SHIVAMOGGA | MALENADUTODAY NEWS | ಮಲೆನಾಡು ಟುಡೆ Dec 15, 2024
ಶಿವಮೊಗ್ಗದ ವ್ಯಕ್ತಿಯೊಬ್ಬರ ವಿಚ್ಚೆದನ ಪ್ರಕರಣದ ಸಂಬಂಧ ಹೈಕೋರ್ಟ್ ಪತಿಗೆ ದಂಡ ವಿಧಿಸಿದ ಪ್ರಸಂಗವೊಂದು ನಡೆದಿದೆ. ಅಪರೂಪದ ಈ ಪ್ರಸಂಗದಲ್ಲಿ ವ್ಯಕ್ತಿಯೊಬ್ಬರು ಈಗಾಗಲೇ ಇಬ್ಬರು ಪತ್ನಿಯರಿಗೆ ವಿಚ್ಛೇದನ ನೀಡಿದ್ದರು. ಆ ನಿಜವನ್ನು ಮುಚ್ಚಿಟ್ಟು ಮೂರನೇ ಮದುವೆಯಾಗಿ ಆಕೆಗೂ ವಿಚ್ಛೇದನ ಕೋರಿದ್ದರು .ಇದೇ ಕಾರಣಕ್ಕೆ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದ ಪತಿರಾಯನಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ.
ಶಿವಮೊಗ್ಗ ಮೂಲದ ವ್ಯಕ್ತಿಯೊಬ್ಬರು ತಮ್ಮ ಪತ್ನಿ ವಿರುದ್ಧ ಕಿರುಕುಳದ ಆರೋಪ ನೀಡಿ ವಿಚ್ಚೇದನ ಕೋರಿದ್ದರು. ಮದುವೆಯಾಗಿ ನಾಲ್ಕು ತಿಂಗಳಲ್ಲೆ ಈ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ತಮ್ಮ ಪತ್ನಿ ವಿರುದ್ಧ ಹಲವು ಆರೋಪ ಮಾಡಿದ್ದರು. ಈ ಸಂಬಂಧ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ನ್ಯಾಯಮೂರ್ತಿ ಅನು ಸಿವರಾಮನ್ ಮತ್ತು ನ್ಯಾ.ಉಮೇಶ್ ಅಡಿಗ ಅವರಿದ್ದ ವಿಭಾಗೀಯ ಪೀಠ ಪ್ರಕರಣದಲ್ಲಿ ಅರ್ಜಿದಾರು ತಪ್ಪು ಮಾಹಿತಿ ನೀಡಿದ್ದರಷ್ಟೆ ಅಲ್ಲದೇ ಅಸ್ಪಷ್ಟ ಹಾಗೂ ಅಸಹಜ ಆರೋಪ ಮಾಡಿದ್ದಾರೆ. ಮೇಲಾಗಿ ಅವರು ಎರಡು ಮದುವೆಯಾಗಿರುವುದನ್ನ ಸಹ ಮುಚ್ಚಿಟ್ಟಿದ್ದಾರೆ. ಈ ನಿಟ್ಟಿನಲ್ಲಿ 25 ಸಾವಿರ ರೂಪಾಯಿ ದಂಡ ವಿಧಿಸಿ ಆ ಹಣವನ್ನು ಅರ್ಜಿದಾರರ ಪತ್ನಿಗೆ ನೀಡುವಂತೆ ಸೂಚಿಸಿದೆ.
SUMMARY | A man from Shivamogga was fined by a division bench of the High Court in a divorce case.

KEY WORDS | man from Shivamogga was fined , division bench ,High Court , divorce case.