SHIVAMOGGA | Jan 26, 2024 | ಶಿವಮೊಗ್ಗ ಟ್ರಾಫಿಕ್ ಪೊಲೀಸರು ಒಂದು ಬಸ್ ಹಾಗೂ ಒಂದು ಬೈಕ್ಗೆ ಬರೋಬ್ಬರಿ 38500 ರೂಪಾಯಿ ದಂಡ ವಿಧಿಸಿರುವ ಬಗ್ಗೆ ಈಗಷ್ಟೆ ಸುದ್ದಿಯನ್ನು ಮಲೆನಾಡು ಟುಡೆಯಲ್ಲಿ ಓದಿರಿರುತ್ತೀರಿ. ಅದರ ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ : Shimoga Traffic Police Fine Check | ಶಿವಮೊಗ್ಗ ಟ್ರಾಫಿಕ್ ಪೊಲೀಸರ ರೆಕಾರ್ಡ್ ಬ್ರೇಕ್ |ಹಾಕಿದ್ರು 38,500 ರೂಪಾಯಿ ಫೈನ್

ಇದು ಶಿವಮೊಗ್ಗ ಸಂಚಾರಿ ಪೊಲೀಸರ ರಿಸೆಂಟ್ ರೆಕಾರ್ಡ್ ಆದರೆ ಈ ದುಬಾರಿ ದಂಡ ಹೊಸವರ್ಷದ ಆರಂಭದಲ್ಲಿಯೇ ಶುರುವಾಗಿತ್ತು. ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಹೆಲ್ಮೆಟು, ಲೈಸೆನ್ಸು ಇಲ್ಲದೆ ಶಿವಮೊಗ್ಗ ನಂದು ಅಂತಾ ಓಡಾಡುತ್ತಿದ್ದ ಬೈಕ್ ವೊಂದಕ್ಕೆ ಬರೋಬ್ಬರಿ 17 ಸಾವಿರ ಚಿಲ್ಲರೆ ಬಿಲ್ ಹರಿದಿದ್ದರು. ಅದರ ಸುದ್ದಿ ನಿಮ್ಮ ಮಲೆನಾಡು ಟುಡೆ ಯಲ್ಲಿ : ಶಿವಮೊಗ್ಗ ಟ್ರಾಫಿಕ್ ಪೊಲೀಸರಿಂದ ಡಿಯೋ ಗಾಡಿಗೆ 17 ಸಾವಿರ ರೂಪಾಯಿ ದಂಡ! ರಸೀದಿ ಉದ್ದ ನೋಡಿ ಅಚ್ಚರಿ!

ಹೀಗೆ ವರ್ಷದ ಆರಂಭದಲ್ಲಿ 17 ಸಾವಿರ ರೂಪಾಯಿ ಫೈನ್ ಹಾಕಿದ್ದ ಬಿಳಿಬಟ್ಟೆ ಪೊಲೀಸರು ಆನಂತರ ಜನವರಿ 15 ರಂದು ಬೈಕ್ ಒಂದಕ್ಕೆ 9500 ದಂಡ ವಿಧಿಸಿದ್ದರು. ಸ್ಕೂಟಿ KA14EV****ಮೇಲೆ ವಿತೌಟ್ ಹೆಲ್ಮೆಟ್ ,ಸಿಗ್ನಲ್ ಜಂಪ್ ತ್ರಿಬಲ್ ರೈಡಿಂಗ್ ಸೇರಿದಂತೆ ಒಟ್ಟು 09 ಸಂಚಾರ ನಿಮಯ ಉಲ್ಲಂಘಿಸಿದ್ದ ಆರೋಪದಡಿಯಲ್ಲಿ ₹ 9500/- ದಂಡ ವಿಧಿಸಿದ್ದರು.
ಇವೆಲ್ಲದರ ಜೊತೆಯಲ್ಲಿ ಇದೀಗ ಮತ್ತೆ ಎರಡು ಬೈಕ್ಗಳಿಗೆ ದಂಡ ಹಾಕಿದ್ದಾರೆ . ಸಂತೋಷ್ ಕುಮಾರ್ ಸಿ.ಪಿ.ಐ ನೇತೃತ್ವದಲ್ಲಿ ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ತಿರುಮಲೇಶ್ ಪಿಎಸ್ಐ, ನವೀನ್ ಮಠಪತಿ ಪಿಎಸ್ಐ ಮತ್ತವರ ತಂಡ 2 ಬೈಕ್ಗಳಿಗೆ ಸೇರಿ ಬರೋಬ್ಬರಿ 36500 ರೂಪಾಯಿ ದಂಡ ವಿಧಿಸಿದೆ. ವಿಶೇಷ ಅಂದರೆ, ಈ ಮೂಲಕ ಒಂದೇ ದಿನ ಬರೋಬ್ಬರಿ 1 ಬಸ್, ಮೂರು ಬೈಕ್ ಸೇರಿ 75 ಸಾವಿರ ರೂಪಾಯಿ ದಂಡ ಕಲೆಕ್ಟ್ ಮಾಡಲಾಗಿದೆ.
ಇದಷ್ಟೆ ಅಲ್ಲದೆ ಇತ್ತೀಚೆಗ ಬಸ್ ಚಾಲಕ ಮೊಬೈಲ್ ನಲ್ಲಿ ಮಾತನಾಡ್ತಾ ಡ್ರೈವ್ ಮಾಡ್ತಿದ್ದಿದ್ದನ್ನ ಹಿಂದಿನ ಸೀಟ್ನವರು ಫೋಟೋ ತೆಗೆದು ಕಳುಹಿಸಿದ್ದಕ್ಕೆ ಶಿವಮೊಗ್ಗ ಪೊಲೀಸರು ಫೋಟೋ ಆಧಾರವಾಗಿ ಇಟ್ಟುಕೊಂಡು ಚಾಲಕನಿಗೆ 5000 ಫೈನ್ ಹಾಕಿದ್ದರು
ದಿ 23-12-2023 ರಂದು ಸವಳಂಗ ರಸ್ತೆಯಲ್ಲಿ ಶಶಿಕುಮಾರ್ ಸಿಟಿ ಬಸ್ ಚಾಲಕ ಮೊಬೈಲ್ ನಲ್ಲಿ ಮಾತನಾಡಿಕೊಂಡು ಬಸ್ ಚಾಲನೆ ಮಾಡುತ್ತಿರುವುದನ್ನು ಚಾಲಕನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕರು ಪೋಟೋ ತೆಗೆದು ಪೊಲೀಸರಿಗೆ ಕಳುಹಿಸಿದ್ದು ಸಂಚಾರ ನಿಯಮ ಉಲ್ಲಂಘನೆ ಮಾಡಿದ ಚಾಲಕ ಚೇತನ್ ಗೆ ರೂ 5,000/- ದಂಡ ವಿಧಿಸಿ ಕ್ರಮ ಕೈಗೊಂಡಿರುತ್ತಾರೆ. pic.twitter.com/F01hBUg7wW
— Shivamogga Traffic Police (@Shimoggatraffic) December 24, 2023
ಒಟ್ಟಾರೆ ಶಿವಮೊಗ್ಗ ಸಂಚಾರಿ ಪೊಲೀಸರು ಘನ ಸರ್ಕಾರಕ್ಕೆ ಆದಾಯ ತಂದುಕೊಡುವುದರಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದಾರೆ. ಕೇವಲ ಆರು ವಾಹನಗಳಲ್ಲಿ ಒಂದು ಲಕ್ಷ ರೂಪಾಯಿ ದಂಡವನ್ನ ಜಸ್ಟ್ ಒಂದು ತಿಂಗಳಿನಲ್ಲಿ ಸಂಗ್ರಹಿಸಿರುವ ಪೊಲೀಸರು ತಮ್ಮ ಕೆಲಸದ ಮೂಲಕ ರೂಲ್ಸ್ ಬ್ರೇಕ್ ಮಾಡುವವರಿಗೆ ಸ್ಪಷ್ಟ ಸಂದೇಶವನ್ನು ರವಾನೆ ಮಾಡಿದ್ದಾರೆ. ಶಿವಮೊಗ್ಗ ಟ್ರಾಫಿಕ್ನಲ್ಲಿ ಬೇಕಾಬಿಟ್ಟಿಯಾಗಿ ಚಲಿಸಬೇಡಿ, ಕಂಡವರ ಕೈಗೆ ಬೈಕ್ ಕೊಡಬೇಡಿ, ಮಕ್ಕಳಿಗೆ ಕೀ ಕೊಟ್ಟು ಕಳಿಸಬೇಡಿ, ಅಷ್ಟೆಅಲ್ಲ ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸೋದು, ಸಿಗ್ನಲ್ನಲ್ಲಿ ಜಂಪ್ ಮಾಡೋದು, ರಾಂಗ್ ರೂಟು, ಓವರ್ ಸ್ಪೀಡು, ರೋಡ್ ಸ್ಟಂಟು ಮಾಡೋದ್ರಿಂದ ಮಜಾ ಸಿಗಬಹುದು. ಆದರೆ ಕ್ಯಾಮರಾ ಕಣ್ಣುಗಳು ಹಾಕುವ ದಂಡದಿಂದ ತಪ್ಪಿಸಿಕೊಳ್ಳುವುದಕ್ಕೆ ಚಾನ್ಸೆ ಇಲ್ಲ ಎನ್ನುವುದಕ್ಕೆ ಪೊಲೀಸರು ಹೂವು ಲೆಕ್ಕ ಹಾಕುವ ಮಾರಿನಷ್ಟು ಉದ್ದದ ರಸೀದಿಗಳನ್ನ ಹರಿಯುತ್ತಿರುವುದೇ ಸಾಕ್ಷಿಯಾಗಿದೆ.
