KARNATAKA NEWS/ ONLINE / Malenadu today/ May 18, 2023 SHIVAMOGGA NEWS PAPER ONLINE
ಶಿವಮೊಗ್ಗ/ ಸಕ್ರೆಬೈಲ್ ಆನೆ ಬಿಡಾರ (Sakrebail Elephant Camp) ನಲ್ಲಿ ನಡೆದ ಕವಾಡಿಗರ ಹುದ್ದೆಯ ಸಂದರ್ಶನ ಸಾಕಷ್ಟು ಕುತೂಹಲ ಮೂಡಿಸಿತ್ತು.
ಇಬ್ಬರಿಗೂ ಅಧಿಕಾರ! ಫೈನಲ್ ಆಯ್ತು ಆಯ್ಕೆ! ಇವತ್ತು ಅಧಿಕೃತ! 20ಕ್ಕೆ ಪ್ರಮಾಣ! ಸಿದ್ದರಾಮಯ್ಯ ಸಿಎಂ! ಡಿಕೆ ಶಿವಕುಮಾರ್ ಡಿಸಿಎಂ
ಪದವೀಧರರ ಅರ್ಜಿ
ವಿದ್ಯಾರ್ಹತೆಯ ಮಿತಿಯನ್ನ ಹೊಂದಿಲ್ಲದ ಈ ಹುದ್ದೆಗಳಿಗೆ ಪದವಿ ಹಾಗೂ ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದವರು ಅರ್ಜಿ ಅಲ್ಲಿಸಿ ಸಂದರ್ಶನಕ್ಕೆ ಹಾಜರಾಗಿದ್ದರು. ಬಿಎಡ್ ಪದವಿದರರು ಸಹ ಸಂದರ್ಶನಕ್ಕೆ ಹಾಜರಾಗಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳನ್ನ ಅಚ್ಚರಿಗೊಳಿಸಿತ್ತು.
ಶಿವಮೊಗ್ಗ ಕೇಂದ್ರ ಕಾರಾಗೃಹ ಸಿಬ್ಬಂದಿಗೆ ಕೈದಿಯಿಂದ ಧಮ್ಕಿ!
ಸರ್ಕಾರಿ ಕೆಲಸವೆಂದುಕೊಂಡ ಅಭ್ಯರ್ಥಿಗಳು
ಮತ್ತೆ ಕೆಲವರು ಸಂದರ್ಶನದ ಬಳಿಕ ತಮಗೆ ಆನೆ ಪಳಗಿಸುವ ಟ್ರೈನಿಂಗ್ ನೀಡಲಾಗುತ್ತೆ ಎಂದುಕೊಂಡೆ ಬಂದಿದ್ದರು. ಅಸಲಿಗೆ ಅಧಿಸೂಚಿತ ಅರಣ್ಯ ಪ್ರದೇಶದಲ್ಲಿರುವ ಅಭ್ಯರ್ಥಿಗಳು ಆನೆಯ ನಿರ್ವಹಣೆ ಬಗ್ಗೆ ತಿಳಿದುಕೊಂಡಿರಬೇಕು ಎಂದು ಅರಣ್ಯ ಇಲಾಖೆ ಸಂದರ್ಶನದ ಷರತ್ತನ್ನ ವಿಧಿಸಿತ್ತು. ಇದು ಅಭ್ಯರ್ಥಿಗಳಿಗೆ ಕಷ್ಟ..ಕಷ್ಟ ಎನಿಸಿತ್ತು.
ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಕಠಿಣ ಕ್ರಮ ಕೈಗೊಳ್ಳುವಂತೆ ಶಾರದಾ ಅಪ್ಪಾಜಿ ಮನವಿ! ಕಾರಣ?
ಅಭ್ಯರ್ಥಿಗಳ ಮಾತು ಕೇಳದ ಆನೆಗಳು
ಇಂಟರ್ವ್ಯೂನ ಭಾಗವಾಗಿ ಅಭ್ಯರ್ಥಿಗಳು ಆನೆಗೆ ಅಭ್ಯರ್ಥಿಗಳು ಸೂಚನೆ ಕೊಡಬೇಕಿತ್ತು. ಆದರೆ ಅಭ್ಯರ್ಥಿಗಳ ಸೂಚನೆಯನ್ನು ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಆನೆ ಬಹುತೇಕ ಪಾಲಿಸಲಿಲ್ಲ. ಸೂಚನೆಯ ಪದಗಳನ್ನ ಅಭ್ಯರ್ಥಿಗಳು ಬಾಯಿಪಾಠ ಮಾಡಿಕೊಂಡು ಆನೆ ಮುಂದೆ ಒಪ್ಪಿಸಿದ್ದಾರೆ. ಆದರೆ ಆನೆ ಮಾತ್ರ ಯಾವುದಕ್ಕೂ ಸೊಪ್ಪು ಹಾಕಲಿಲ್ಲ.
ಶಿವಮೊಗ್ಗದಲ್ಲಿ ಶಾಂತಿ ನೆಲಸಬೇಕು!’ ನೂತನ ಶಾಸಕ ಚೆನ್ನಬಸಪ್ಪನವರ ಉತ್ತರವೇನು?
ಆಯ್ಕೆಯಾಗದ ಅಭ್ಯರ್ಥಿಗಳು
ಒಟ್ಟು ರಾಜ್ಯದ ವಿವಿಧ ಬಿಡಾರಗಳಲ್ಲಿ 21 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದರೇ, ಶಿವಮೊಗ್ಗ ಸಕ್ರೆಬೈಲ್ ಆನೆ ಬಿಡಾರದಲ್ಲಿ ನಾಲ್ಕು ಹುದ್ದೆ 311 ಅರ್ಜಿ ಸಲ್ಲಿಕೆಯಾಗಿತ್ತು. ಈ ಪೈಕಿ 68 ಮಂದಿ ಸಂದರ್ಶನ ಹಾಗೂ ಪ್ರಾಯೋಗಿಕ ಪರೀಕ್ಷೆಗೆ ಅರ್ಹರಾಗಿದ್ದರು. ಆದರೆ ಬಹುತೇಕರು ಆನೆಯನ್ನು ಮಾತಿನಿಂದ ಒಲಿಸುವ ಪರೀಕ್ಷೆಯಲ್ಲಿ ನಪಾಸಾದರು.
ಬೆಟ್ಟದಿಂದ 20 ಸಲ ಉರುಳಿ, 100 ಅಡಿ ಕೆಳಕ್ಕೆ ಬಿದ್ದ ಕಾರು! ನಾಲ್ವರ ಸ್ಥಿತಿ ಗಂಭೀರ
ಚಿಕ್ಕಮಗಳೂರು/ ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಕಾರೊಂದು ನೂರು ಅಡಿ ಆಳಕ್ಕೆ ಬಿದ್ದಿದೆ. ಪರಿಣಾಮ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ನಾಲ್ವರ ಸ್ಥಿತಿಯು ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿಯ ಕವಿಕಲ್ ಗಂಡಿ ಬಳಿ ಈ ಘಟನೆ ನಡೆದಿದೆ.
ಶಿವಮೊಗ್ಗ ಕೇಂದ್ರ ಕಾರಾಗೃಹ ಸಿಬ್ಬಂದಿಗೆ ಕೈದಿಯಿಂದ ಧಮ್ಕಿ!
ಹೇಗಾಯ್ತು!?
ಮುಳ್ಳಯ್ಯನಗಿರಿ ಕವಿಕಲ್ ಬಂಡಿ ಬಳಿ ಬರುತ್ತಿದ್ದ ಕಾರು ತುಸು ವೇಗದಲ್ಲಿತ್ತು.ಇದ್ದಕ್ಕಿದ್ದ ಹಾಗೆ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು, ಪಕ್ಕದಲ್ಲಿನ ಏರಿಗೆ ಗುದ್ದಿದೆ. ಅಲ್ಲಿಂದ ನೇರವಾಗಿ ಕಂದಕಕ್ಕೆ ಉರುಳಿದೆ. ಬರೋಬ್ಬರಿ 100 ಅಡಿಗೂ ಹೆಚ್ಚು ಆಳವಿದ್ದ ಕಂದಕಕ್ಕೆ ಉರುಳಿ ಬಿದ್ದ ಕಾರು, ಸರಿಸುಮಾರು 20 ಸಲ ಪಲ್ಟಿಯಾಗಿರಬಹುದು ಎಂದು ಸ್ಥಳೀಯರು ಹೇಳುತ್ತಾರೆ.
ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಕಠಿಣ ಕ್ರಮ ಕೈಗೊಳ್ಳುವಂತೆ ಶಾರದಾ ಅಪ್ಪಾಜಿ ಮನವಿ! ಕಾರಣ?
ಕಾರಿನಲ್ಲಿ ಮೈಸೂರು ಜಿಲ್ಲೆ ಕೆ.ಆರ್ ನಗರ ನಿವಾಸಿಗಳು ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಈ ಘಠನೆ ಸಂಭವಿಸಿದೆ. ಘಟನೆಯ ತೀವ್ರತೆಗೆ ನಾಲ್ವರು ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಷಯ ತಿಳಿದು ಸ್ಥಳೀಯರು ಹಾಗೂ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಗಾಯಾಳುಗಳನ್ನ ಸ್ಥಳಾಂತರಿಸಿ, ಚಿಕಿತ್ಸೆ ಒದಗಿಸಿದ್ದಾರೆ.
Malenadutoday.com Social media
