಿಯಲ್ಲಿ ಮೃತ ಪಟ್ಟ ಕರ್ನಾಟಕದ ಕುಟುಂಬಕ್ಕೆ ಸಿ ಎಂ ಸಿದ್ದರಾಮಯ್ಯ 10 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ. ಈ ವೇಳೆ ನಾನು ಸಿದ್ದರಾಮಯ್ಯನವರ ತೀರ್ಮಾನವನ್ನು ಟೀಕಿಸುವುದಿಲ್ಲ. ಆದರೆ ಕೇರಳದ ವಯನಾಡಿನಲ್ಲಾದ ದುರಂತಕ್ಕೆ ಅಲ್ಲಿನ ಸರ್ಕಾರ 25 ಲಕ್ಷ ರೂ. ಘೋಷಣೆ ಮಾಡಿತ್ತು. ಅದೇ ರೀತಿ ಈ ಘಟನೆಯಲ್ಲಿ ಮಡಿದವರಿಗೂ 25 ಲಕ್ಷ ರೂ. ಘೋಷಿಸಲಿ ಎಂದು ಒತ್ತಾಯಿಸಿದರು.

