SHIVAMOGGA | MALENADUTODAY NEWS | ಮಲೆನಾಡು ಟುಡೆ Feb 1, 2025
ಉತ್ತರ ಕನ್ನಡ ಜಿಲ್ಲೆ ಕೋರ್ಟ್‌ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ನಿವಾಸಿಯೊಬ್ಬನನ್ನು ಭಟ್ಕಳ ಪೊಲೀಸರು ಅರೆಸ್ಟ್ ಮಾಡಿ ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ. ಈತನ ವಿರುದ್ಧ ಶಿವಮೊಗ್ಗವೂ ಸೇರಿದಂತೆ ಹಲವೆಡೆ ಕೇಸ್‌ಗಳಿವೆ ಎಂಬ ವಿಚಾರ ಹೊರಬಿದ್ದಿದೆ.
ಭಟ್ಕಳ, ಮುರುಡೇಶ್ವರ,
ಇಲ್ಲಿನ JMFC ಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾಗಬೇಕಿದ್ದ ಫಾರುಖ ಎಂಬಾತ ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದ. ಈತನ ವಿರುದ್ಧ ಕೋರ್ಟ್ ವಾರಂಟ್ ಹಿಡಿದು ಸರ್ಚ್ ಮಾಡುತ್ತಿದ್ದ ಪೊಲೀಸರಿಗೆ ಆರೋಪಿ ಕೊನೆಗೆ ಮುರುಡೇಶ್ವರದ ಬಳಿ ಸಿಕ್ಕಿಬಿದ್ದಿದ್ದಾನೆ. ಜಾನುವರಾ ಕಳ್ಳತನ, ಕಳ್ಳತನ, ಸೇರಿದಂತೆ ಭಟ್ಕಳ, ಹೊಸನಗರ , ಶಿವಮೊಗ್ಗ, ಶಿರಾಳಕೊಪ್ಪ, ಸೊರಬ, ಶಿಕಾರಿಪುರ, ತೀರ್ಥಹಳ್ಳಿ ಹಾಗೂ ಹಿರೇಕರೂರು ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದೆ.
ಸುಮಾರು 28 ವರುಷದ ಆರೋಪಿ ವಿರುದ್ಧ ಸುಮಾರು 15 ಕ್ಕೂ ಹೆಚ್ಚು ಕೇಸ್‌ಗಳಿವೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೀರ್ಘಕಾಲದ ನಾಪತ್ತೆ ಆರೋಪಿ ಈತನಾಗಿದ್ದಾನೆ. ಸದ್ಯ ಆರೋಪಿಯನ್ನು ಕೋರ್ಟ್‌ಗೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಪೊಲೀಸರು. ಆತನನ್ನು ವಶಕ್ಕೆ ಪಡೆದು ಇನ್ನಷ್ಟು ವಿಚಾರಣೆ ನಡೆಸಲು ಮುಂದಾಗಿದ್ದಾರೆ.
SUMMARY | accused wanted by the police of Bhatkal, Hosanagar, Shivamogga, Shiralakoppa, Soraba, Shikaripura, Thirthahalli, Hirekerur police stations was arrested in Murudeshwar.
KEY WORDS | police of Bhatkal, Hosanagar, Shivamogga, Shiralakoppa, Soraba, Shikaripura, Thirthahalli, Hirekerur police stations, arrested in Murudeshwar